ಮೈಸೂರು

ಕುಡಿವ ನೀರಿಗೆ ಆಗ್ರಹಿಸಿ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ,  ಟಿ.ನರಸೀಪುರ ,  ಮಾ. 11
ಕುಡಿಯುವ ನೀರಿನ ಪೂರೈಕೆಗೆ ಆಗ್ರಹಿಸಿ ಗರ್ಗೇಶ್ವರಿ ಗ್ರಾಪಂ ಎದುರು ಯಡದೊರೆ ಗ್ರಾಮಸ್ಥರು ಮಂಗಳವಾರ ಖಾಲಿ ಕೊಡಗಳನ್ನು ಹಿಡಿದು ಪ್ರತಿಭಟಿಸಿದರು.
ತಾಲೂಕಿನ ಯಡದೊರೆ ಗ್ರಾಮದ ಹಳೇ ಬಡಾವಣೆಗೆ ಕಳೆದ ಹದಿನೈದು ದಿನಗಳಿಂದ ನೀರನ್ನು ಸರಬರಾಜು ಮಾಡದೆ ಇರುವುದರಿಂದ ಕುಡಿಯಲು ಹಾಗೂ ಅವಶ್ಯವಿರುವ ನಿತ್ಯದ ಕೆಲಸ ಕಾರ್ಯಗಳಿಗೆ ನೀರಿಗಾಗಿ ತತ್ವಾರ ತಲೆದೂರಿದೆ. ನೀರಿಲ್ಲದೆ ಪಡುತ್ತಿರುವ ಬವಣೆಯ ಬಗ್ಗೆ ದೂರಿದ್ದರೂ ಯಾವುದೇ ಸ್ಪಂದನೆ ಇಲ್ಲವೆಂದು ಗರ್ಗೇಶ್ವರಿ ಗ್ರಾಪಂ ಎದುರು ಪ್ರತಿಭಟಿಸಿದರು.
ಸ್ಥಳೀಯ ನಿವಾಸಿ ಉಮೇಶ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ಗ್ರಾಮದಲ್ಲಿಯೇ ಕುಡಿಯುವ ನೀರಿಗೆ ಬರವಿದೆ. ನೀರು ಕೊಳಾಯಿ ಸಂಪರ್ಕಕ್ಕೆ ಏರುತ್ತಿಲ್ಲವೆಂಬ ನೆಪವೊಡ್ಡಿ ಕುಡಿಯುವ ನೀರನ್ನು ಸರಬರಾಜು ಮಾಡುತ್ತಿಲ್ಲ. ದಿನದ 24 ಗಂಟೆ ವಿದ್ಯುತ್ ಇದ್ದರೂ ನೀರು ಬರೋದಿಲ್ಲ.
ಗಮನಹರಿಸದ ಅಧಿಕಾರಿಗಳು: ಎರಡು ದಿನ ನಡೆಯುವ ಮಾರಮ್ಮನ ಹಬ್ಬಕ್ಕೆ ಹನಿ ನೀರಿಲ್ಲದೆ ಪರದಾಡಬೇಕಿದೆ. ಬಿಂದಿಗೆ ನೀರಿಗೆ ಕೊಳವೆ ಬಾವಿಯನ್ನು ಗಂಟೆಗಟ್ಟಲೆ ಒತ್ತಬೇಕು. ಬಟ್ಟೆ, ಪಾತ್ರೆ ತೊಳೆಯಲು ದೂರದ ಕಬಿನಿ ನದಿಗೆ ಹೊತ್ತೊಯ್ಯಬೇಕು. ಹಲವಾರು ಭಾರಿ ಗ್ರಾಪಂ ಸೇರಿದಂತೆ ತಾಪಂ ಕಚೇರಿಗೂ ದೂರು ನೀಡಿದ್ದರೂ ಸಮಸ್ಯೆ ಪರಿಹರಿಸುವ ಬಗ್ಗೆ ಯಾವೊಬ್ಬ ಅಧಿಕಾರಿಯೂ ಗಮನ ಹರಿಸಿಲ್ಲ ಎಂದು ಆರೋಪಿಸಿದರು.
ಯಡದೊರೆ ಗ್ರಾಮದ ಹಳೇ ಬಡಾವಣೆಗೆ ಇನ್ನೆರಡು ದಿನಗಳಲ್ಲಿ ಕುಡಿಯುವ ನೀರನ್ನು ಪೂರೈಕೆ ಮಾಡಲು ಕ್ರಮ ಕೈಗೊಳ್ಳದಿದ್ದರೆ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಬೇಕಾಗುತ್ತದೆ ಎಂದು ಪ್ರತಿಭಟನಾನಿರತ ನಿವಾಸಿಗಳು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜು, ಕುಮಾರ, ಪ್ರಭುಸ್ವಾಮಿ, ರಮೇಶ್, ಚೌಡಯ್ಯ, ಶಿವಮ್ಮ, ಗೌರಮ್ಮ, ರಂಗಸ್ವಾಮಿ, ಗುರುಸ್ವಾಮಿ, ಸಾವಿತ್ರಮ್ಮ, ಸಾಕಮ್ಮ, ಸಿದ್ದರಾಜಮ್ಮ, ಶಿವಮ್ಮ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.