ಮೈಸೂರು

ಸೋತಾಗ ದಲಿತರನ್ನು ನೆನಪಿಸುವ ಕಾಂಗ್ರೆಸ್

Published On :

ಮೈಸೂರು: ಕಾಂಗ್ರೆಸ್ ಪಕ್ಷವು ಸೋತು ನೆಲೆಕಚ್ಚಿದಂತಹ ಸಂದರ್ಭಗಳಲ್ಲಿ ಮಾತ್ರ ದಲಿತರನ್ನು ಓಲೈಕೆ ಮಾಡುತ್ತದೆ ಎಂದು ಕರ್ನಾಟಕ ದಲಿತ ವೇದಿಕೆ ವ್ಯಂಗ್ಯವಾಡಿದೆ. ಕಾಂಗ್ರೆಸ್ ಸೋತಾಗ ಕೆ.ಎಚ್.ರಂಗನಾಥ್, ಮಲ್ಲಿಕಾರ್ಜುನ ಖರ್ಗೆ, ಜಿ.ಪರಮೇಶ್ವರ್ ಅವರಂತವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ವಹಿಸಿ ಅಧಿಕಾರಕ್ಕೆ ತರುವಂತೆ ಮಾಡುತ್ತದೆ. ಪಕ್ಷ ಬಹುಮತ ಪಡೆದ ಮೇಲೆ ಮೇಲ್ವರ್ಗದ ಬಲಿಷ್ಠ ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ತುಳಿತಕ್ಕೊಳಗಾದ ಎಸ್ಸಿ, ಎಸ್ಟಿ ಜನರಿಗೆ ಅಧಿಕಾರ ಕಲ್ಪಿಸುತ್ತೇವೆಂದು ಬೊಗಳೆ ಬಿಡುವ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಬಲಿಷ್ಠ ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ.
ರಾಜ್ಯದಲ್ಲಿ ಹದಿನೇಳು ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಬಿ. ಬಸವಲಿಂಗಪ್ಪ, ಎನ್.ರಾಚಯ್ಯ ಅವರಂತಹ ಸಮರ್ಥ ನಾಯಕರಿಗೂ ಅವಕಾಶ ಕಲ್ಪಿಸಲಿಲ್ಲ ಎಂದು ಜಿಲ್ಲಾಧ್ಯಕ್ಷ ನಾಗನಹಳ್ಳಿ ಎಂ.ರೇವಣ್ಣ ಟೀಕಿಸಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲಾಗದ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆಗೆ ಲೋಕಸಭೆಯಲ್ಲಿ ಪಕ್ಷದ ನಾಯಕತ್ವ ನೀಡಿರುವುದನ್ನು ಪ್ರತಿಯೊಬ್ಬ ದಲಿತರೂ ವಿರೋಧಿಸಬೇಕು.
ಮುಂದಿನ ಐದು ವರ್ಷಗಳಲ್ಲಿ ಮಲ್ಲಿಕಾರ್ಜುನ ಖರ್ಗೆ ಯಶಸ್ವಿ ನಾಯಕರಾಗಿ ಪಕ್ಷ ಮುನ್ನಡೆಸಿ ಅಧಿಕಾರಕ್ಕೆತಂದಲ್ಲಿ ಪ್ರಧಾನಮಂತ್ರಿಯಂತಹ ಹುದ್ದೆಯನ್ನು ಕಾಂಗ್ರೆಸ್ ಬಿಟ್ಟುಕೊಡುವುದೇ ಎಂಬ ಪ್ರಶ್ನೆಯನ್ನು ಮನದಲ್ಲಿಟ್ಟುಕೊಂಡು ದಲಿತರು ಮುಂದುವರಿಯಬೇಕಿದೆ ಎಂದು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.