ಭಾಷಾಂತರ ಕಲೆ ರೂಢಿಸಿಕೊಳ್ಳಿ: ಡಾ. ವಾನಳ್ಳಿ
ಮೈಸೂರು: ಇಂದು ಭಾಷಾಂತರ ಕಲೆ ರೂಢಿಸಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ಮೈಸೂರು ವಿವಿಯ ಸಿಪಿಡಿಪಿಎಸ್ ಸಂಸ್ಥೆಯ ನಿರ್ದೇಶಕ ಡಾ. ನಿರಂಜನ ವಾನಳ್ಳಿ ಹೇಳಿದರು.
ಬಾಸುದೇವ ಸೋಮಾನಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಂಯುಕಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಭಾಷಾಂತರ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜಾಗತೀಕರಣ ಯುಗದಲ್ಲಿ ಭಾಷಾಂತರವು ಪ್ರಾಮುಖ್ಯತೆ ಪಡೆದಿದ್ದು, ಭಾಷಾಂತರ ಬಲ್ಲವರಿಗೆ ಉದ್ಯೋಗ ಅವಕಾಶಗಳು ವಿಫುಲವಾಗಿವೆ. ಆದ್ದರಿಂದ ವಿದ್ಯಾರ್ಥಿಗಳು ಭಾಷಾಂತರ ಕಲೆಯನ್ನು ರೂಢಿಸಿಕೊಳ್ಳುವುದು ಪ್ರಸ್ತುತ ಸಂದರ್ಭದಲ್ಲಿ ಅತ್ಯಗತ್ಯ ಎಂದರು.
ಮೊದಲು ಪತ್ರಕರ್ತರಾಗುವವರಿಗೆ ಅನುವಾದ ಕೆಲಸ ವಹಿಸುವುದು ಸಹಜ. ಭಾಷಾಂತರ ಕಲಿಯದೆ ಪತ್ರಕೋದ್ಯಮ ಶಿಕ್ಷಣ ಪೂರ್ಣವಾಗದು. ಆದ್ದರಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಭಾಷಾಂತರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಶಾರದಾ ವಿಲಾಸ ಕಾಲೇಜು ಪ್ರಾಂಶುಪಾಲ ಪ್ರೊ.ಎ.ಆರ್. ನಾಗಭೂಷಣ್, ಭಾಷಾಂತರ ಇಲ್ಲದೆ ಜಗತ್ತಿನ ಯಾವ ವ್ಯವಹಾರವೂ ನಡೆಯದು. ಪ್ಲೇಟೋ, ಅರಿಸ್ಟಾಟಲ್, ಶೇಕ್ಸ್ಪಿಯರ್ ಹಾಗೂ ಕಾಳಿದಾಸ ಮುಂತಾದ ಮಹಾನ್ ಕವಿಗಳ ಕೃತಿಗಳು ಭಾಷಾಂತರವಾಗದೆ ಹೋಗಿದ್ದರೆ ಜಗತ್ತಿಗೆ ಅವರು ಪರಿಚಯವಾಗುತ್ತಿರಲ್ಲಿಲ್ಲ. ಆದ್ದರಿಂದ ಭಾಷಾಂತರ ಪ್ರಜ್ಞೆ ಮತ್ತು ಅರಿವು ಅತಿ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಆರ್. ರಮೇಶ್, ಭಾಷಾಂತರ ಆಯಾ ಭಾಷೆಯ ಸೃಜನಶೀಲತೆ ಹಾಗೂ ಸಂಸ್ಕೃತಿಯನ್ನು ಕಟ್ಟಿಕೊಡಲಿದೆ. ಅದಿಲ್ಲದೆ ಭಾಷಾಂತರ ಮಾಡಿದರೆ ಅದಕ್ಕೆ ಅರ್ಥವಿರುವುದಿಲ್ಲ ಎಂದರು.
ದಿ. ನ್ಯಾಷನಲ್ ಇನ್ಸ್ಟಿಟ್ಯೂಷನ್ ಆಫ್ ಎಜುಕೇಷನ್ ಟ್ರಸ್ಟ್ನ ಟ್ರಸ್ಟಿ ಎಂ. ಪುಟ್ಟರಾಜು ಮುಖ್ಯ ಅತಿಥಿಯಾಗಿದ್ದರು. ವಿಭಾಗ ಮುಖ್ಯಸ್ಥೆ ಶ್ರೀದೇವಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

