ಆದಿವಾಸಿಗಳಿಗೆ ಪುನರ್ ವಸತಿ ಕಲ್ಪಿಸಲಿ
ಹುಣಸೂರು: ಅರಣ್ಯದಿಂದ ಹೊರಹಾಕಿರುವ ಆದಿವಾಸಿಗಳಿಗೆ ಪುನರ್ ವಸತಿ ಸೌಕರ್ಯ ಒದಗಿಸಲು ಸರ್ಕಾರವನ್ನು ಒತ್ತಾಯಿಸಿ ಹೋರಾಟ ನಡೆ ಸಲು ಬುಡಕಟ್ಟು ಕೃಷಿಕರ ಸಂಘ ನಿರ್ಣಯಿಸಿದೆ.
ತಾಲೂಕಿನ ಶೆಟ್ಟಹಳ್ಳಿ ಹಾಡಿಯಲ್ಲಿ ನಡೆದ ಬುಡಕಟ್ಟು ಕೃಷಿಕರ ಸಂಘದ 33ನೇ ವಾರ್ಷಿಕ ಮಹಾಸಭೆಯಲ್ಲಿ ತಾಲೂಕಿನ ಅಧ್ಯಕ್ಷ ಶಿವಣ್ಣನವರ ಅಧ್ಯಕ್ಷತೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಹಾಗೂ ನಾಗರಹೊಳೆ ಬುಡಕಟು ಹಕ್ಕು ಸ್ಥಾಪನ ಸಮಿತಿ ಸಂಚಾಲಕ ಪಿ.ಕೆ.ರಾಮು, ಕರ್ನಾಟಕ ಹೈಕೋರ್ಟ್ ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಇತ್ಯರ್ಥಗೊಳಿಸಿ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಮೊದಲೇ ಹೊರ ಹಾಕಿರುವ ಆದಿವಾಸಿ ಕುಟುಂಬಗಳಿಗೆ ಪುನರ್ ವಸತಿ ಸೌಕರ್ಯಗಳನ್ನು ನೀಡಲು ಅದೇಶಿಸಿ 5 ವರ್ಷಗಳೇ ಕಳೆದಿದ್ದರೂ ಸರ್ಕಾರ ಗಮನ ಹರಿಸದೆ ಇರುವುದು ಸರಿಯಲ್ಲ ಎಂದರು.
ಈ ಸಂಬಂಧ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ. ಮದನ್ ಗೋಪಾಲ್ ಹಾಗೂ ಅಡ್ವೋಕೆಟ್ ಜನರಲ್ ಪ್ರೊ. ರವಿವರ್ಮಕುಮಾರ್ ಅವರನ್ನು ಆದಿವಾಸಿಗಳು ಭೇಟಿಯಾಗಿ ಕ್ರಮ ಜರುಗಿಸಲು ವಿನಂತಿಸಿರುವುದಾಗಿ ಅವರು ಸಭೆಗೆ ತಿಳಿಸಿದರು.
ಸಂಪಾದಿಸಿದ ಹಣವನ್ನು ಗೌರವಯುತವಾಗಿ ನಿರ್ವಹಿಸುವುದು ಮುಂತಾದ ವಿಷಯಗಳಿಗೆ ಸಂಘವು ಹಾಡಿ ಜನರಿಗೆ ಮಾರ್ಗದರ್ಶನ ನೀಡಲು ತೀರ್ಮಾನಿಸಿತು.
ವಾರ್ಷಿಕ ಮಹಾಸಭೆಯಲ್ಲಿ ನಾನಾ ಹಾಡಿಗಳ ಯಜಮಾನರು, ಸಂಘದ ಮಾಜಿ ಅಧ್ಯಕ್ಷರು ಅಡಳಿತ ಮಂಡಳಿಯ ಸದಸ್ಯರು ಡೀಡ್ ಸಂಸ್ಥೆಯ ನಿರ್ದೇಶಕ ಎಸ್. ಶ್ರೀಕಾಂತ್, ಸಂಶೋಧಕಿ ಪ್ರಿಯಗುಪ್ತ ಹಾಗೂ ಕಾರ್ಯಕರ್ತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

