ಮೈಸೂರು

ತಂಪಾದ ಭೂ ತಾಯಿ!

Published On :

ಕ.ಪ್ರ.ವಾರ್ತೆ ,  ಮೈಸೂರು ,  ಮೇ 3
ಮೈಸೂರು ಜಿಲ್ಲಾದ್ಯಂತ ಶುಕ್ರವಾರ ರಾತ್ರಿಯಿಂದ ಶನಿವಾರ ಬೆಳಗಿನವರೆಗೆ ಮಳೆಯಾಗಿದೆ. ಇದು ಭರಣಿ ಮಳೆಯಾಗಿದ್ದು, ಇದರಿಂದ ಕೃಷಿ ಚಟುವಟಿಕೆಗಳು ತೀವ್ರಗೊಂಡಿವೆ.
ಮೇ ತಿಂಗಳಲ್ಲಿ ಎಚ್.ಡಿ. ಕೋಟೆ ತಾಲೂಕಿನಲ್ಲಿ 11.6 ಮಿಮೀ ಮಳೆಯಾಗಬೇಕಿತ್ತು. ಆದರೆ ಈವರೆಗೆ 55.7 ಮಿಮೀ ಮಳೆಯಾಗಿದೆ. ಹುಣಸೂರು ತಾಲೂಕಿನಲ್ಲಿ 9.2 ಮಿಮೀ ಬದಲು 33.8, ಕೆ.ಆರ್. ನಗರ ತಾಲೂಕಿನಲ್ಲಿ 8.4 ಮಿಮೀ ಬದಲು 37.3, ಮೈಸೂರು ತಾಲೂಕಿನಲ್ಲಿ 12.4 ಮಿಮೀ ಬದಲು 28.1, ನಂಜನಗೂಡು ತಾಲೂಕಿನಲ್ಲಿ 12.43 ಮಿಮೀ ಬದಲು 22, ಪಿರಿಯಾಪಟ್ಟಣ ತಾಲೂಕಿನಲ್ಲಿ 9.3ಮಿಮೀ ಬದಲು 27.6, ಟಿ. ನರಸೀಪುರ ತಾಲೂಕಿನಲ್ಲಿ 11.4 ಮಿಮೀ ಬದಲು 9,3 ಮಿಮೀ ಮಳೆ ಬಿದ್ದಿದೆ. ಅಲ್ಲಿಗೆ ಟಿ. ನರಸೀಪುರ ತಾಲೂಕು ಹೊರತುಪಡಿಸಿದೆ ಉಳಿದೆಲ್ಲಾ ಕಡೆ ಭಾರಿ ಮಳೆಯಾಗಿದೆ.
ಈ ವರ್ಷದ ಜನವರಿಯಿಂದ ಮೇ 3ರವರೆಗೆ ಎಚ್.ಡಿ. ಕೋಟೆ ತಾಲೂಕಿನಲ್ಲಿ ವಾಡಿಕೆ ಮಳೆ 110.6 ಮಿಮೀ ಆದರೆ 120 ಮಿಮೀ ಮಳೆಯಾಗಿದೆ. ಅದೇ ರೀತಿ ಹುಣಸೂರು ತಾಲೂಕಿನಲ್ಲಿ 94.4 ಮಿಮೀ ಬದಲು 84.4, ಕೆ.ಆರ್. ನಗರ ತಾಲೂಕಿನಲ್ಲಿ 79.8 ಮಿಮೀ ಬದಲು 99.4, ಮೈಸೂರು ತಾಲೂಕಿನಲ್ಲಿ 90.7 ಮಿಮೀ ಬದಲು 72.8, ನಂಜನಗೂಡು ತಾಲೂಕಿನಲ್ಲಿ 87.6 ಮಿಮೀ ಬದಲು 87.7, ಪಿರಿಯಾಪಟ್ಟಣ ತಾಲೂಕಿನಲ್ಲಿ 77.5 ಮಿಮೀ ಬದಲು 82.7, ಟಿ. ನರಸೀಪುರ ತಾಲೂಕಿನಲ್ಲಿ 85.9 ಮಿಮೀ ಬಜಲು 49.9 ಮಿಮೀ ಮಳೆಯಾಗಿದೆ.
