ಪರಿವರ್ತನೆ ಗುರಿ ಹೊಂದಿದ್ದ ಅಂಬೇಡ್ಕರ್
ಮೈಸೂರು: ಪರಿವರ್ತನಾ ಶೀಲ ಭಾರತ ನಿರ್ಮಾಣ ಅಂಬೇಡ್ಕರ್ ಅವರ ಏಕೈಕ ಗುರಿಯಾಗಿತ್ತು ಎಂದು ಸಾಹಿತಿ ಡಾ.ಮ.ನ. ಜವರಯ್ಯ ಹೇಳಿದರು.
ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಭಾಷೆ ಮತ್ತು ಜ್ಞಾನವನ್ನು ಅಗತ್ಯವಾಗಿ ನೀಡಬೇಕಾದ ಜವಾಬ್ದಾರಿ ಪ್ರಾಧ್ಯಾಪಕರ ಮೇಲಿದೆ. ಗ್ರಾಮೀಣ ಮತ್ತು ಬಡಜನರ ಉದ್ಧಾರಕ್ಕಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ವಿಶ್ವವಿದ್ಯಾಲಯ ಸ್ಥಾಪಿಸದಿದ್ದರೆ ಇಂದು ಮೈಸೂರು ಶೈಕ್ಷಣಿಕ ಕೇಂದ್ರವಾಗಿ ಇರುತ್ತಿರಲಿಲ್ಲ. ಅಂಬೇಡ್ಕರ್ ಅವರ ಚಿಂತನೆಯ ಪರಿವರ್ತನಾ ಶೀಲ ಭಾರತ ನಿರ್ಮಾಣ ಆಗಬೇಕಿರುವುದೂ ನಿಮ್ಮಂತಹ ವಿದ್ಯಾರ್ಥಿಗಳಿಂದ ಎಂದರು.
ಅಂಬೇಡ್ಕರ್ ಅವರಷ್ಟು ಪಾಂಡಿತ್ಯವನ್ನು ಗಾಂಧಿ, ನೆಹರು, ರವೀಂದ್ರನಾಥ ಠ್ಯಾಗೋರ್ ಸಹ ಹೊಂದಿರಲಿಲ್ಲ. ಲಂಡನ್ನಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಅವರ ಭಾಷಣ ಕೇಳಿ, ಬ್ರಿಟನ್ ರಾಣಿ ತಮ್ಮ ಅರಮನೆಗೆ ಕರೆಸಿಕೊಂಡು ಗೌರವಿಸಿದ್ದರು. ಇಂತಹ ಪುರಸ್ಕಾರ ಮತ್ತೊಬ್ಬ ಭಾರತೀಯರಿಗೆ ದೊರಕಿಲ್ಲ. ಭಾರತಕ್ಕೆ ಸರ್ವಶ್ರೇಷ್ಠ ಸಂವಿಧಾನದ ಅಗತ್ಯವಿದೆ ಎಂದು ಯಾರಿಗೆ ಅನ್ನಿಸಿರಲಿಲ್ಲ. ಆದರೆ ಅಂಬೇಡ್ಕರ್ ಅದನ್ನು ಮೊದಲ ಬಾರಿಗೆ ಪ್ರಕಟಿಸಿದ್ದಾಗಿ ಹೇಳಿದರು.
ಭಾರತ ಸಂವಿಧಾನದ ಮೂಲ ಸಿದ್ಧಾಂತವನ್ನು ಪ್ರತಿಯೊಬ್ಬರು ತಿಳಿಯಬೇಕು. ಅಲ್ಲದೆ ಅಂಬೇಡ್ಕರ್ ಅವರ ಜೀವನ ಅರಿಯಬೇಕು. ನಾನು ಪ್ರಾಧ್ಯಾಪಕನಾಗಿದ್ದಾಗ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ಅಂಬೇಡ್ಕರ್ ಅವರ ವಿಚಾರಧಾರೆ ತಿಳಿಸುತ್ತಿದ್ದೆ. ಗ್ರಾಮೀಣ ಮತ್ತು ಬಡ ಮಕ್ಕಳಾದಿಯಾಗಿ ಎಲ್ಲರಿಗೂ ಪ್ರಶ್ನೆ ಕೇಳಲು ಅವಕಾಶ ನೀಡುತ್ತಿದ್ದೆ. ನನ್ನ ಬಳಿ 2 ಕೋಟಿ ಇದ್ದರೆ ಕುಲಪತಿ ಆಗುತ್ತಿದೆ. ಆದರೆ ಆ ಜಾಯಮಾನ ನನ್ನದಲ್ಲ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಆರ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಟಿ. ರಮೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

