'ಕಾಂಗ್ರೆಸ್-ಬಿಜೆಪಿಯಿಂದ ಅಭಿವೃದ್ಧಿ ಅಸಾಧ್ಯ'
ಬನ್ನೂರು: ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ರೈತರ, ಶೋಷಿತರ ಅಭಿವೃದ್ಧಿಗೆ ಶ್ರಮಿಸದೇ ರಾಷ್ಟ್ರದ ಜನತೆಯನ್ನು ಕತ್ತಲೆಯ ಲೋಕಕ್ಕೆ ತಳ್ಳುವ ಪಕ್ಷಗಳಾಗಿದ್ದು, ರಾಷ್ಟ್ರದ ಅಭಿವೃದ್ಧಿ ಅವರಿಂದ ಅಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದೂರಿದರು.ಪಟ್ಟಣದ ಶಿವ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಲೋಕಸಭಾ ಚುನಾವಣೆ ಅಂಗವಾಗಿ ಮಾಜಿ ಶಾಸಕಿ ಜೆ.ಸುನಿತಾ ವೀರಪ್ಪಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದದರು.ಶಾಸಕರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಚಿಕ್ಕಮಾದು, ಜಿಪಂ ಸದಸ್ಯ ಡಾ.ಎಸ್.ಕೆ. ವೀರಪ್ಪಗೌಡ, ಎಸ್. ಸಿದ್ದೇಗೌಡ, ರಾಧಾಕೃಷ್ಣ, ತಾಪಂ ಸದಸ್ಯರು, ಪುರಸಭಾ ಸದಸ್ಯರು, ಜೆಡಿಎಸ್ ಕಾರ್ಯಕರ್ತರು ಇದ್ದರು.
ಸಿಎಂ ಕನ್ನಡ ವಿರೋಧಿ ಹೇಳಿಕೆಗೆ ಕನ್ನಡ ವೇದಿಕೆ ಖಂಡನೆ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಜನ ನಿಮ್ಮನ್ನು ಆಯ್ಕೆ ಮಾಡಿರುವುದು ಕರ್ನಾಟಕ, ಕನ್ನಡ ಉದ್ಧಾರ ಮಾಡಿ ಅಂತ. ಅದನ್ನು ಬಿಟ್ಟು ನೀವು ಕನ್ನಡ ಭಾಷೆಗೆ ಕೊಡಲಿ ಪೆಟ್ಟು ನೀಡುತ್ತಿದ್ದೀರಿ ಎಂದು ಮೈಸೂರು ಕನ್ನಡ ವೇದಿಕೆ ಟೀಕಿಸಿದೆ. ಕುಗ್ರಾಮದಲ್ಲಿ ಹುಟ್ಟಿದ ನೀವು ಕನ್ನಡ ಭಾಷೆಯಲ್ಲಿಯೇ ಅಧ್ಯಯನ ಮಾಡಿ ಮುಖ್ಯಮಂತ್ರಿಯಾಗಿದ್ದೀರಿ. ಲೋಕಸಭೆಗೆ ಸ್ಪರ್ಧಿಸುತ್ತಿರುವ ಮಂಡ್ಯದ ಸಿ.ಎಸ್. ಪುಟ್ಟರಾಜು ಅವರಿಗೆ ಬರೀ ಕನ್ನಡ ಬರುತ್ತದೆ ಎಂಬ ಕನ್ನಡ ವಿರೋಧಿ ಹೇಳಿಕೆ ನೀಡಿದ್ದೀರಿ. ಮುಖ್ಯಮಂತ್ರಿಯಾದ ಮೇಲೆ ಗ್ರಾಮೀಣ ಸೊಗಡು ಮರೆತು ಹೋಯಿತೆ? ತಮಗೆ ಕೇವಲ ಇಂಗ್ಲಿಷ್ ಬಲ್ಲವರು ಮಾತ್ರ ಮತ ಹಾಕಿದ್ದರೆಯೆ? ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ತಾವು ನೀಡಿರುವ ಹೇಳಿಕೆಗೆ ಕೂಡಲೇ ಕ್ಷಮೆಯಾಚಿಸಬೇಕು ಎಂದು ವೇದಿಕೆ ಅಧ್ಯಕ್ಷ ಎಸ್. ಬಾಲಕೃಷ್ಣ ಒತ್ತಾಯಿಸಿದ್ದಾರೆ.
ಬೇವು- ಬೆಲ್ಲ ಹಂಚಿ ಮತಯಾಚನೆ ಇಂದು
ಮೈಸೂರು: ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ವತಿಯಿಂದ ಸೋಮವಾರ ಬೇವು-ಬೆಲ್ಲ ಹಂಚಿ ಮತಯಾಚಿಸಲಾಗುವುದು. ವಿದ್ಯಾರಣ್ಯಪುರಂ ಸಮೀಪದ ದೇವರಾಜ ಸ್ಲಂನಲ್ಲಿ ಸೋಮವಾರ ಬೆಳಗ್ಗೆ 10.30ಕ್ಕೆ ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ್ಸಿಂಹ ಮತ್ತು ಮಾಜಿ ಸಚಿವ ಎಸ್.ಎ. ರಾಮದಾಸ್ ಅವರು ಸ್ಲಂ ನಿವಾಸಿಗಳಿಗೆ ಬೇವು- ಬೆಲ್ಲ ಹಂಚಿ ಮತಯಾಚಿಸುವರು. ಅಲ್ಲದೆ, ನಗರದ ಪ್ರಮುಖ ಸ್ಥಳಗಳಲ್ಲಿ ಎಲ್ಇಡಿ ವಾಹನ ಸಂಚರಿಸಿ ಬಿಜೆಪಿ ಪ್ರಚಾರ ನಡೆಸುವುದು ಎಂದು ನಗರ ಬಿಜೆಪಿ ವಕ್ತಾರ ಮೋಹನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

