ಯಾವ ಸಮಾಜದವರನ್ನೂ ಕಡೆಗಣಿಸಿಲ್ಲ: ವೆಂಕಟೇಶ್
ಪಿರಿಯಾಪಟ್ಟಣ: ತಮ್ಮ ರಾಜಕೀಯ ಜೀವನದ ಇತಿಹಾಸದಲ್ಲಿ ಯಾವ ಸಮಾಜದವರನ್ನೂ ಕಡೆಗಣಿಸಿಲ್ಲ, ಮುಂದೆಯೂ ಕಡೆಗಣಿಸುವುದಿಲ್ಲ ಎಂದು ಶಾಸಕ ಕೆ. ವೆಂಕಟೇಶ್ ಹೇಳಿದರು.
ಪಟ್ಟಣದ ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ತಾಲೂಕು ವಿಶ್ವಕರ್ಮ ಸೇವಾ ಸಮಾಜ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾವು ಹಿಂದಿನಿಂದಲೂ ಸರ್ವ ಸಮಾಜದವರನ್ನು ಒಂದೇ ರೀತಿ ಕಾಣುತ್ತಿದ್ದು ಎಲ್ಲ ಜನಾಂಗದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವುದಾಗಿ ತಿಳಿಸಿದರು.
ಅರಕಲಗೂಡು ತಾಲೂಕು ಅರೆಮಾದನಹಳ್ಳಿ ಮಹಾ ಸಂಸ್ಥಾನದ ಶಿವಸುಜ್ಞಾನತೀರ್ಥ ಸ್ವಾಮೀಜಿ ಮಾತನಾಡಿ, ದೇಶದ ಬೆನ್ನುಲುಬು ರೈತ. ರೈತನ ಬೆನ್ನೆಲುಬು ವಿಶ್ವಕರ್ಮ ಜನಾಂಗದವರು. ಈ ಸಮುದಾಯದವರು ರೈತರಿಗೆ ಬೇಕಾದ ಉಪಕರಣಗಳನ್ನು ಮಾಡಿಕೊಟ್ಟು ರೈತರಿಗೆ ಶಕ್ತಿ ತುಂಬಿದವರು ಎಂದರು.
ಸಂಘದ ಜಿಲ್ಲಾಧ್ಯಕ್ಷ ಎನ್. ನಂದಕುಮಾರ್, ತಾಲೂಕು ವಿಶ್ವಕರ್ಮ ನೌಕರರ ಸಂಘದ ಅಧ್ಯಕ್ಷ ತಾಂಡವಮೂರ್ತಾಚಾರ್, ತಾಲೂಕು ಅಧ್ಯಕ್ಷ ಚಂದ್ರು , ಉಪಾಧ್ಯಕ್ಷ ಕಾಂತರಾಜು, ಗೌರವಾಧ್ಯಕ್ಷ ಅಣ್ಣಯ್ಯಾಚಾರ್, ಪ್ರಧಾನ ಕಾರ್ಯದರ್ಶಿ ಈರಣ್ಣಯ್ಯ, ಖಜಾಂಚಿ ಕೆ.ಟಿ. ಸ್ವಾಮಿ, ಸಂಘಟನಾ ಕಾರ್ಯದರ್ಶಿ ಗಣೇಶ್, ಕಾನೂನು ಸಲಹೆಗಾರ ಕಾಂತರಾಜು, ಸಂಘಟನಾ ಕಾರ್ಯದರ್ಶಿ ತಿರುನೀಲಕಂಠ, ನಿರ್ದೇಶಕರಾದ ಚಂದ್ರಾಚಾರ್, ನಾಗರಾಜು, ಮಹೇಶಾಚಾರ್, ಶಿವಣ್ಣ, ಪರಮೇಶ್, ಮಲ್ಲೇಶಾಚಾರ್, ಕಮಲಮ್ಮ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

