ತತ್ವಶಾಸ್ತ್ರಕ್ಕೆ ವಿವೇಕರು ಸೀಮಿತ ಬೇಡ
ಕ.ಪ್ರ.ವಾರ್ತೆ ಮೈಸೂರು ಮಾ. 25
ಸ್ವಾಮಿ ವಿವೇಕಾನಂದರನ್ನು ಕೇವಲ ತತ್ವಶಾಸ್ತ್ರಕ್ಕೆ ಸೀಮಿತಗೊಳಿಸಬಾರದು ಎಂದು ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಸಂಸ್ಥಾಪಕ ಹಾಗೂ ಸಂದರ್ಶಕ ಪ್ರಾಧ್ಯಾಪಕ ಡಾ.ಆರ್. ಬಾಲಸುಬ್ರಹ್ಮಣ್ಯಂ ಹೇಳಿದರು.
ಮೈಸೂರು ವಿವಿಯ ಸ್ವಾಮಿ ವಿವೇಕಾನಂದ ಪೀಠದ ತತ್ವಶಾಸ್ತ್ರ ಅಧ್ಯಯನ ವಿಭಾಗದ ವತಿಯಿಂದ ಮಾನಸಗಂಗೋತ್ರಿಯ ಸಂಸ್ಥೆ ಸಭಾಂಗಣದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧರ್ಮದ ನೆಲೆಯಲ್ಲಾಗಲಿ, ಆಧ್ಯಾತ್ಮಿಕ ದೃಷ್ಟಿಯಲ್ಲಾಗಲಿ ಅಥವಾ ತತ್ವಶಾಸ್ತ್ರಕ್ಕಾಗಲಿ ಸ್ವಾಮಿ ವಿವೇಕಾನಂದರನ್ನು ಸೀಮಿತಗೊಳಿಸಬಾರದು. ಅವರು ಇಡೀ ಸಮಾಜಕ್ಕೆ ಸೇರಿದವರು. ಅವರನ್ನು ಅಂತಹ ಸಂಪ್ರದಾಯಗಳ ಬಂಧನದಿಂದ ಹೊರತರಬೇಕು ಎಂದರು.
ವಿವೇಕಾನಂದರ ಪ್ರೇರಣೆಯಿಂದಾಗಿ ನಾನು ಇಂದು ಈ ಸ್ಥಾನದಲ್ಲಿ ನಿಲ್ಲುವಂತಾಗಿದೆ. ಇಷ್ಟಪಟ್ಟು ವೈದ್ಯನಾಗಬೇಕೆಂದು ಬಯಸಲಿಲ್ಲ. ಎಂಜಿನಿಯರಿಂಗ್ ಸೀಟು ಸಿಗದ ಕಾರಣ ಎಂಬಿಬಿಎಸ್ಗೆ ಸೇರಿದೆ. ಕಾಲೇಜಿನಲ್ಲಿ ರ್ಯಾಗಿಂಗ್ ತಡೆಯಲಾರದೆ ಚಕ್ಕರ್ ಹಾಕಿ, ರಾಮಕೃಷ್ಣ ಮಠಕ್ಕೆ ಹೋಗಿ ಕಾಲಹರಣ ಮಾಡುತ್ತಿದ್ದೆ ಹಾಗೂ ಗ್ರಂಥಾಲಯದಲ್ಲಿ ಅಧ್ಯಯನ ಮಾಡುತ್ತಿದ್ದೆ ಎಂದು ಸ್ಮರಿಸಿದರು.
ಆಧ್ಯಾತ್ಮಿಕ ಚಿಂತನೆ ಅಗತ್ಯ: ರಾಮಕೃಷ್ಣ ಆಶ್ರಮದಲ್ಲಿ ನನ್ನನ್ನು ನೋಡುತ್ತಿದ್ದ ಸ್ವಾಮೀಜಿಯವರು ಕರೆದುಕೊಂಡು ಹೋಗಿ ಊಟ ಹಾಕುತ್ತಿದ್ದರು. ಅಲ್ಲಿಂದ ಒಡನಾಟ ಬೆಳೆಯಿತು. ಆಧ್ಯಾತ್ಮಿಕ ಹಾಗೂ ನೈತಿಕ ಚಿಂತನೆ ಬೆಳೆಸಿಕೊಂಡೆ. ವಿವೇಕಾನಂದರ ವಿಚಾರ ತಿಳಿದು, ಅವರ ತತ್ವ ಅದರ್ಶಗಳನ್ನು ಅಳವಡಿಸಿಕೊಂಡೆ. ಇಂದಿನ ಯುವಜನತೆ ಅವರ ವಿಚಾರಧಾರೆಗಳನ್ನು ರೂಢಿಸಿಕೊಳ್ಳಬೇಕು ಎಂದರು.
ವಿಭಾಗ ಅಧ್ಯಕ್ಷ ಡಾ.ಎಚ್.ಎಲ್. ಚಂದ್ರಶೇಖರ್ ಮಾತನಾಡಿ, ಪ್ರತಿವರ್ಷ ಒಬ್ಬೊಬ್ಬ ಮಹನೀಯರನ್ನು ಸಂದರ್ಶಕ ಪ್ರಾಧ್ಯಾಪಕರಾಗಿ ಕರೆದು ಉಪನ್ಯಾಸ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿ ಸಂದರ್ಶಕ ಪ್ರಾಧ್ಯಾಪಕರಾಗಿ ಡಾ.ಆರ್. ಬಾಲಸುಬ್ರಹ್ಮಣ್ಯಂ ಅವರನ್ನು ನೇಮಕ ಮಾಡಲಾಗಿದೆ ಎಂದರು.
ವಿಭಾಗದ ಹಿರಿಯ ಪ್ರಾಧ್ಯಾಪಕ ರಾಮಚಂದ್ರ, ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿರುವ ಸಾಹಿತಿ ಡಾ.ಪ್ರಭುಶಂಕರ, ಪ್ರೊ.ಪ್ರಭುಪ್ರಸಾದ್ ಹಾಗೂ ಪ್ರೊ.ರೇವಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

