ಮರೆಯದಿರಿ, ಷರೀಫ್ ಗೆಲುವಿಗೆ ದುಡಿಯಿರಿ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಜಾಫರ್ ಷರೀಫ್ ಕಣಕ್ಕೆ ಇಳಿಯಲಿದ್ದು, ಅವರ ಗೆಲವಿಗಾಗಿ ಎಲ್ಲರೂ ಒಗ್ಗಟ್ಟಾಗಿ ದುಡಿಯುವಂತೆ ಜಿಲ್ಲಾ ಮುಖಂಡರು ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದರು. ಬುಧವಾರ ನಗರದ ಪಕ್ಷದ ಕಚೇರಿಯಲ್ಲಿ ನಡೆದ ಬ್ಲಾಕ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಮೈಸೂರಿನಲ್ಲಿ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಲು ಕಾರ್ಯತಂತ್ರ ರೂಪಿಸಬೇಕು. ಪಕ್ಷವನ್ನು ಮತ್ತಷ್ಟು ಸದೃಢವಾಗಿಸಲು ವಾರ್ಡ್ ಅಧ್ಯಕ್ಷರನ್ನು ನೇಮಿಸಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರು ಅಭ್ಯರ್ಥಿಯ ಗೆಲವಿಗಾಗಿ ದುಡಿಯುವಂತೆ ಶಾಸಕ ಸಂದೇಶ್ ನಾಗರಾಜ್ ಕರೆ ನೀಡಿದರು.
ನಗರಾಧ್ಯಕ್ಷ ರಾಜಣ್ಣ, ಕಾರ್ಯಾಧ್ಯಕ್ಷ ಎಸ್‌ಬಿಎಂ ಮಂಜು, ಉಪಮೇಯರ್ ವಿ. ಶೈಲೇಂದ್ರ, ಪಾಲಿಕೆ ಸದಸ್ಯರಾದ ಕೆಂಪಣ್ಣ, ಶಿವಣ್ಣ, ಟಿ.ಕೆ. ಚಲುವೇಗೌಡ, ಮಹದೇವಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಹಿಂದುಳಿದ ವರ್ಗಗಳ ಸಭೆ
ಮೈಸೂರು: ಜೆಡಿಎಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಪಿ. ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಇತ್ತೀಚೆಗೆ ಪಕ್ಷದ ಕಚೇರಿಯಲ್ಲಿ ನಡೆದ ಸಮಾರಂಭವನ್ನು ಮೇಯರ್ ಎನ್.ಎಂ. ರಾಜೇಶ್ವರಿ ಉದ್ಘಾಟಿಸಿದರು. ಇದೇ ವೇಳೆ ಇತರೆ ಪಕ್ಷಗಳ ಹಿಂದುಳಿದ ವರ್ಗಗಳ ಕಾರ್ಯಕರ್ತರು ಜೆಡಿಎಸ್‌ಗೆ ಸೇರ್ಪಡೆಯಾದರು. ಪದಾಧಿಕಾರಿಗಳಾದ ಬಿ.ಎಂ.ನಟರಾಜು, ಅನುಸೂಯಮ್ಮ, ಎಂ.ಶಿವಣ್ಣ, ಸಿ.ರಮೇಶ್, ಆರ್. ಮಹದೇವಪ್ಪ, ಎಸ್‌ಬಿಎಂ ಮಂಜು, ಟಿ.ದೇವರಾಜು, ವೇಣುಗೋಪಾಲ್, ಫಾಲ್ಕನ್ ಬೋರೇಗೌಡ, ರಿಜ್ವಾನ್ ಅಹಮ್ಮದ್, ಆರ್.ಎಲ್. ಅನಂತನಾರಾಯಣ್, ರಾಜ್‌ಗೋಪಾಲಾಚಾರ್, ಎಚ್. ಶ್ರೀನಿವಾಸಗೌಡ, ಎಸ್.ಕೆ. ದೇವರಾಜ್ ಇದ್ದರು.
ಒಬ್ಬರಿಂದ 2 ನಾಮಪತ್ರ ಸಲ್ಲಿಕೆ
ಮೈಸೂರು: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರಕ್ಕೆ ಮೊದಲ ದಿನವಾದ ಬುಧವಾರ ಒಬ್ಬ ಅಭ್ಯರ್ಥಿ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಸಂಯುಕ್ತ ಜನತಾದಳ ಪಕ್ಷದ ವತಿಯಿಂದ ಹಾಗೂ ಪಕ್ಷೇತರವಾಗಿ ಎಸ್.ಪಿ. ಮಹದೇವಪ್ಪ ಅವರು ನಾಮಪತ್ರ ಸಲ್ಲಿಸಿದ್ದಾರೆ.
ನಾನಾ ಪಕ್ಷಗಳಿಗೆ ಅಧ್ಯಕ್ಷರು, ಕಾರ್ಯದರ್ಶಿ ನೇಮಕ
ಮೈಸೂರು: ಜೆಡಿಎಸ್ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದಶಿಯಾಗಿ ಚಾಮರಾಜ ಮೊಹಲ್ಲಾದ ಜಗನ್ನಾಥ್, ಚಾಮರಾಜ ಕ್ಷೇತ್ರದ ಅಧ್ಯಕ್ಷರಾಗಿ ಹೆಬ್ಬಾಳ್‌ನ ಸ್ವಾಮಿ, ಸಾಹುಕಾರ್ ಚೆನ್ನಯ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ 57ನೇ ವಾರ್ಡ್‌ನ ಅಧ್ಯಕ್ಷರಾಗಿ ವಿದ್ಯಾನಗರದ ಮೀನಾಕುಮಾರಿ, ಹಿಂದುಳಿದ ವರ್ಗಗಳ ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಿದ್ಯಾನಗರದ ಎಸ್.ಜಿ. ಕುಸುಮಾ, ಜೆಡಿಎಸ್ ಕಾರ್ಯಕಾರಿ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಆರ್. ಮುದ್ದುರಾಜು, ನಗರ ಕಾಂಗ್ರೆಸ್ ಸಮಿತಿಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಎಂ.ಬಿ. ಕೊಟ್ರೇಶ್‌ಬಾಬು ಅವರನ್ನು ನೇಮಕ ಮಾಡಲಾಗಿದೆ.
4,500 ಅಕ್ರಮ ಸೀರೆಗಳ ವಶ
ಮೈಸೂರು: ತಮಿಳುನಾಡಿನಿಂದ ಸಾಗಿಸಲಾಗುತ್ತಿದ್ದ 4,500 ಸೀರೆಗಳನ್ನು ಚುನಾವಣಾ ಕ್ಷಿಪ್ರಪಡೆ ಅಧಿಕಾರಿಗಳು ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿರುವ ಘಟನೆ ಬುಧವಾರ ನಡೆದಿದೆ. ನಂಜನಗೂಡು ರಸ್ತೆ ಬಂಡಿಪಾಳ್ಯ ಸಮೀಪದಲ್ಲಿ ಯಾವುದೇ ದಾಖಲೆ ಇಲ್ಲದ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ತಮಿಳುನಾಡಿನಿಂದ ಕೆ.ಆರ್. ನಗರ, ಕೆ.ಆರ್. ಪೇಟೆಗೆ ಸೀರೆ ಸಾಗಿಸಲಾಗುತ್ತಿತ್ತು. ಆದರೆ, ಸೀರೆಗಳ ಸಂಬಂಧ ಯಾವುದೇ ದಾಖಲಾತಿಗಳು ಇರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

