ಮೈಸೂರು

ಕಾರಾಗೃಹಕ್ಕೆ ಮಾನವ ಹಕ್ಕು ಸದಸ್ಯರ ಭೇಟಿ

Published On :

ಮೈಸೂರು: ಮೈಸೂರು ಕೇಂದ್ರ ಕಾರಾಗೃಹಕ್ಕೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ನ್ಯಾ.ಸಿ.ಜಿ. ಹುನಗುಂದ ಅವರು ಮಂಗಳವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಕಾರಾಗೃಹ ಪ್ರವೇಶಿಸುತ್ತಿದ್ದಂತೆ ಮಹಿಳಾ ವಿಭಾಗಕ್ಕೆ ಭೇಟಿ ನೀಡಿದ ಅವರು, ಹೊಲಿಗೆ ತರಬೇತಿ ಕೊಠಡಿ, ಗಂಧದ ಕಡ್ಡಿ ಉಜ್ಜುವ ವಿಭಾಗ, ಮಹಿಳೆಯರಿಗೆ ಅಕ್ಷರ ಕಲಿಕೆ ಕೊಠಡಿಗೆ ತೆರಳಿ ಪರಿಶೀಲಿಸಿದರು. ನಿಮಗೆ ಏನಾದರೂ ಸಮಸ್ಯೆ ಇದೆಯೇ, ಊಟ- ತಿಂಡಿ ತೊಂದರೆಯೇ, ವೈದ್ಯರು ಬರುತ್ತಿದ್ದಾರೆಯೇ ಎಂದು ಕಾರಾಗೃಹ ನಿವಾಸಿಗಳನ್ನು ಅವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಹಿಳಾ ಬಂಧಿಗಳು, ಊಟದ ಸಮಸ್ಯೆ ಇ. ವಾರಕ್ಕೆ 2 ಬಾರಿ ಮಹಿಳಾ ವೈದ್ಯರು ಆರೋಗ್ಯ ತಪಾಸಣೆ ಮಾಡುತ್ತಾರೆ ಎಂದರು. ಸಾವಿರ ಲೆಕ್ಕದಲ್ಲಿ ಗಂಧದಕಡ್ಡಿ ಉಜ್ಜುವವರಿಗೆ ಇಂತಿಷ್ಟು ಹಣವೆಂದು ಅವರ ಲೆಕ್ಕದಲ್ಲಿ ಸಂಗ್ರಹಿಸಿ ಕೊಡಲಾಗುತ್ತದೆ ಎಂದರು. ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎನ್. ಜಯಸಿಂಹ ತಿಳಿಸಿದರು. ನಂತರ ಆರೋಗ್ಯ ಕೇಂದ್ರಕ್ಕೆ ತೆರಳಿ ವೈದ್ಯರ ಜತೆ ಸಮಾಲೋಚಿಸಿದರು. ಆಸ್ಪತ್ರೆಯಲ್ಲಿರುವ ವೈದ್ಯರ ಕೊರತೆ, ಔಷಧ ಕೊರತೆ ಮತ್ತಿತರ ಸಮಸ್ಯೆ ಕುರಿತು ಕೇಳಿದರು. ಕಾರಾಗೃಹದಲ್ಲಿ 11 ಎಚ್ಐವಿ, 18 ಮನೋರೋಗಿಗಳು, ಮೂವರು ಕ್ಷಯ ರೋಗಿ ಸೇರಿದಂತೆ ಮಧುಮೇಹ, ಅಸ್ತಮಾ ಸಮಸ್ಯೆ ಇರುವವರು ಇದ್ದಾರೆ. ಕೆಲವರಿಗೆ ಕೆ.ಆರ್.ಆಸ್ಪತ್ರೆಗೆ ಕಳುಹಿಸಲಾಗುತ್ತದೆ. ಉಳಿದವರಿಗೆ ಜೈಲಿನಲ್ಲೇ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ. ಇರ್ಫಾನ್ ಅಹಮ್ಮದ್ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.