ಸಮಸ್ತ ಆಗ್ರೋ ಸಂಸ್ಥೆಯಿಂದ ವಂಚನೆ ಆರೋಪ, ಪ್ರತಿಭಟನೆ
ಮೈಸೂರು: ಸಮಸ್ತ ಆಗ್ರೋ ಪ್ರೈ.ಲಿ ಸಂಸ್ಥೆಯವರು ಹಣ ದ್ವಿಗುಣ ಮಾಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಸ್ತ್ರೀಶಕ್ತಿ ಒಕ್ಕೂಟದವರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು. ಮೈಸೂರಿನ ಹೂಟಗಳ್ಳಿ ಕೆಎಚ್ಬಿ ಕಾಲೋನಿಯಲ್ಲಿ ಸಮಸ್ತ ಆಗ್ರೋ ಕೇಂದ್ರ ಕಚೇರಿ ತೆರೆದು, ನಿರ್ದೇಶಕಅಣ್ಣಯ್ಯ, ಸೋಮಶೇಖರ, ರೇಣುಕಮ್ಮ ಹಾಗೂ ವ್ಯವಸ್ಥಾಪಕ ಗೌರೀಶ ಎಂಬುವರ ನೇತೃತ್ವದಲ್ಲಿ 2-3 ವರ್ಷದಲ್ಲಿ ದ್ವಿಗುಣ ಮಾಡುವುದಾಗಿ ನಂಬಿಸಿ ಹಣ ಸಂಗ್ರಹಿಸಿದ್ದಾರೆ ಎಂದು ದೂರಿದರು. ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯ ಅನೇಕರು ಇಲ್ಲಿ ಲಕ್ಷಾಂತರು ರು. ಹೂಡಿದ್ದಾರೆ. ಆದರೆ, ಸಂಸ್ಥೆಯವರು ಹೂಡಿಕೆದಾರರಿಗೆ ವಂಚಿಸಿದ್ದಾರೆಂದರು.
ಹೆಚ್ಚುವರಿ ಶುಲ್ಕ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಮೈಸೂರು: ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಶುಲ್ಕ ಪಾವತಿಸುವಂತೆ ಆದೇಶಿಸಿರುವ ಖಂಡಿಸಿ ಯುವರಾಜ ಕಾಲೇಜು ವಿದ್ಯಾರ್ಥಿಗಳು ಎಐಡಿಎಸ್ಒ, ಎಐಡಿವೈಒ ನೇತೃತ್ವದಲ್ಲಿ ಮೈಸೂರು ವಿವಿ ಕಾರ್ಯಸೌಧ (ಕ್ರಾಫಡ್ ಹಾಲ್) ಎದುರು ಶನಿವಾರ ಪ್ರತಿಭಟಿಸಿದರು.ಹೆಚ್ಚುವರಿ ಶುಲ್ಕ ಪಾವತಿ ಆದೇಶವನ್ನು ಹಿಂಪಡೆಯಬೇಕು. ಶಿಕ್ಷಣದ ಖಾಸಗೀಕರಣ ಮಾಡಬಾರದು ಎಂದು ಅವರು ಒತ್ತಾಯಿಸಿದರು.ಎಐಡಿವೈಒ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮೇಟಿ, ಎಐಡಿಎಸ್ಒ ಜಿಲ್ಲಾ ಸಂಚಾಲಕ ಬಸವರಾಜು, ಮುಖಂಡರಾದ ಸುನಿಲ್, ಅವಿನಾಶ್, ಕೌಶಿಕ್, ಮುದ್ದುಕೃಷ್ಣ, ಸುಮಾ, ನಾಗೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

