ಪ್ಲಾಸ್ಟಿಕ್ ವಿಶಲ್ ನುಂಗಿ ಬಾಲಕ ಸಾವು
ನಂಜನಗೂಡು: ತಾಲೂಕಿನ ಮುದ್ದಹಳ್ಳಿ ಗ್ರಾಮದಲ್ಲಿ ಪ್ಲಾಸ್ಟಿಕ್ ಸಿಲ್ಪಿಯನ್ನು (ವಿಶಲ್ ) ನುಂಗಿ ಬಾಲಕನೊಬ್ಬ ಸಾವಿಗೀಡಾಗಿರುವ ಘಟನೆ ಭಾನುವಾರ ನಡೆದಿದೆ.
ಮುದ್ದಹಳ್ಳಿ ಗ್ರಾಮದ ಲೇಟ್ ಮಹದೇವಸ್ವಾಮಿ ಎಂಬವರ ಮಗನಾದ ಮೋಹನ (6) ಮೃತಪಟ್ಟವನು. ಪಟ್ಟಣದ ಸಿಟಿಜನ್ ಶಾಲೆಯಲ್ಲಿ ವ್ಯಾಸಂಗ ಮಾಡಿಸಲು ಶಾಲೆಯ ಪಕ್ಕದಲ್ಲೇ ಕುಟುಂಬದವರು ಮನೆ ಮಾಡಿಕೊಂಡಿದ್ದರು. ಅನ್ಯ ಕಾರ್ಯದ ನಿಮಿತ್ತ ಸ್ವಗ್ರಾಮ ಮುದ್ದಹಳ್ಳಿಗೆ ಭಾನುವಾರ ತೆರಳಿದ್ದರು. ಆ ವೇಳೆಯಲ್ಲಿ ಮನೆಯ ಮುಂದೆ ಆತ ಆಟ ಆಡುತ್ತಾ ಶಬ್ದ ಮಾಡುವ ಪ್ಲಾಸ್ಟಿಕ್ ಸಿಲ್ಪಿ ಊದುವಾಗ ಆಕಸ್ಮಿಕವಾಗಿ ಗಂಟಲಲ್ಲಿ ಸಿಕ್ಕಿಕೊಂಡು ಪ್ರಜ್ಞಾಶೂನ್ಯನಾದ. ತಕ್ಷಣ ಆತನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಿಸಲು ಯತ್ನಿಸುವಾಗ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದ. ಮಗುವಿನ ತಾಯಿ ಮಂಜುಳಾಗೆ ತನ್ನ ಗಂಡ ದಿ. ಮಹದೇವಸ್ವಾಮಿ ವರ್ಷದ ಹಿಂದೆ ಅಪಘಾತದಲ್ಲಿ ಸಾವಿಗೀಡಾದ ಘಟನೆ ಹಸಿರಾಗಿರುವಾಗಲೇ ಮಗನ ಸಾವು ಸಿಡಿಲು ಬಡಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

