ಕುವೆಂಪು ಉತ್ಸವ 23ಕ್ಕೆ; ನೃತ್ಯ, ನಾಟಕದ ಕಲರವ
ಮೈಸೂರು: ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಕಲಾನಿಕೇತನ ಸಂಸ್ಥೆಯು ಮಾ.23ರ ಬೆಳಗ್ಗೆ 10.30 ರಿಂದ ರಾತ್ರಿ 9 ರವರೆಗೆ ಜಗನ್ಮೋಹನ ಅರಮನೆಯಲ್ಲಿ ಕುವೆಂಪು ಸಾಂಸ್ಕೃತಿಕ ಉತ್ಸವ ಸಮಾರಂಭ ಆಯೋಜಿಸಿದೆ.
ಕುವೆಂಪು 110 ಜಯಂತಿ ಅಂಗವಾಗಿ 110 ಹಿರಿಯ, ಕಿರಿಯ ಕವಿಗಳಿಂದ ಸಾಹಿತ್ಯ ಸಂಭ್ರಮ, 110 ನೃತ್ಯಗಾರರಿಂದ ಕುವೆಂಪು ಅವರ ಗೀತೆಗಳಿಗೆ ನೃತ್ಯ, ಸುಗಮ ಸಂಗೀತ ಗಾಯಕರಿಂದ ಕುವೆಂಪು ಗೀತ ಗಾಯನ, ಕುವೆಂಪು ಅವರ ಜಲಗಾರ ನಾಟಕ ಪ್ರದರ್ಶನ ಆಯೋಜಿಸಲಾಗಿದೆ ಎಂದು ಕುವೆಂಪು ಕಲಾನಿಕೇತನದ ಅಧ್ಯಕ್ಷ ಡಿ.ಪ್ರಕಾಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಹಿತಿ ಪ್ರೊ.ದೇಜಗೌ ಸಮಾರಂಭ ಉದ್ಘಾಟಿಸುವರು. ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಶ್ರಾಂತ ಕುಲಪತಿ ಡಾ.ಎಚ್.ಜೆ. ಲಕ್ಕಪ್ಪಗೌಡ ಅಧ್ಯಕ್ಷತೆ ವಹಿಸುವರು. ಕುವೆಂಪು ಭಾವಚಿತ್ರವುಳ್ಳ ಕೈಗಡಿಯಾರವನ್ನು ಸಾಹಿತಿ ಡಾ.ಲತಾ ರಾಜಶೇಖರ್, ಕುವೆಂಪು ಭಾವಚಿತ್ರವನ್ನು ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಚಂದ್ರಶೇಖರಯ್ಯ ಬಿಡುಗಡೆಗೊಳಿಸುವರು. ಮುಖ್ಯಮಂತ್ರಿಯವರ ಮಾಧ್ಯಮ ಸಮನ್ವಯಾಧಿಕಾರಿ ಕೆ.ವಿ. ಪ್ರಭಾಕರ್, ಸಾಹಿತಿ ಡಾ.ಸಿಪಿಕೆ ಸೇರಿದಂತೆ ಹಲವರು ಅತಿಥಿಗಳಾಗುವರು ಎಂದರು.
ಇದೇ ವೇಳೆ ನೃತ್ಯ ಕಲಾವಿದ ಶ್ರೀಧರ್ ಜೈನ್ ಅವರಿಗೆ ಕುವೆಂಪು ನಾಟ್ಯ ಮಯೂರು ಕನ್ನಡ ರತ್ನ ಪ್ರಶಸ್ತಿ, ಡಾ. ದೇಜಗೌ, ಡಾ.ಎಚ್.ಜೆ. ಲಕ್ಕಪ್ಪಗೌಡ, ಡಾ. ಸಿಪಿಕೆ, ಡಾ. ಮಳಲಿ ವಸಂತಕುಮಾರ್, ಡಾ. ಲತಾ ರಾಜಶೇಖರ್ ಅವರಿಗೆ ಕುವೆಂಪು ಸಾಹಿತ್ಯ ಸಾಮ್ರಾಟ್ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುವುದು ಎಂದು ಅವರು ಹೇಳಿದರು.
ಕುವೆಂಪು ಕಲಾನಿಕೇತನ ಹಿರಿಯ ಉಪಾಧ್ಯಕ್ಷ ಡಾ.ರಾಜಶೇಖರ್, ಸದಸ್ಯರಾದ ಮೋಹನ್, ವಿನಾಯಕ್, ಧರ್ಮರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

