ಅಂಬೇಡ್ಕರ್ ಜ್ಞಾನದಾಹಿತ್ವಕ್ಕೆ ಅಸ್ಪೃಶ್ಯತೆ ಕಾರಣ
ಮೈಸೂರು: ಅಂಬೇಡ್ಕರ್ ಅವರ ಜ್ಞಾನದಾಹಕ್ಕೆ ಅಸ್ಪೃಶ್ಯತೆ ಮೇಲಿನ ಆಕ್ರೋಶ ಕಾರಣ ಎಂದು ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ.ಸಿ. ನಾಗಣ್ಣ ಹೇಳಿದರು.
ಮೈಸೂರು ವಿವಿ ಅಭಿವೃದ್ಧಿ ಅಧ್ಯಯನ ಸಂಸ್ಥೆ ಗುರುವಾರ ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಆ ಕಾಲದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರು ತುಳಿತಕ್ಕೆ ಒಳಗಾಗಿ ಅಸ್ಪೃಶ್ಯತೆ ಅನುಭವಿಸಿದ ಕಾರಣಕ್ಕೆ ಅವರಲ್ಲಿ ಜ್ಞಾನದಾಹ ಹೆಚ್ಚಾಯಿತು. ಅರಿವು, ಔಚಿತ್ಯ ಪ್ರಜ್ಞೆ ಮತ್ತು ವಿವೇಕ ಅಂಬೇಡ್ಕರ್ ಅವರಲ್ಲಿ ವೈಚಾರಿಕ ಅಂಶಗಳನ್ನು ಹೆಚ್ಚಿಸಿತು. ಸಂವಿಧಾನ ರಚನೆ ವೇಳೆ ಈ ಎಲ್ಲಾ ಅಂಶಗಳೂ ಸೇರುವಂತೆ ಅವರು ನೋಡಿಕೊಂಡಿದ್ದಾಗಿ ಹೇಳಿದರು.
ಆಧುನಿಕ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಿದ ಬಿ.ಆರ್. ಅಂಬೇಡ್ಕರ್ ಅವರು ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದರು. ಶಿಕ್ಷಣ, ಸಂಘಟನೆಯನ್ನೇ ಮುಖ್ಯ ಗುರಿಯಾಗಿಸಿಕೊಂಡು ರಾಜಕೀಯ ವಿಷಯದಲ್ಲಿ ಪಾಂಡಿತ್ಯ ಪಡೆದರು ಎಂದು ತಿಳಿಸಿದರು.
ಮೈಸೂರು ವಿವಿ ದೇವರಾಜ ಅರಸು ಅಧ್ಯಯನ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕ ಡಾ.ಡಿ.ಎಸ್. ಮೆಶ್ರಮ್ ಮಾತನಾಡಿ, 1953ರಲ್ಲಿ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸುವ ವೇಳೆ ಅವರು ಮಾಡಿದ ಭಾಷಣವನ್ನು ನಾನು ಕೇಳಿದ್ದೆ. ಅವರ ಭಾಷಣ ನನ್ನ ಮೇಲೆ ಬಹುದೊಡ್ಡ ಪ್ರಭಾವ ಬೀರಿತು. ವಿದ್ಯಾರ್ಥಿಗಳಾದವರು ಅಂಬೇಡ್ಕರ್ ಅವರ ತತ್ವ- ವಿಚಾರ ಧಾರೆಗಳನ್ನು ಅರಿತರೆ ಬದುಕಿನ ದಿಕ್ಕನೆ ಬದಲಿಸುತ್ತದೆ ಎಂದರು.ಡಿಎಸ್ಡಿ ನಿರ್ದೇಶಕ ಪ್ರೊ.ಟಿ.ಎಂ. ಮಹೇಶ್, ಸಿಸ್ಟ್ ನಿರ್ದೇಶಕ ಪ್ರೊ.ಕೆ.ವಿ. ಅಯ್ಯಣ್ಣ ಮುಖ್ಯ ಅತಿಥಿ ಆಗಿದ್ದರು. ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

