ನಾಳೆ ಪುಟ್ಟರಾಜ ಗವಾಯಿ ಜನ್ಮಶತಮಾನೋತ್ಸವ
ಮೈಸೂರು: ಪದ್ಮಭೂಷಣ ಪಂ. ಡಾ. ಪುಟ್ಟರಾಜ ಗವಾಯಿ ಶಿಷ್ಯ ಬಳಗ ಮಾ. 3 ರಂದು ಕುವೆಂಪುನಗರದ ಗಾನಭಾರತೀ ವೀಣೆ ಶೇಷಣ್ಣ ಭವನದಲ್ಲಿ ಜನ್ಮಶತಮಾನೋತ್ಸವ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಿದೆ. ಅಂದು ಬೆಳಗ್ಗೆ 8.45ಕ್ಕೆ ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಉದ್ಘಾಟಿಸಲಿದ್ದು, ಪ್ರೊ.ಬಿ. ಸೋಮಶೇಖರ ಅತಿಥಿಯಾಗಿ ಭಾಗವಹಿಸುವರು. ಸಂಜೆ 5.45ಕ್ಕೆ ನಡೆಯುವ ಸಮಾರಂಭದಲ್ಲಿ ವಯೋಲಿನ್ ವಾದಕ ಪಂ. ಬಿ.ಎಸ್. ಮಠ್, ಶಹನಾಯಿ ವಾದಕ ಪಂ. ಬಸವರಾಜ ಹೆಡ್ಡಿಗೊಂಡ ಅವರನ್ನು ಪಂ. ರಾಜೀವ ತಾರಾನಾಥ, ಇಂದೂಧರ ನಿರೋಡಿ ಸನ್ಮಾನಿಸುವರು ಎಂದು ಬಳಗದ ಎಂ. ಗಣೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಳಗ್ಗೆ 9.20 ರಿಂದ ಆರಂಭವಾಗುವ ಸಂಗೀತ ಕಾರ್ಯಕ್ರಮದಲ್ಲಿ ಪಂ. ಬಸವರಾಜ ಹೆಡಿಗೊಂಡ ಶಹನಾಯಿ ವಾದನ, ಹರೀಷ ಹೆಗಡೆ ಹಿಂದೂಸ್ತಾನಿ ಗಾಯನ, ಸಮೀರರಾವ್ ಕೊಳಲು ವಾದನ ಇರುತ್ತದೆ.
ನಾಳೆಯಿಂದ ಪೌರಾಣಿಕ ರಂಗ ಸಡಗರ ಕಾರ್ಯಕ್ರಮ
ಮೈಸೂರು: ಕದಂಬ ರಂಗ ವೇದಿಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮಾ. 3 ರಿಂದ 5 ರವರೆಗೆ ರಂಗಾಯಣದ ವನರಂಗದಲ್ಲಿ ಪೌರಾಣಿಕ ರಂಗ ಸಡಗರ ಕಾರ್ಯಕ್ರಮ ಆಯೋಜಿಸಿದೆ. ಮಾ. 3ರ ಸಂಜೆ 6ಕ್ಕೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪರಮಶಿವನ್ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಅಧ್ಯಕ್ಷತೆ ವಹಿಸುವರು. ಸಹಾಯಕ ನಿರ್ದೇಶಕಿ ನಿರ್ಮಲಾ ಮಠಪತಿ ಅತಿಥಿಯಾಗಿ ಭಾಗವಹಿಸುವರು ಎಂದು ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಾ. 3ರ ಸಂಜೆ 6.30ಕ್ಕೆ ನಾಟಕ ಅಕಾಡೆಮಿ ಸದಸ್ಯ ಕಿರಗಸೂರು ರಾಜಪ್ಪ ಅವರಿಂದ ರಂಗಗೀತೆ ಕಾರ್ಯಕ್ರಮ, ನಂತರ ಹಲವು ಪೌರಾಣಿಕ ನಾಟಕಗಳಿಂದ ಆಯ್ದ ರಂಗ ದೃಶ್ಯಾವಳಿಯನ್ನು ಕಲಾವಿದ ವೆಂಕಟರಾಂ ಕುಪ್ಯ, ಗುರುಮಲ್ಲು, ಡಿ. ತಿಪ್ಪಣ್ಣ, ಎಚ್.ಎಂ. ವಿಶ್ವಮೂರ್ತಿ, ಯು.ಎಸ್. ರಾಮಣ್ಣ ಪ್ರಸ್ತುತಪಡಿಸುವರು. ಮಾ. 4ರ ಸಂಜೆ 6.30ಕ್ಕೆ ಹಾಸನದ ಹಾಸನಾಂಭ ಕಲಾ ಸಂಘದವರು ಎಸ್.ಎಂ. ನಾಗಾರಾಜಚಾರ್ಯ ನಿರ್ದೇಶನದ ಪಂಚವಟಿ ರಾಮಾಯಣ ನಾಟಕವನ್ನು ಪ್ರದರ್ಶಿಸುವರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

