ಮೈಸೂರು

ಕೆ.ಆರ್. ಮಿಲ್ ಪುನಶ್ಚೇತನಕ್ಕೆ ಒತ್ತಾಯ

Published On :

ಮೈಸೂರು: ಸಾವಿರಾರು ಮಂದಿಗೆ ಉದ್ಯೋಗ ನೀಡಿದ್ದ ಕೆ.ಆರ್. ಮಿಲ್ ಅನ್ನು ಪುನಶ್ಚೇತನಗೊಳಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಜವಳಿ ನೀತಿ 2013-14 ಕುರಿತು ಆಯೋಜಿಸಿದ್ದ ವಿಭಾಗೀಯ ಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಅಂಧ್ರ ಪ್ರದೇಶದ ಆಪ್‌ಟೆಕ್ ಹಾಗೂ ತಮಿಳುನಾಡಿನ ಕೋ- ಆಪ್‌ಟೆಕ್ಸ್ ಮಳಿಗೆಗಳನ್ನು ನಮ್ಮ ಜಿಲ್ಲೆಯಲ್ಲಿ ನೋಡಬಹುದು. ಅಂತೆಯೇ ಕರ್ನಾಟಕದ ಮಳಿಗೆಗಳನ್ನು ಬೇರೆ ರಾಜ್ಯದಲ್ಲಿ ಪ್ರರಂಭಿಸುವ ಬಗ್ಗೆ ಯೋಜನೆಗಳನ್ನು ರೂಪಿಸಿ ಜವಳಿ ಮಾರಾಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಅಂತಾರಾಷ್ಟ್ರೀಯ ಕಂಪನಿಗಳು ಜವಳಿ ಕಾರ್ಖಾನೆಗಳನ್ನು ನಮ್ಮ ದೇಶದಲ್ಲಿ ಪ್ರಾರಂಭಿಸುವಾಗ ಕಚ್ಚಾ ವಸ್ತುಗಳು ಸಿಗುವ ಪ್ರದೇಶ, ರಸ್ತೆಗಳ ವ್ಯವಸ್ಥೆ, ಕೌಶಲ್ಯಯುಕ್ತ ಕಾರ್ಮಿಕರನ್ನು ಅವಲಂಬಿಸಿರುತ್ತದೆ. ಆದರಿಂದ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವುದು ಅತ್ಯಗತ್ಯ ಎಂದು ಹೇಳಿದರು.
ಕಾರ್ಖಾನೆಗಳಲ್ಲಿ ಡೈಯಿಂಗ್ ಆಗುವಾಗ ಉತ್ಪತ್ತಿ ಆಗುವ ತ್ಯಾಜ್ಯ ನದಿ ಸೇರದಂತೆ ಎಚ್ಚರಿಕೆ ವಹಿಸಬೇಕು. ಮಹಿಳಾ ಸಿಬ್ಬಂದಿ ಜವಳಿ ಮತ್ತು ಸಿದ್ಧ ಉಡುಪು ಉತ್ಪಾದನಾ ಘಟಕಗಳಲ್ಲಿ ಕೆಲಸ ಮಾಡುವುದರಿಂದ ಅವರಿಗೆ ಮೂಲ ಸೌಕರ್ಯ ಹಾಗೂ ಭದ್ರತೆ ಒದಗಿಸಬೇಕು. ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿಪಡಿಸಿ ಸೇವಾ ಭದ್ರತೆ ಒದಗಿಸಬೇಕು ಎಂದರು.
ಜವಳಿ ನಗರಿ ಎಂದು ಹೆಸರಾದ ದಾವಣಗೆರೆಯಲ್ಲಿ ಇಂದು ಹಲವು ಜವಳಿ ಕಾರ್ಖಾನೆಗಳು ಮುಚ್ಚುತ್ತಿವೆ. ಕಾರ್ಖಾನೆಗಳು ಜೀವಂತವಾಗಿದ್ದರೆ ಮಾತ್ರ ನಿರುದ್ಯೋಗಿಗಳಿಗೆ ಉದ್ಯೋಗ ನೀಡಲು ಸಾಧ್ಯ. ಕಾರ್ಖಾನೆಗಳು ಮುಚ್ಚಲು ಕಾರಣ ಏನು ಎಂಬ ಬಗ್ಗೆ ಚಿಂತಿಸಬೇಕಿದೆ ಎಂದು ಹೇಳಿದರು.
ಜವಳಿ ಇಲಾಖೆಯ ಆಯುಕ್ತ ಬಿ.ಎಫ್. ಪಾಟೀಲ್ ಮಾತನಾಡಿ, ನೂತನ ಜವಳಿ ನೀತಿ 2013-18ನ್ನು ರಾಜ್ಯ ಸರ್ಕಾರ ಅಕ್ಟೋಬರ್ 2013 ರಿಂದ ಜಾರಿಗೆ ತಂದಿದೆ. ಜವಳಿ ಮತ್ತು ಉಡುಪಿನ ಕ್ಷೇತ್ರವನ್ನು ಬಲಿಷ್ಠಗೊಳಿಸಲು ಈ ನೀತಿ ಜಾರಿಗೆ ತಂದಿದೆ ಎಂದರು.
ಹುಣಸೂರು ಶಾಸಕ ಎಚ್.ಪಿ. ಮಂಜುನಾಥ್, ಜಿಪಂ ಹಂಗಾಮಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ವಿಜಯ್ ಕುಮಾರ್ ಬಿ. ನಿರಾಳೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.