ಜನವರಿಯಿಂದ ಇಲ್ಲಿಯವರೆಗೆ ಒಟ್ಟಾರೆಯಾಗಿ ತೆಗೆದುಕೊಂಡಲ್ಲಿ ಹುಣಸೂರು, ಮೈಸೂರು ಹಾಗೂ ಟಿ. ನರಸೀಪುರ ತಾಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಹುಣಸೂರಿನಲ್ಲಿ 10, ಮೈಸೂರಿನಲ್ಲಿ 18 ಮಿಮೀ ಕಡಿಮೆಯಾದರೆ, ಟಿ. ನರಸೀಪುರದಲ್ಲಿ 36 ಮಿಮೀ ಕಡಿಮೆ ಮಳೆಯಾಗಿದೆ.
ಸಿಹಿ ಕಹಿ: ಮೈಸೂರು, ಟಿ. ನರಸೀಪುರ, ಕೆ.ಆರ್. ನಗರ ಹಾಗೂ ನಂಜನಗೂಡು ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಿಸಿದೆ. ಎಚ್.ಡಿ. ಕೋಟೆ, ಪಿರಿಯಾಪಟ್ಟಣ ಹಾಗೂ ಹುಣಸೂರು ಅರೆ ಮಲೆನಾಡು ಪ್ರದೇಶ. ಹೀಗಾಗಿ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಇಲ್ಲ.
ಜಂಟಿ ಕೃಷಿ ನಿರ್ದೇಶಕ ಮಹಾಂತೇಶಪ್ಪ ಅವರ ಪ್ರಕಾರ, ಜಿಲ್ಲೆಯಲ್ಲಿ ಮಂಗಾರು ಚುರುಕುಗೊಂಡಿರುವುದರಿಂದ ಈಗಾಗಲೇ ಎರರಡು- ಮೂರು ಹದ ಮಳೆ ಬಿದ್ದು, ರೈತರು ಭೂಮಿ ಹಸನು ಮಾಡಿಕೊಂಡಿರುವುದರಿಂದ ಈಗ ಬಿತ್ತನೆ ಕಾರ್ಯ ಶುರು ಮಾಡಿದ್ದಾರೆ. ಹೀಗಾಗಿ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜ ಮಾರಾಟ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಮಾರುಕಟ್ಟೆ ಮಂಡಳಿ ಹಾಗೂ ಖಾಸಗಿಯವರ ಮೂಲಕ ರಸಗೊಬ್ಬರ ಮಾರಾಟಕ್ಕೂ ಅವಕಾಶ ಮಾಡಲಾಗಿದೆ. ಹತ್ತಿ ಹೊರತುಪಡಿಸಿ ಇತರೆಲ್ಲಾ ಬೆಳೆಗಳ ಬಿತ್ತನೆ ಬೀಜ ರಿಯಾಯ್ತಿ ದರದಲ್ಲಿ ಸಿಗಲಿದ್ದು, ರೈತರು ಸದುಪಯೋಗ ಮಾಡಿಕೊಳ್ಳಬೇಕು. ರೈತರು ಬಿಟಿ ಹತ್ತಿ, ಅಲಸಂದೆ, ಹೆಸರು, ಉದ್ದು, ತೊಗರಿ ಮೊದಲಾದ ದ್ವಿದಳ ಧಾನ್ಯ, ಹೈಬ್ರಿಡ್ ಜೋಳ, ಸೂರ್ಯಕಾಂತಿ, ಮೆಕ್ಕೆಜೋಳ ಬಿತ್ತನೆ ಮಾಡುತ್ತಿದ್ದಾರೆ.
