ಮೈಸೂರು

ಸಿಗರೇಟ್ ಮೇಲಿನ ತೆರಿಗೆ ಹೆಚ್ಚಳಕ್ಕೆ ವಿರೋಧ

Published On :

ಮೈಸೂರು: ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಸಿಗರೇಟ್ ಮೇಲಿನ ಅಬಕಾರಿ ತೆರಿಗೆ ಹೆಚ್ಚಿಸಲು ಕೇಂದ್ರ ಆರೋಗ್ಯ ಮಂತ್ರಾಲಯ ಪ್ರಸ್ತಾವನೆ ಸಲ್ಲಿಸಿದೆ. ಬೆಲೆ ಹೆಚ್ಚಳದಿಂದ ತಂಬಾಕು ಬೆಳೆಗಾರರಿಗೆ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ, ಪ್ರಸಕ್ತ ವರ್ಷದಲ್ಲಿ ಸಿಗರೇಟಿನ ಮೇಲೆ ಯಾವುದೇ ಅಬಕಾರಿ ಸುಂಕ ಹೇರಬಾರದು ಎಂದು ಕರ್ನಾಟಕ ವರ್ಜೀನಿಯಾ ತಂಬಾಕು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ವಿ. ಜವರೇಗೌಡ ಆಗ್ರಹಿಸಿದರು.
ಸಿಗರೇಟ್ ಮೇಲಿನ ಅಬಕಾರಿ ತೆರಿಗೆ ಹೆಚ್ಚಿಸಿದರೆ ರಾಜ್ಯದಲ್ಲಿರುವ 4 ಲಕ್ಷ ತಂಬಾಕು ಬೆಳೆಗಾರರ ಮತ್ತು ಕುಟುಂಬದ ಜೀವನೋಪಾಯಕ್ಕೆ ಕುತ್ತು ಬರುತ್ತದೆ ಹೀಗಾಗಿ ಈ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು. ಭಾರತದ ಒಟ್ಟು ತಂಬಾಕು ಬಳಕೆಯಲ್ಲಿ ಶೇ.15 ಭಾಗ ಮಾತ್ರ ಸಿಗರೇಟಿಗೆ ಸೀಮಿತವಾಗಿದೆ. ಉಳಿದಂತೆ ಬೀಡಿ, ಆಗಿಯುವ ತಂಬಾಕು ಮತ್ತು ಖೈನಿಯ ಪಾಲಾಗಿರುತ್ತದ. ಇಷ್ಟಾದರೂ ಪ್ರತಿವರ್ಷ ಸಿಗರೇಟ್ ಮೇಲಿನ ತೆರಿಗೆ ಹೆಚ್ಚಿಸಿ, ತಂಬಾಕು ಬಳೆಯ ಬೇಡಿಕೆ ಮತ್ತು ರೈತನಿಗೆ ಸಿಗುವ ಆದಾಯಕ್ಕೆ ಕುತ್ತು ತರಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೇಡಿಕೆಯಲ್ಲಿ ಏರಿಳಿತವಿದ್ದರೂ ಶೇ.50 ತಂಬಾಕನ್ನು ದೇಶಿಯ ಸಿಗರೇಟ್ ತಯಾರಕರು, ಹಾರಾಜು ಮಾರುಕಟ್ಟೆಯಲ್ಲಿ ಖರೀದಿಸಿ ರೈತರಿಗೆ ಸೂಕ್ತ ಬೆಲೆ ಸಿಗುವ ಹಾಗೆ ನೋಡಿಕೊಳ್ಳುತ್ತಿದ್ದಾರೆ. ಸಿಗರೇಟ್ ಮೇಲಿನ ಅವ್ಯಾಹತ ಅಬಕಾರಿ ಸುಂಕದ ಹೇರಿಕೆಯಿಂದ ತಂಬಾಕು ರೈತರ ಜೀವನ ಸಂಕಷ್ಟದಲ್ಲಿ ಸಿಲುಕಿದೆ ಎಂದರು. ಕಳ್ಳ ಸಾಗಣೆ ಮತ್ತು ಅನಧಿಕೃತ ಕಾನೂನು ಬಾಹಿರ ಸಿಗರೇಟ್ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಸಿಗರೇಟ್ ಮೇಲಿನ ತೆರಿಗೆ ಹೆಚ್ಚಿಸಿದರೇ ಬೀದಿಗಿಳಿದು ಪ್ರತಿಭಟಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಒಕ್ಕೂಟದ ಕಾರ್ಯದರ್ಶಿ ವಿಕ್ರಮ್ ರಾಜ್ ಅರಸ್, ಸದಸ್ಯರಾದ ಶಿವಣ್ಣ ಕಲ್ಲಹಳ್ಳಿ, ಹೊಲದಪ್ಪ, ಆರ್.ಟಿ. ಸತೀಶ್, ಜವರೇಗೌಡ ಇದ್ದರು.
ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿ ರೈತರು, ಹೊಗೆಸೊಪ್ಪು ಬೆಳೆಯನ್ನೇ ತಮ್ಮ ಜೀವನಾಡಿ ಆಗಿಸಿಕೊಂಡಿದ್ದಾರೆ. ರೈತ ಕುಟುಂಬಗಳ ಹೊರತಾಗಿ 10 ಲಕ್ಷಕ್ಕೂ ಹೆಚ್ಚಿನ ಕೃಷಿ ಕಾರ್ಮಿಕರು ಈ ಮಳೆಯಾಶ್ರಿತ ವಾಣಿಜ್ಯ ಬಳೆಯನ್ನು ಅವಲಂಬಿಸಿದ್ದಾರೆ. ಸಿಗರೇಟಿನ ಮೇಲೆ ತೆರಿಗೆ ಹೆಚ್ಚಿಸಿದರೇ ತಂಬಾಕು ಬೆಳೆಗಾರರ ಮತ್ತು ಕೃಷಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕುತ್ತಾರೆ.
ಟಿ  ಬಿ.ವಿ. ಜವರೇಗೌಡ, ತಂಬಾಕು ಬೆಳೆಗಾರರ ಒಕ್ಕೂಟದ ಅಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.