ಮೈಸೂರು

ಮತಯಂತ್ರದ ಮೂಲಕ ವಿದ್ಯಾರ್ಥಿ ಸಂಘಕ್ಕೆ ಆಯ್ಕೆ

Published On :

ಮೈಸೂರು: ನಗರದ ದಟ್ಟಗಳ್ಳಿಯಲ್ಲಿರುವ ಕೌಟಿಲ್ಯ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ ಮತಯಂತ್ರದ ಮೂಲಕ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಆಧುನಿಕ ಚುನಾವಣಾ ವ್ಯವಸ್ಥೆಯಲ್ಲಿ ಬಳಕೆಯಲ್ಲಿರುವ ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ತಮ್ಮ ಮತವನ್ನು ಚಲಾಯಿಸುವ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಈ ಬಾರಿ ವಿದ್ಯಾರ್ಥಿ ಪ್ರತಿನಿಧಿಗಳ ಪಟ್ಟಿಯನ್ನು ಅವರುಗಳ ಫೋಟೋ ಸಮೇತ ಕಂಪ್ಯೂಟರ್ನಲ್ಲಿ ಸಿದ್ಧಪಡಿಸಲಾಗಿತ್ತು. ಪ್ರತಿ ವಿದ್ಯಾರ್ಥಿಯೂ ತನ್ನ ಆಯ್ಕೆಯ ಪ್ರತಿನಿಧಿಗಳಿಗೆ ಕಂಪ್ಯೂಟರ್ ಮೂಲಕವೇ ಮತ ಚಲಾಯಿಸುವ ವಿನೂತನ ಪದ್ಧತಿಯನ್ನು ಪರಿಚಯಿಸಲಾಗಿದ್ದು ಈ ಬಾರಿಯು ಶಾಲಾ ಚುನಾವಣೆಯ ವಿಶೇಷವಾಗಿತ್ತು. 4ನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಮತದಾನದಲ್ಲಿ ಹುಡುಗರ ವಿಭಾಗದ ಮುಖ್ಯಸ್ಥನ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಂ.ಆರ್. ಹೃತಿಕ್, ಸಿ.ಕೆ. ಜೀವನ್, ಪ್ರಮಥ  ವಿ. ನಾರಾಯಣ ಇವರಲ್ಲಿ ಸಿ.ಕೆ. ಜೀವನ್ ಹಾಗೂ ಬಾಲಕಿಯರ ವಿಭಾಗದಲ್ಲಿ ವೈ. ರಕ್ಷಿತಾ ಪಟೇಲ್, ಕೆ. ರಕ್ಷಿತ, ಟಿ.ಎಂ. ರೇವತಿ, ಬೃಂದ ಸತೀಶ್ ಅವರಲ್ಲಿ ಬೃಂದ ಸತೀಶ್ ಆಯ್ಕೆಯಾದರು. ಉಳಿದಂತೆ ವಿವಿಧ ಸಮಿತಿಗಳಿಗೆ ಎ.ಎಸ್. ದಕ್ಷಿತ್, ಎಸ್. ದೈವಿಕ್ ಆಯ್ಕೆಯಾದರು. ಈ ಸಾಲಿನ ಚುನಾವಣಾ ಸಮಿತಿಯ ಉಸ್ತುವಾರಿಯನ್ನು ಶಿಕ್ಷಕ ಮೊಹಮ್ಮದ್ ಹುಮಾಯೂನ್, ದಿವ್ಯ ವಹಿಸಿಕೊಂಡಿದ್ದರು. ವಿದ್ಯಾಲಯದ ಅಧ್ಯಕ್ಷ ಆರ್. ರಘು, ಪ್ರಾಂಶುಪಾಲೆ ಎಲ್. ಸವಿತಾ ಇದ್ದರು.    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.