ಬೌದ್ಧಿಕ ಸಂಪನ್ಮೂಲ ಬಳಕೆಗೆ ಮುಂದಾಗಿ: ಗಿರೀಶ್
ಮೈಸೂರು: ಯುವಜನತೆ ಬೌದ್ಧಿಕ ಸಂಪನ್ಮೂಲ ಬಳಕೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಎಸ್ಪಿಐ ಸಂಸ್ಥೆಯ ಅಧ್ಯಕ್ಷ ಗಿರೀಶ್ ಕರುಣಾಕರನ್ ಹೇಳಿದರು.
ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ಕ್ರಾಸ್ ಯುವಪಡೆ ಸಂಯುಕ್ತಾಶ್ರಯದಲ್ಲಿ ಗೋಕುಲಂ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿರುವ ಮೂರು ದಿನಗಳ ವಿದ್ಯುತ್ ಸಾಂಸ್ಕೃತಿಕ ಉತ್ಸವ ಹಾಗೂ ರಕ್ತದಾನ ಶಿಬಿರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತಾಡಿದರು.
ಇಂದಿನ ಮಾಹಿತಿ ಮತ್ತು ತಂತ್ರಜ್ಞಾನ ಯುಗದಲ್ಲಿ ಎಲ್ಲ ರೀತಿಯ ಆಧುನಿಕ ತಂತ್ರಗಾರಿಕೆಯ ಸಾಧನಗಳ ಬಳಕೆ ಅವಶ್ಯಕ. ಆದರೆ ಅವುಗಳನ್ನೇ ಹೆಚ್ಚಾಗಿ ಅವಲಂಬಿಸಿದಾಗ ತಮ್ಮಲ್ಲಿರುವ ಸೃಜನಶೀಲತೆ ಕುಂಠಿತವಾಗಲಿದೆ. ಆದ್ದರಿಂದ ಪ್ರತಿ ವಿದ್ಯಾರ್ಥಿಯು ಬೌದ್ಧಿಕ ಶಕ್ತಿಯ ಸದುಪಯೋಗಕ್ಕೆ ಆದ್ಯತೆ ವಹಿಸಬೇಕು ಎಂದರು.
ಎಂಜಿನಿಯರಿಂಗ್ ವಿದ್ಯಾರ್ಥಿಗಳೆಂದರೆ ಕೇವಲ ತಾಂತ್ರಿಕ ವಿಚಾರಗಳು ಹಾಗೂ ಅದಕ್ಕೆ ಸಂಬಂಧಿಸಿದ ಉದ್ಯೋಗಕ್ಕೆ ಸೀಮಿತವಾದರೆ ಸಾಲದು. ಅದರ ಆಚೆಗೂ ಅಲೋಚಿಸಿ ಸಮಾಜ ಸೇವೆಗೆ ಮುಂದಾಗಿ ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಸಂಶೋಧನೆ ಮತ್ತಿತರ ಚಟುವಟಿಕೆ ಹಾಗೂ ಸಮಾಜಮುಖಿಯಾಗಿ ಚಿಂತನೆ ನಡೆಸಬೇಕು ಎಂದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ಪಿ.ವಿಶ್ವನಾಥ್ ಹಾಗೂ ಖಜಾಂಚಿ ಎಸ್.ಎನ್.ಲಕ್ಷ್ಮೀನಾರಾಯಣ ಮುಖ್ಯ ಅತಿಥಿಗಳಾಗಿದ್ದರು. ಪ್ರಾಂಶುಪಾಲ ಡಾ. ಬಿ. ಸದಾಶಿವೇಗೌಡ, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ.ಎನ್.ಎಸ್. ಲಿಂಗೇಗೌಡ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಪ್ರೊ. ಕೆ.ಬಿ. ವಿನಯ್ ಹಾಗೂ ಐಎಸ್ಟಿಇ ಘಟಕದ ಸಂಯೋಜಕ ಡಾ. ಅನಿತಾ ಎನ್. ಸುಧೀರ್ ಇದ್ದರು.
ನಂತರ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ರಕ್ತದಾನದಲ್ಲಿ ಭಾಗವಹಿಸಿದ್ದರು. ಉತ್ಸವದಲ್ಲಿ ರಂಗೋಲಿ, ಸಿನಿಮಾ ನಿರ್ಮಾಣ, ಫ್ಯಾಷನ್ ಡಿಸೈನ್, ಫೋಟೋ ಮ್ಯಾರಥಾನ್, ಸೋಲೋ ಸಿಂಗಿಂಗ್ ಕಂಪ್ಯೂಟರ್ ಗೇಮಿಂಗ್, ಗ್ರೂಪ್ ಡ್ಯಾನ್ಸ್ ಮತ್ತಿತರ ಸ್ಪರ್ಧೆಗಳು ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

