ಹಲ್ಲೆ ನಡೆಸಿದ್ದ ಆರೋಪಿ ಬಂಧನ
ಹುಣಸೂರು: ಪುನರ್ವಸತಿ ಕೇಂದ್ರದಲ್ಲಿ ಗಿರಿಜನರಿಗೆ ಮೀಸಲಾಗಿದ್ದ ಭೂಮಿಯಲ್ಲಿ ಅಕ್ರಮವಾಗಿ ಗುಡಿಸಲು ನಿರ್ಮಿಸಿ ಪ್ರಶ್ನಿಸಿದವರ ವಿರುದ್ಧ ಹಲ್ಲೆ ನಡೆಸಿ ತಿಂಗಳಿಂದ ನಾಪತ್ತೆಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹನಗೋಡು ಹೋಬಳಿಯ ಉಡುವೇಪುರ ಗ್ರಾಮದ ತಾತನಹಳ್ಳಿ ಶಿವಣ್ಣೇಗೌಡ ಬಂಧಿತ ಆರೋಪಿ. ಈಚೆಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವಿವಿಧ ಹಾಡಿಗಳಿಂದ ಗಿರಿಜನರನ್ನು ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಪಂ ವ್ಯಾಪ್ತಿಯ ಶೆಟ್ಟಳ್ಳಿ- ಲಕ್ಕಪಟ್ಟಣದ 2ನೇ ಹಂತದ ಹೆಬ್ಬಳ್ಳ ಬಳಿಯ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಗಿರಿಜನರು ಪುನರ್ವಸತಿಗೊಂಡ ಸರ್ಕಾರಿ ಭೂಮಿಯಲ್ಲಿ ತನಗೆ 4 ಎಕರೆ ಭೂಮಿ ಸೇರಬೇಕು ಎಂದು ತಗಾದೆ ತೆಗೆದು, ಇದನ್ನು ಪ್ರಶ್ನಿಸಿದ ಗಿರಿಜನರ ಮೇಲೆ ಹಲ್ಲೆ ನಡೆಸಿದ್ದ. ಈ ಸಂಬಂಧ ವಲಯ ಅರಣ್ಯಾಧಿಕಾರಿ ಫೆಲಿಕ್ಸ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬುಧವಾರ ಗ್ರಾಮಾಂತರ ಠಾಣೆ ಎಸ್ಐ ರಾಘವೇಂದ್ರಗೌಡ ಅವರು ಆರೋಪಿ ಶಿವಣ್ಣೇಗೌಡನನ್ನು ಬಂಧಿಸಿ ಪ.ಜಾತಿ ದೌರ್ಜನ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

