ಬೀದಿ ಬದಿ ವ್ಯಾಪಾರಿ ಸಂಘ ಅಸ್ತಿತ್ವಕ್ಕೆ
ಹುಣಸೂರು: ಕೇಂದ್ರ ಸರ್ಕಾರದ ಪಟ್ಟಣ ಬೀದಿ ವ್ಯಾಪಾರಿಗಳ ಕಾಯ್ದೆ-2009ರನ್ವಯ ಪುರಸಭೆ ವತಿಯಿಂದ ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳ ಸಂಘ ರಚಿಸಲಾಯಿತು.
ಪುರಸಭಾ ಸಭಾಂಗಣದಲ್ಲಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಎ.ರಮೇಶ್, 2009ರ ಕಾಯ್ದೆ ಬೀದಿ ಬದಿಯ ವ್ಯಾಪಾರಿಗಳ ಬದುಕನ್ನು ಹಸನಾಗಿಸಲು ಕೇಂದ್ರ ಸರ್ಕಾರ ರೂಪಿಸಿದೆ. ಪಟ್ಟಣದಲ್ಲಿ ಬೀದಿ ಬದಿಯ ವ್ಯಾಪಾರಿಗಳ ಸಮಗ್ರ ಮಾಹಿತಿಯನ್ನೊಳಗೊಂಡ ಸಮೀಕ್ಷಾ ಕಾರ್ಯ ಜೂ.20ರಿಂದ ಪ್ರಾರಂಭಗೊಂಡು ಜು.15ರೊಳಗೆ ಪೂರ್ಣಗೊಳ್ಳಲಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಆ. 10ರೊಳಗೆ ಪಟ್ಟಣದ ಎಲ್ಲ ರಸ್ತೆಬದಿಯ ವ್ಯಾಪಾರಿಗಳಿಗೂ ಗುರುತಿನ ಚೀಟಿ ನೀಡಲಾಗುವುದೆಂದು ತಿಳಿಸಿದರು.
ಪುರಸಭೆ ಮುಖ್ಯಾಧಿಕಾರಿ ರಮೇಶ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಮಿತಿ ರಚಿಲಾಗಿದೆ. ಪಟ್ಟಣದ ಎಸ್ಐ, ತಾಲೂಕು ಆರೋಗ್ಯಾಧಿಕಾರಿಗಳು, ಅಗ್ನಿಶಾಮಕ ದಳದ ಮುಖ್ಯಸ್ಥರು, ಕಾರ್ಮಿಕ ನಿರೀಕ್ಷಕ, ಆಹಾರ ನಿರೀಕ್ಷಕರು ಹಾಗೂ ಸರ್ಕಾರೇತರ ಸಂಘಗಳಾದ ಚಿಗುರು, ಸ್ಫೂರ್ತಿ, ಸೇವ್ ಅವರ್ ಅರ್ಥ್ ಕ್ಲಬ್ ಹಾಗೂ ಡೀಡ್ ಸಂಸ್ಥೆಯ ಮುಖ್ಯಸ್ಥರು ಸಮಿತಿಯ ಸದಸ್ಯರಾಗಿದ್ದಾರೆ. ಪಟ್ಟಣ ಠಾಣೆಯ ಎಸ್ಐ ಲವ, ಸ್ಫೂರ್ತಿ ಸಂಸ್ಥೆಯ ಎ.ಆರ್.ಸುಧಾಮಣಿ, ಶಂಕರ್, ಸೇವ್ ಅವರ್ ಅರ್ಥ್ ಕ್ಲಬ್ನ ಸಂಜಯ್ ಮಾತನಾಡಿದರು. ರವಿಕುಮಾರ್, ಮೋಹನ್, ಆರ್.ಐ.ಶಿವಪ್ಪನಾಯ್ಕ, ಮುಖಂಡ ಆಂಡಿ ಸೇರಿದಂತೆ 200ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

