ನಾಳೆ ಪುಟ್ಟರಾಜ ಗವಾಯಿ ಜನ್ಮಶತಮಾನೋತ್ಸವ
ಮೈಸೂರು: ಪದ್ಮಭೂಷಣ ಪಂ. ಡಾ. ಪುಟ್ಟರಾಜ ಗವಾಯಿ ಶಿಷ್ಯ ಬಳಗ ಮಾ. 3 ರಂದು ಕುವೆಂಪುನಗರದ ಗಾನಭಾರತೀ ವೀಣೆ ಶೇಷಣ್ಣ ಭವನದಲ್ಲಿ ಜನ್ಮಶತಮಾನೋತ್ಸವ ಹಾಗೂ ಸಂಗೀತ ಕಾರ್ಯಕ್ರಮ ಆಯೋಜಿಸಿದೆ. ಅಂದು ಬೆಳಗ್ಗೆ 8.45ಕ್ಕೆ ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಉದ್ಘಾಟಿಸಲಿದ್ದು, ಪ್ರೊ.ಬಿ. ಸೋಮಶೇಖರ ಅತಿಥಿಯಾಗಿ ಭಾಗವಹಿಸುವರು. ಸಂಜೆ 5.45ಕ್ಕೆ ನಡೆಯುವ ಸಮಾರಂಭದಲ್ಲಿ ವಯೋಲಿನ್ ವಾದಕ ಪಂ. ಬಿ.ಎಸ್. ಮಠ್, ಶಹನಾಯಿ ವಾದಕ ಪಂ. ಬಸವರಾಜ ಹೆಡ್ಡಿಗೊಂಡ ಅವರನ್ನು ಪಂ. ರಾಜೀವ ತಾರಾನಾಥ, ಇಂದೂಧರ ನಿರೋಡಿ ಸನ್ಮಾನಿಸುವರು ಎಂದು ಬಳಗದ ಎಂ. ಗಣೇಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಳಗ್ಗೆ 9.20 ರಿಂದ ಆರಂಭವಾಗುವ ಸಂಗೀತ ಕಾರ್ಯಕ್ರಮದಲ್ಲಿ ಪಂ. ಬಸವರಾಜ ಹೆಡಿಗೊಂಡ ಶಹನಾಯಿ ವಾದನ, ಹರೀಷ ಹೆಗಡೆ ಹಿಂದೂಸ್ತಾನಿ ಗಾಯನ, ಸಮೀರರಾವ್ ಕೊಳಲು ವಾದನ ಇರುತ್ತದೆ.
ವಿದ್ಯಾರ್ಥಿ ದಿಸೆಯಲ್ಲೇ ನೆರವಿನ ಔದಾರ್ಯ ಬೆಳೆಸಿಕೊಳ್ಳಿ
ಮೈಸೂರು: ವಿದ್ಯಾರ್ಥಿ ದಿಸೆಯಲ್ಲಿಯೇ ನೆರವಿನ ಔದಾರ್ಯ ಬೆಳೆಸಿಕೊಳ್ಳವುದು ಅವಶ್ಯಕ ಎಂದು ಮೈಸೂರು ಕೋ ಆಪರೇಟಿವ್ ಬ್ಯಾಂಕ್ನ ಉಪಾಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ.ಎಂ. ಮಂಜು ಹೇಳಿದರು.ವೆಂಕಟಗಿರಿ ಪ್ರಕಾಶನ ಹಾಗೂ ಹಿರಣ್ಮಯಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಯುಕ್ತಾಶ್ರಯದಲ್ಲಿ ಮಾತೃ ಮಂಡಳಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ಕೋ ಆಪರೇಟಿವ್ ಬ್ಯಾಕ್ ವತಿಯಿಂದ ನೀಡಿರುವ ವ್ಯಾಕರಣ ಛಂದಸ್ಸು ಪುಸ್ತಕಗಳ ವಿತರಣೆ ಹಾಗೂ ರಸಪ್ರಶ್ನೆ ಸ್ಪರ್ಧೆ ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಮತ್ತೊಬ್ಬರು ಕಷ್ಟದಲ್ಲಿರುವಾಗ ಅವರ ಬಗ್ಗೆ ಕನಿಕರ ತೋರಿಸುವ ಮನೋಭಾವ ಅವಶ್ಯಕ. ಅಲ್ಲದೆ ತಮ್ಮ ಕೈಲಾದ ಸಹಾಯ ಮಾಡುವಂಥ ಗುಣ ವಿದ್ಯಾರ್ಥಿಗಳು ಈಗಿನಿಂದಲೇ ಬೆಳೆಸಿಕೊಳ್ಳಬೇಕು. ತಾವು ಶಿಕ್ಷಣ ಪಡೆದು ಉತ್ತಮ ಹುದ್ದೆಗಳನ್ನು ಹೊಂದಿದಾಗ ಅಥವಾ ಉತ್ತಮ ಜೀವನ ಹೊಂದಿದಾಗ, ತನ್ನೊಂದಿಗೆ ಕಲಿತು ಅಸಹಾಯಕ ಸ್ಥಿತಿಯಲ್ಲಿರುವ ಸ್ನೇಹಿತರಿಗೆ ನೆರವಾಗುವ ಔದಾರ್ಯ ತೋರಿಸಬೇಕು ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

