ಬೈಕ್ ಸವಾರನಿಗೆ ಪೇದೆ ಕಲ್ಲೇಟು: ಆರೋಪ
ಮೈಸೂರು: ಹೆಲ್ಮೆಟ್ ತಪಾಸಣೆ ಮಾಡುತ್ತಿದ್ದ ಸಂಚಾರ ಪೊಲೀಸ್ ಪೇದೆ ಬೈಕ್ ಸವಾರನಿಗೆ ಕಲ್ಲಲ್ಲಿ ಹೊಡೆದಿದ್ದಾರೆ ಎಂದು ಆರೋಪಿಸಿ ಜಯನಗರದ ಇಸ್ಕಾನ್ ಬಳಿ ಬುಧವಾರ ಸಂಜೆ ಸಾರ್ವಜನಿಕರು ಪ್ರತಿಭಟಿಸಿದರು.
ಸಂಚಾರ ಪೊಲೀಸರು ಅವೈಜ್ಞಾನಿಕವಾಗಿ ದ್ವಿಚಕ್ರವಾಹನ ತಪಾಸಣೆ ನಡೆಸುತ್ತಿದ್ದಾರೆ. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದವರ ಫೋಟೋ ತೆಗೆದು, ದಂಡ ವಿಧಿಸುವ ಪದ್ಧತಿ ಚಾಲ್ತಿಯಲ್ಲಿದೆ. ಹೀಗಿದ್ದರೂ ತಪಾಸಣೆ ನೆಪದಲ್ಲಿ ಪೇದೆ ಕಲ್ಲಿನಲ್ಲಿ ಹೊಡೆದಿದ್ದಾರೆ. ಇದರಿಂದ ಆಯತಪ್ಪಿದ ಬೈಕ್ ಸವಾರರು ಮೋರಿಗೆ ಬಿದ್ದಿದ್ದಾರೆ ಎಂದು ಅವರು ದೂರಿದರು.
ಚಿಕ್ಕಹರದನಹಳ್ಳಿ ನಿವಾಸಿ ಕೃಷ್ಣಪ್ಪ ಎಂಬವರ ಪುತ್ರ ಜಗದೀಶ್ ಮತ್ತು ಆತನ ಸ್ನೇಹಿತ ಜಯಂತ್ಗೌಡ ಬೈಕಿನಲ್ಲಿ ಜಯನಗರದಿಂದ ಕುವೆಂಪುನಗರದ ಕಡೆಗೆ ಹೋಗಿದ್ದಾರೆ. ಈ ವೇಳೆ ವಾಹನ ತಪಾಸಣೆ ನಡೆಸುತ್ತಿದ್ದ ಸಂಚಾರ ಪೊಲೀಸರು, ಬೈಕ್ ನಿಲ್ಲಿಸುವಂತೆ ತಡೆದಿದ್ದು, ಜಯಂತ್ಗೌಡ ಗಲಿಬಿಲಿಗೊಂಡು ಮೋರಿ ಒಳಗೆ ಬಿದ್ದಿದ್ದಾರೆ. ಇದರಿಂದ ರೊಚ್ಚಿಗೆದ್ದ ಸಾರ್ವಜನಿಕರು ಸಂಚಾರ ಪೊಲೀಸರ ವಿರುದ್ಧ ಪ್ರತಿಭಟಿಸಿದರು.
ಡಿಸಿಪಿ ಎಂ.ಎಂ. ಮಹದೇವಯ್ಯ, ಕೆ.ಆರ್. ಉಪ ವಿಭಾಗದ ಎಸಿಪಿ ಬಿ.ಟಿ. ಕವಿತಾ, ನಗರ ಸಂಚಾರ ಉಪ ವಿಭಾಗ ಎಸಿಪಿ ಪ್ರಭಾಕರ ಬಿ. ಬಾರ್ಕಿ, ಕೆ.ಆರ್. ಸಂಚಾರ ಠಾಣೆಯ ಇನ್ಸ್ಪೆಕ್ಟರ್ ಎನ್.ಸಿ. ನಾಗೇಗೌಡ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ, ಪ್ರತಿಭಟನಕಾರರನ್ನು ಮನವೊಲಿಸಿದರು.
ಮಹಿಳೆ ಸಾವು
ಮೈಸೂರು: ನಗರದ ರೈಲು ನಿಲ್ದಾಣ ಬಳಿಯ ಆಟೋ ನಿಲ್ದಾಣದ ಹತ್ತಿರ ಅಸ್ವಸ್ಥಗೊಂಡು ಕೆ.ಆರ್. ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ಮಹಿಳೆಯು ಮಾ.19 ರಂದು ಮೃತಪಟ್ಟಿದ್ದಾರೆ. ಚಹರೆ- 45 ವರ್ಷ, 5.1 ಅಡಿ ಎತ್ತರ, ಸಾಧಾರಣ ಶರೀರ, ಕೋಲು ಮುಖ, ಗೋದಿ ಮೈಬಣ್ಣ, ಕಿತ್ತಳೆ ಬಣ್ಣದ ರವಿಕೆ, ಬಿಳಿ- ನೀಲಿ ಬಣ್ಣದ ಹೂವುಗಳಿರುವ ನೈಟಿ, ಕೆಂಪು ಸ್ವೆಟರ್ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ.0821- 2418313, 513 ಸಂಪರ್ಕಿಸಲು ಮಂಡಿ ಠಾಣೆ ಪೊಲೀಸರು ಕೋರಿದ್ದಾರೆ.
ಅಪರಿಚಿತ ವ್ಯಕ್ತಿ ಆತ್ಮಹತ್ಯೆ
ಮೈಸೂರು: ಮೈಸೂರು- ಬೆಂಗಳೂರು ರಸ್ತೆ ಶೋಭ ಗಾರ್ಡನ್ ಬಳಿಯ ಮರಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಪಂಚೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಚಹರೆ- 45 ವರ್ಷ, 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಕಪ್ಪು ಮೈಬಣ್ಣ, ಬಲಮಂಡಿಯ ಮೇಲೆ ಹಳೆಯ ಗಾಯದ ಗುರುತಿದೆ. ನೀಲಿ ಬನಿಯನ್ ಮತ್ತು ನಿಕ್ಕರ್, ಬಿಳಿ ಶರ್ಟ್ ಮತ್ತು ಪಂಚೆ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ.0821- 2418112, 312 ಸಂಪರ್ಕಿಸಲು ಎನ್.ಆರ್. ಠಾಣೆ ಪೊಲೀಸರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

