ಮಾನ್ಯತೆ ಪಡೆಯಲು 'ನ್ಯಾಕ್' ಬೇಕು: ಡಾ. ಚನ್ನವೀರಪ್ಪ
ಕ.ಪ್ರ.ವಾರ್ತೆ ಕೆ.ಆರ್. ನಗರ ಮೇ 11
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉನ್ನತ ಶಿಕ್ಷಣ- ಉನ್ನತೀಕರಣ ಎಂಬ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಹೊಳೆನರಸೀಪುರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಚನ್ನವೀರಪ್ಪ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಕಾಲೇಜಿನ ನ್ಯಾಕ್ (ಐಕ್ಯೂಎಸಿ) ಅನುಭವ ಹಾಗೂ ಪ್ರಕ್ರಿಯೆಗೆ ಕಾಲೇಜು ಅಧ್ಯಾಪಕರು ಹಾಗೂ ಬೋಧಕೇತರು ಹೇಗೆ ಸಜ್ಜಾಗಬೇಕೆಂಬುದನ್ನು ವಿವಿರವಾಗಿ ತಿಳಿಸಿ ಮನದಟ್ಟು ಮಾಡಿದರು. ಕೆ.ಆರ್. ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ಡಾ. ಸಿದ್ದಲಿಂಗಯ್ಯ ಮಾತನಾಡಿ, ನ್ಯಾಕ್ ಸಿದ್ಧತೆ ಕುರಿತಂತೆ ಪ್ರತಿ ಅಧ್ಯಾಪಕರು ತಮ್ಮ ವೈಯಕ್ತಿಕ ಹಾಗೂ ವಿಭಾಗ ಮಟ್ಟದಲ್ಲಿ ಹೇಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಎಲ್ಲಾ ಅಧ್ಯಾಪಕರಿಗೂ ಮಾರ್ಗದರ್ಶನದ ಮಾಹಿತಿ ಪ್ರತಿಗಳನ್ನು ನೀಡಿ ವಿವರವಾಗಿ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಎಸ್.ಜಿ. ಪ್ರಕಾಶ್ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ನಮ್ಮ ಕಾಲೇಜನ್ನು ನ್ಯಾಕ್ ಪ್ರಕ್ರಿಯೆಗೆ ಹೇಗೆ ಸಜ್ಜುಗೊಳಿಸಬೇಕು. ಎಲ್ಲಾ ಅಧ್ಯಾಪಕರು ಸಕ್ರಿಯವಾಗಿ ತೊಡಗಿಸಿಕೊಂಡು ಕಾಲೇಜಿನ ಗುಣಮಟ್ಟವನ್ನು ಹೇಗೆ ಅಭಿವೃದ್ಧಿಗೊಳಿಸಬೇಕು ಎಂಬುದರ ಬಗ್ಗೆ ಸಲಹೆ ನೀಡಿದ ಅವರು ನ್ಯಾಕ್ಗಾಗಿಯೆ ನಾವು ಸಿದ್ಧರಾಗಬೇಕಿಲ್ಲ. ಇದರ ನಿರಂತರ ಪ್ರಕ್ರಿಯೆಗೆ ಸದಾ ಸಿದ್ಧರಾಗಿರಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಪ್ರಕಾಶ್, ಪ್ರಾಧ್ಯಾಪಕರಾದ ಡಾ. ಸತೀಶ್ಚಂದ್ರ, ಮಿರ್ಲೆ ಮೃತ್ಯುಂಜಯ, ನ್ಯಾಕ್ ಸಂಚಾಲಕ ಎಚ್.ಕೆ. ರಾಜೇಶ್, ಶ್ರೀನಿವಾಸ್, ಬಸವಂತ ಗುದಗತ್ತಿಯವರ್, ಮಂಜುನಾಥ್, ಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

