ಸಮಸ್ತ ಆಗ್ರೋ ಸಂಸ್ಥೆಯಿಂದ ವಂಚನೆ ಆರೋಪ, ಪ್ರತಿಭಟನೆ
ಮೈಸೂರು: ಸಮಸ್ತ ಆಗ್ರೋ ಪ್ರೈ.ಲಿ ಸಂಸ್ಥೆಯವರು ಹಣ ದ್ವಿಗುಣ ಮಾಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಸ್ತ್ರೀಶಕ್ತಿ ಒಕ್ಕೂಟದವರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟಿಸಿದರು. ಮೈಸೂರಿನ ಹೂಟಗಳ್ಳಿ ಕೆಎಚ್ಬಿ ಕಾಲೋನಿಯಲ್ಲಿ ಸಮಸ್ತ ಆಗ್ರೋ ಕೇಂದ್ರ ಕಚೇರಿ ತೆರೆದು, ನಿರ್ದೇಶಕಅಣ್ಣಯ್ಯ, ಸೋಮಶೇಖರ, ರೇಣುಕಮ್ಮ ಹಾಗೂ ವ್ಯವಸ್ಥಾಪಕ ಗೌರೀಶ ಎಂಬುವರ ನೇತೃತ್ವದಲ್ಲಿ 2-3 ವರ್ಷದಲ್ಲಿ ದ್ವಿಗುಣ ಮಾಡುವುದಾಗಿ ನಂಬಿಸಿ ಹಣ ಸಂಗ್ರಹಿಸಿದ್ದಾರೆ ಎಂದು ದೂರಿದರು. ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯ ಅನೇಕರು ಇಲ್ಲಿ ಲಕ್ಷಾಂತರು ರು. ಹೂಡಿದ್ದಾರೆ. ಆದರೆ, ಸಂಸ್ಥೆಯವರು ಹೂಡಿಕೆದಾರರಿಗೆ ವಂಚಿಸಿದ್ದಾರೆಂದರು.
ಸಹಕಾರ ಸಂಘದ ಕಚೇರಿ ನಿರ್ಮಾಣಕ್ಕೆ ಗುದ್ದಲಿಪೂಜೆ
ಸಾಲಿಗ್ರಾಮ: ಸಂಘದ ಉತ್ತಮ ಆಡಳಿತ ಕಾರ್ಯಕ್ಕಾಗಿ ಅನುಕೂಲ ಕಲ್ಪಿಸಲು ಕಚೇರಿ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹರದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ. ರಾಮೇಗೌಡ ಹೇಳಿದರು. ಕೆ.ಆರ್. ನಗರ ತಾಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಸುಮಾರು 18 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಕಚೇರಿಯ ನೂತನ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಸಂಘವು ಉತ್ತಮವಾದ ಸ್ಥಾನವನ್ನು ಹೊಂದಿದೆ ಎಂದು ತಿಳಿಸಿದರು. ನಿರ್ದೇಶಕರಾದ ಚಂದ್ರೇಗೌಡ, ಕೆ.ಬಿ.ನಟರಾಜು, ಬಿ.ಆರ್. ಶ್ರೀಧರ್, ಮರೀಗೌಡ, ಶಂಕರಯ್ಯ, ಸ್ವಾಮೀಗೌಡ, ಕಮಲಮ್ಮಸುಂದರ್, ಎಂ. ಕೃಷ್ಣ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