ಶುಕ್ರವಾರ ತಾಲೂಕುವಾರು ಬಿದ್ದಿರುವ ಮಳೆಯ ಪ್ರಮಾಣ ಮಿಮೀಗಳಲ್ಲಿ ಆವರಣದಲ್ಲಿರುವುದು ವಾಡಿಕೆ ಮಳೆ.
ಎಚ್.ಡಿ. ಕೋಟೆ    23 (3.5)
ಹುಣಸೂರು    22 (2.7)
ಕೆ.ಆರ್. ನಗರ     30.4 (3.3)
ಮೈಸೂರು    17.7 (3.5)
ನಂಜನಗೂಡು     8 (3.6)
ಪಿರಿಯಾಪಟ್ಟಣ    20.9 (3)        
ಟಿ. ನರಸೀಪುರ     5.6 (3.6)
ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಮಾರಾಟ
ರಾಜ್ಯ ಸರ್ಕಾರ ಕೊನೆಗೂ ರಿಯಾಯ್ತಿ ದರದಲ್ಲಿ ಬಿತ್ತನೆ ಬೀಜ ಮಾರಾಟ ಆದೇಶ ಹೊರಡಿಸಿದೆ. ವಿವಿಧ ಬೆಳೆಗಳಿಗೆ ಸಿಗುವ ರಿಯಾಯ್ತಿ ದರ ಈ ಕೆಳಕಂಡಂತಿದೆ.
ಬೆಳೆ    ವಿವರ    ವಿಧ    ರಿಯಾಯ್ತಿ ದರ    ಪ್ರತಿ ಕೆಜಿಗೆ
ಬತ್ತ    ಸಾರ್ವಜನಿಕ ತಳಿ    ಪ್ರಮಾಣಿತ/ ನಿಜ ಚೀಟಿ    10    9
ಹೈ ಬತ್ತ    ಸಂಕರ    ಪ್ರಮಾಣಿತ/ನಿಜ ಚೀಟಿ    75    65
ರಾಗಿ    ಸಾರ್ವಜನಿಕ ತಳಿ    ಪ್ರಮಾಣಿತ/ನಿಜಚೀಟಿ    18    17
ಜೋಳ    ಸಂಕರ    ಪ್ರಮಾಣಿತ/ನಿಜಚೀಟಿ    25    24
ತೊಗರಿ    ಸಾರ್ವಜನಿಕ ತಳಿ    ಪ್ರಮಾಣಿತ/ನಿಜಚೀಟಿ    25    24
ಉದ್ದು    ಸಾರ್ವಜನಿಕ ತಳಿ    ಪ್ರಮಾಣಿತ/ನಿಜಚೀಟಿ    25    24
ಹೆಸರು    ಸಾರ್ವಜನಿಕ ತಳಿ    ಪ್ರಮಾಣಿತ/ನಿಜಚೀಟಿ    25    24
ಅಲಸಂದೆ    ಸಾರ್ವಜನಿಕ ತಳಿ    ಪ್ರಮಾಣಿತ/ನಿಜಚೀಟಿ    25    24
ನೆಲಗಡಲೆ    ಸಾರ್ವಜನಿಕ ತಳಿ    ಪ್ರಮಾಣಿತ/ನಿಜಚೀಟಿ    18    17
    ಹಳೆ ತಳಿ    ಪ್ರಮಾಣಿತ/ನಿಜಚೀಟಿ    15    14
ಸೋಯಾ ಅವರೆ    ಸಾರ್ವಜನಿಕ ತಳಿ    ಪ್ರಮಾಣಿತ/ನಿಜಚೀಟಿ    20    19
ಸಜ್ಜೆ    ಸಾರ್ವಜನಿಕ ತಳಿ    ಪ್ರಮಾಣಿತ/ನಿಜಚೀಟಿ    15    25
ಸೂರ್ಯಕಾಂತಿ    ಸಂಕರ    ಪ್ರಮಾಣಿತ/ ನಿಜಚೀಟಿ    80
ಮೆಕ್ಕೆ ಜೋಳ    ಸಂಕರ    ಪ್ರಮಾಣಿತ/ನಿಜಚೀಟಿ    50    35


-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.