ಕಷ್ಟಪಟ್ಟು ಓದಬೇಡಿ ಇಷ್ಟಪಟ್ಟು ಓದಿ
ಕ.ಪ್ರ. ವಾರ್ತೆ ಹುಣಸೂರು ಜೂ.15
ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದಿದಲ್ಲಿ ಗುರಿ ಸಾಧಿಸಬಹುದು ಎಂದು ಹುಣಸೂರು ಗ್ರಾಮಾಂತರ ಠಾಣಾ ಎಸ್ಐ ರಾಘವೇಂದ್ರ ಗೌಡ ತಿಳಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ಭಾನುವಾರ ಜೀನಿಯಸ್ ಕೋಚಿಂಗ್ ಸೆಂಟರ್ ಹಾಗೂ ರೋಟರಿ ಕ್ಲಬ್ ಸಹಯೋಗದಲ್ಲಿ ಪೊಲೀಸ್ ಹುದ್ದೆಗಾಗಿ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಉದ್ಯೋಗಾಕಾಂಕ್ಷಿಗಳಿಗಾಗಿ ಆಯೋಜಿಸಿದ್ದ ಉಚಿತ ಲಿಖಿತ ಪರೀಕ್ಷೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಆಳ ಅಧ್ಯಯನ ಹಾಗೂ ಗುಂಪು ಚರ್ಚೆಯೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿದಲ್ಲಿ ಯಶಸ್ಸು ಸಾಧ್ಯ. ಇದಕ್ಕಾಗಿ ಅವಿರತ ಶ್ರಮ ನಿಮ್ಮದಾಗಲಿ. ನಿದ್ದೆಗೆಟ್ಟು ಓದಬೇಡಿ. ನಿರ್ದಿಷ್ಟ ಗುರಿ ಇರಲಿ. ವಿಷಯಗಳ ಕುರಿತು ಸಂಪನ್ಮೂಲ ಕ್ರೂಢೀಕರಿಸಿದಲ್ಲಿ ಮಾತ್ರ ಯಶಸ್ಸು ಸಾಧ್ಯ ಎಂದರು. ಜಿ.ಪಂ ಸದಸ್ಯ ರಮೇಶ್ ಕಾರ್ಯಾಗಾರ ಉದ್ಘಾಟಿಸಿದರು. ಪಿರಿಯಾಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಅಧ್ಯಾಪಕ ದೊಡ್ಡಶೆಟ್ಟಿ, ರೋಟರಿ ಅಧ್ಯಕ್ಷ ರಾಜಶೇಖರ್, ಉಪನ್ಯಾಸಕ ಜಗದೀಶ್, ಕೋಚಿಂಗ್ ಸೆಂಟರ್ ಮುಖ್ಯಸ್ಥ ನಾಗರಾಜು ಇದ್ದರು.
ಸ್ಪರ್ಧಾತ್ಮಕ ಪರೀಕ್ಷೆ ನಿರ್ಲಕ್ಷಿಸಬೇಡಿ
ಹುಣಸೂರು: ಇಂದು ಶಿಕ್ಷಣದ ಅಂಗವಾಗಿರುವ ಸ್ವರ್ಧಾತ್ಮಕ ಪರೀಕ್ಷೆಗಳನ್ನು ಯಾರು ಸಹ ನಿರ್ಲಕ್ಷಿಸಬೇಡಿ ಎಂದು ರೋಟರಿ ಅಧ್ಯಕ್ಷ ರಾಜಶೇಖರ್ ಅಭಿಪ್ರಾಯಪಟ್ಟರು. ಪಟ್ಟಣದ ರೋಟರಿ ಸಭಾಂಗಣದಲ್ಲಿ ಭಾನುವಾರ ರೋಟರಿ ಸಂಸ್ಥೆ ಸಹಯೋಗದಲ್ಲಿ ಜೀನಿಯಸ್ ಕೋಚಿಂಗ್ ಸೆಂಟರ್ ಪೊಲೀಸ್ ನೇಮಕಾತಿ ಹುದ್ದೆಯ ಪರೀಕ್ಷಾರ್ಥಿಗಳಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯ ಜ್ಞಾನಕ್ಕಾಗಿ ಪತ್ರಿಕೆಗಳ ಜತೆಗೆ ಸ್ವರ್ಧಾತ್ಮಕ ಕುರಿತ ಪುಸ್ತಕ ಹಾಗೂ 8 ರಿಂದ 10ನೇ ತರಗತಿಯ ಸಮಾಜ-ವಿಜ್ಞಾನ ಪಠ್ಯ ಪುಸ್ತಕಗಳ ಓದುವಂತೆ ಸಲಹೆ ನೀಡಿದರು. ಪಿರಿಯಾಪಟ್ಟಣ ತಾಲೂಕಿನ ಪ್ರಾಧ್ಯಾಪಕ ದೊಡ್ಡಶೆಟ್ಟಿ ಪರೀಕ್ಷೆಗೆ ಹೇಗೆ ಸಿದ್ಧವಾಗಬೇಕು ಎಂಬುದರ ಬಗ್ಗೆ ತಿಳಿಸಿದರು. ಜೀನಿಯಸ್ ಕೋಚಿಂಗ್ ಸೆಂಟರ್ ಮುಖ್ಯಸ್ಥ ನಾಗರಾಜ್, ಜಿಪಂ ಸದಸ್ಯ ರಮೇಶ್, ಗ್ರಾಮಾಂತರ ಠಾಣೆಯ ರಾಘವೇಂದ್ರಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

