ತಾಲೂಕಿಗೊಂದು ಶವ ಸಾಗಿಸುವ ವಾಹನ: ಗೋ.ಮಧುಸೂದನ
ಟಿ. ನರಸೀಪುರ: ನಾಗರಿಕನ ಅಂತ್ಯ ಸಂಸ್ಕಾರ ಗೌರವಯುತವಾಗಿ ನಡೆಯಲೆಂದು ಸಾರ್ವಜನಿಕರ ಬಳಕೆಗಾಗಿ ಶವ ಸಾಗಿಸಲು ಜಿಲ್ಲೆ ಹಾಗೂ ತಾಲ್ಲೂಕಿಗೊಂದು ವಾಹನ ನೀಡುತ್ತಿರುವುದಾಗಿ ವಿಧಾನ ಪರಿಷತ್ ಸದಸ್ಯ ಗೋ. ಮಧುಸೂದನ್ ಹೇಳಿದರು.
ಪಪಂ ಆವರಣದಲ್ಲಿ ಸೋಮವಾರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಸಾರ್ವಜನಿಕರ ಬಳಕೆಗೆ ಪಪಂಗೆ ಶವ ಸಾಗಿಸುವ ವಾಹನವನ್ನು ಹಸ್ತಾಂತರಿಸಿ ಮಾತನಾಡಿದ ಅವರು, ಸಾವಿನಲ್ಲೂ ಶೋಷಣೆ ಆಗುವುದನ್ನು ಹತ್ತಿರದಿಂದಲೆ ಕಂಡು ಬೇಸರವಾದ್ದರಿಂದ ವಿಧಾನ ಪರಿಷತ್ ಸದಸ್ಯರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಶವ ಸಾಗಿಸಲು ಟೆಂಪೋ ಟ್ರಾವೆಲ್ಸ್ ಹಾಗೂ ಮಾರುತಿ ಓಮಿನಿ ವಾಹನ ನೀಡುತ್ತಿದ್ದೇನೆ ಎಂದರು.
ನಿರ್ವಹಣೆ ಸಮರ್ಪಕವಾಗಿ ಇರಬೇಕೆಂದು ಪಪಂಗೆ ಶವ ಸಾಗಿಸುವ ವಾಹನ ಹಸ್ತಾಂತರಿಸಲಾಗುತ್ತಿದೆ. ವಾಹನದ ಬಾಡಿಗೆ ಹಣವನ್ನು ಸಾರ್ವಜನಿಕರಿಗೆ ಹೊರೆ ಆಗದಂತೆ ನಿಗದಿಪಡಿಸಬೇಕು. ಪಟ್ಟಣ ಪ್ರದೇಶದ ಜನರು ಸೇರಿದಂತೆ ಗ್ರಾಮೀಣ ಪ್ರದೇಶದ ಜನರಿಗೂ ಶವ ಸಾಗಾಣಿಕೆಗೆ ವಾಹನ ನೀಡಬೇಕು. ಭ್ರಷ್ಟಚಾರ ಹಾಗೂ ಶೋಷಣೆಗೆ ಅವಕಾಶ ನೀಡಬಾರದು ಎಂದು ಅವರು ಸಲಹೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಸಿ. ರಮೇಶ್, ಪಪಂ ಅಧ್ಯಕ್ಷೆ ರತ್ನಮ್ಮ ಲಿಂಗಣ್ಣ, ಉಪಾಧ್ಯಕ್ಷೆ ಶ್ರುತಿ ಮಣಿಕಂಠ, ಮುಖ್ಯಾಧಿಕಾರಿ ವಿ.ಟಿ. ವಿಲ್ಸನ್, ಸದಸ್ಯರಾದ ಟಿ.ಜಿ. ಪುಟ್ಟಸ್ವಾಮಿ, ಮಲ್ಲೇಶ, ಮಹದೇವಸ್ವಾಮಿ, ಸಿ. ಉಮೇಶ್(ಕನಕಪಾಪು), ರಾಘವೇಂದ್ರ, ಸುಧಾ ಗುರುಮಲ್ಲ, ಶಶಿಕಲಾ ಪ್ರಕಾಶ, ಜೆಇ ಪುರುಷೋತ್ತಮ್, ಯೋಜನಾಧಿಕಾರಿ ಕೆಂಪರಾಜು, ಲೆಕ್ಕಾಧಿಕಾರಿ ವಿನಯ್, ಜಿಪಂ ಮಾಜಿ ಸದಸ್ಯ ಪುಟ್ಟಬಸವಯ್ಯ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತೋಟದಪ್ಪ ಬಸವರಾಜು, ಕ್ಷೇತ್ರಾಧ್ಯಕ್ಷ ಕೆ.ಎಸ್. ಬಸವರಾಜು, ಟೌನ್ ಅಧ್ಯಕ್ಷ ಎಸ್. ದಿಲೀಪ್, ಶಕ್ತಿ ಕೇಂದ್ರ ಅಧ್ಯಕ್ಷ ಎನ್. ಲೋಕೇಶ್, ಮುಖಂಡರಾದ ನಾಗರಾಜು(ತಾತಪ್ಪ), ಬಿಲಿಗೆರೆಹುಂಡಿ ಮಹದೇವಸ್ವಾಮಿ, ಸುಜ್ಜಲೂರು ಮಹದೇವ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

