ಮೈಸೂರು

ಗ್ರಾಹಕ ನ್ಯಾಯಾಲಯ ಗಣಕೀಕರಣ ಸಮಸ್ಯೆ ಪರಿಹರಿಸಿ

Published On :

ಮೈಸೂರು: ಗ್ರಾಹಕ ನ್ಯಾಯಾಲಯಗಳ ಗಣಕೀಕರಣದಿಂದಾಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸಲು ಆದೇಶ ಹೊರಡಿಸುವಂತೆ ರಾಷ್ಟ್ರೀಯ ಗ್ರಾಹಕ ಆಯೋಗ ಹಾಗೂ ರಾಜ್ಯ ಗ್ರಾಹಕ ಆಯೋಗಕ್ಕೆ ಮೈಸೂರು ಗ್ರಾಹಕ ಪರಿಷತ್ತಿನ ವಿಶ್ವಾಶ್ ಕೃಷ್ಣ ಪತ್ರ ಬರೆದು ಮನವಿ ಮಾಡಿದ್ದಾರೆ. ಅಂತರ್ಜಾಲ ವ್ಯವಸ್ಥೆ ಅನುಷ್ಠಾನದಲ್ಲಿ ಹಲವಾರು ನ್ಯೂನತೆಗಳಿರುವುದರಿಂದ ಉದ್ದೇಶಿತ  ಅನುಕೂಲಗಳು ಸಿಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ. ಅನೇಕ ಗ್ರಾಹಕ ನ್ಯಾಯಾಲಯ ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಮತ್ತು ತಮ್ಮ ತೀರ್ಪುಗಳನ್ನು ಸಕಾಲದಲ್ಲಿ ಜಾಲತಾಣಕ್ಕೆ ಹಾಕುತ್ತಿಲ್ಲ. ಸಂಪನ್ಮೂಲಗಳ ಇಲ್ಲವೇ ನುರಿತ ಸಿಬ್ಬಂದಿಯ ಅಭಾವವೂ ಈ ಪರಿಸ್ಥಿತಿಗೆ ಕಾರಣವಿರಬಹುದು. ರಾಜ್ಯದ 30 ಜಿಲ್ಲಾ ವೇದಿಕೆಗಳಲ್ಲಿ ಕೇವಲ 17 ಮಾತ್ರ ಸದ್ಯೋಚಿತವಾಗಿವೆ ಈ ನಿಟ್ಟಿನಲ್ಲಿ ಆಯೋಗವು ಕಟ್ಟುನಿಟ್ಟಾದ ಆದೇಶ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.   

ನಾಳೆ ನಗರದ ಹಲವೆಡೆ ಯುಗಾದಿ ಕಾರ್ಯಕ್ರಮ

ಮೈಸೂರು: ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಾ. 31ರ ಬೆಳಗ್ಗೆ 9ಕ್ಕೆ ಸಮಸ್ತ ರಾಶಿಯವರಿಗೂ ಶನಿಶಾಂತಿ ನವಗ್ರಹ ಹೋಮ ಏರ್ಪಡಿಸಿದ್ದು, ಆಸಕ್ತರು ಮೊ. 93421-12477 ಸಂಪರ್ಕಿಸಬಹುದು. ಬೋಗಾದಿ 2ನೇ ಹಂತದ ಯಾಜ್ಞವಲ್ಕ್ಯ ಶುಕ್ಲ ಯಜುರ್ವೇದ ಮಹಾಸಭಾದಲ್ಲಿ ಮಾ. 31ರ ಸಂಜೆ 6ಕ್ಕೆ ಚಂದ್ರಮಾನ ಯುಗಾದಿ ಆಚರಣೆ ಏರ್ಪಡಿಸಲಾಗಿದೆ ಎಂದು ಕಾರ್ಯದರ್ಶಿ ಎನ್. ರಾಮಕೃಷ್ಣ ತಿಳಿಸಿದ್ದಾರೆ. ದೇವರಾಜ ಮೊಹಲ್ಲಾದ ಆರ್ಯ ಸಮಾಜದಲ್ಲಿ ಮಾ. 31ರ ಬೆಳಗ್ಗೆ 10.30ಕ್ಕೆ ಚಂದ್ರಮಾನ ಯುಗಾದಿ ವರ್ಷಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಸಿ. ಶಿವಣ್ಣ ತಿಳಿಸಿದ್ದಾರೆ. ಸಂಸ್ಕಾರ ಭಾರತಿಯಿಂದ ಮಾ. 31ರ ಬೆಳಗ್ಗೆ 5.30ಕ್ಕೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ಹೊಸ ವರ್ಷಾಚರಣೆ ಏರ್ಪಡಿಸಿದ್ದು, ಡಾ.ಶ್ರೀಲತಾ ಮತ್ತು ತಂಡದಿಂದ ಶಾಸ್ತ್ರೀಯ ಸಂಗೀತ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.