ಜ್ಞಾನಗಂಗಾ ಶಾಲೆ
ಮೈಸೂರು: ಕುವೆಂಪುನಗರದ ಜ್ಞಾನಗಂಗಾ ವಿದ್ಯಾಪೀಠಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 94.40 ಫಲಿತಾಂಶ ಲಭಿಸಿದ್ದು, 33 ಮಂದಿ ಅತ್ಯುನ್ನತ ಶ್ರೇಣಿ ಹಾಗೂ 75 ಮಂದಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಅವರಲ್ಲಿ ಸಂಜಯ ಎಸ್.ಶಾಸ್ತ್ರಿ 614, ಎಂ.ಆರ್. ಸ್ವದೇಶ್ ಶ್ರೀವತ್ಸ 611, ಎ.ಎಂ. ಧನಂಜಯ 603, ಎಂ.ಎನ್. ಕಾರ್ತಿಕ 603 ಅಂಕ ಗಳಿಸಿದ್ದಾರೆ.
ಸದ್ವಿದ್ಯಾ ಶಾಲೆ
ನಗರದ ಸದ್ವಿದ್ಯಾ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.99.70 ರಷ್ಟು ಫಲಿತಾಂಶ ಬಂದಿದ್ದು, ಯು.ಬಿ. ಹೈಮಾವತಿ 620 ಅಂಕ ಗಳಿಸಿ ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ್ದಾರೆ. ಉಳಿದಂತೆ ಪರೀಕ್ಷೆ ಬರೆದ 423 ಮಂದಿಯಲ್ಲಿ 422 ಮಂದಿ ಪಾಸಾಗಿದ್ದಾರೆ. ಅವರಲ್ಲಿ 221 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ, 63 ಮಂದಿ 600ಕ್ಕೂ ಅಧಿಕ ಅಂಕ ಗಳಿಸಿದ್ದಾರೆ. ಸುಮಿತಾ ರಾವ್ 618, ಮೋನಿಷಾ ಗೌಡ 617, ಎಚ್. ಪರೀಕ್ಷಿತ್ 617, ಪ್ರಣೀತಾ 615, ಬಿ. ನಮ್ರತಾ 615, ಜಿ. ನಿರಂಜನ್, ಮೊಹಮ್ಮದ್ ಫೈದಾ, ಎಲ್. ಸಂಗೀತ, ಡಿ. ರವಿಕಿರಣ್ 614, ಶಮಿತಾ ಶೇಖರ್ 613 ಅಂಕ ಗಳಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.
ನಟರಾಜ ಶಾಲೆ
ಹೊಸಮಠದ ಶ್ರೀ ನಟರಾಜ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.80 ರಷ್ಟು ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಕುಳಿತ 45 ವಿದ್ಯಾರ್ಥಿಗಳಲ್ಲಿ ಇಬ್ಬರು ಅತ್ಯುನ್ನತ ಶ್ರೇಣಿ, 10 ಮಂದಿ ಪ್ರಥಮ, 12 ಮಂದಿ ದ್ವಿತೀಯ ಹಾಗೂ 16 ಮಂದಿ ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
ಒಡನಾಡಿ ಸಾಧನೆ
ಮೈಸೂರು: ಒಡನಾಡಿ ಸೇವಾ ಸಂಸ್ಥೆಗೆ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ಲಭಿಸಿದ್ದು, ಶುಬಾನ 354 ಹಾಗೂ ಎಸ್. ರೇಷ್ಮಾ 276 ಅಂಕ ಗಳಿಸಿದ್ದಾರೆ ಎಂದು ಪ್ರಭಾಮಣಿ ತಿಳಿಸಿದ್ದಾರೆ.
ಕಲಾಭಾರತಿ ಶಾಲೆ
ತಾಲೂಕಿನ ಇಲವಾಲದ ಕಲಾಭಾರತಿ ವಿದ್ಯಾಸಂಸ್ಥೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದ್ದು, ನಾಲ್ವರು ಅತ್ಯುನ್ನತ ಶ್ರೇಣಿ, 21 ಮಂದಿ ಪ್ರಥಮ, 14 ಮಂದಿ ದ್ವಿತೀಯ ಹಾಗೂ 23 ಮಂದಿ ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಅವರಲ್ಲಿ ಎಸ್.ದೀಪಿಕಾ 555, ಎಸ್. ಆದರ್ಶ್ 540, ವೈ. ವಿನುತಾ 540, ಬಿ.ಸಿ. ವಿನಯ್ 534 ಅಂಕ ಗಳಿಸಿದ್ದಾರೆ.
ರಂಗರಾವ್ ಶಾಲೆ
ಮೇಟಗಳ್ಳಿಯಲ್ಲಿರುವ ಎನ್.ರಂಗರಾವ್ ಅಂಧ ಹೆಣ್ಣು ಮಕ್ಕಳ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಲಭಿಸಿದ್ದು, ಇಬ್ಬರು ಅತ್ಯುನ್ನತ ಶ್ರೇಣಿಯಲ್ಲಿ, 9 ಮಂದಿ ಪ್ರಥಮ, 1 ಮಂದಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
ಅನಂತಗೀತಾ
ವಿಜಯನಗರದ ಅನಂತಗೀತಾ ವಿದ್ಯಾಲಯಕ್ಕೆ ಶೇ.100 ರಷ್ಟು ಫಲಿತಾಂಶ ಬಂದಿದೆ. ಒಟ್ಟು 41 ವಿದ್ಯಾರ್ಥಿಗಳಲ್ಲಿ ಮೂವರು ಅತ್ಯುನ್ನತ ಶ್ರೇಣಿ, 21 ಪ್ರಥಮ, 9 ದ್ವಿತೀಯ ಹಾಗೂ 8 ತೃತೀಯ ಸ್ಥಾನ ಪಡೆದಿದ್ದಾರೆ.
ವಿಶ್ವಮಾನವ ಶಾಲೆ
ರಾಮಕೃಷ್ಣನಗರದ ವಿಶ್ವಮಾನವ ವಿದ್ಯಾನಿಕೇತನ ಶಾಲೆಗೆ ಶೇ.96 ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 46 ಮಂದಿಯಲ್ಲಿ 13 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ, 26 ಮಂದಿ ಪ್ರಥಮ, 3 ಮಂದಿ ದ್ವಿತೀಯ ಹಾಗೂ ಇಬ್ಬರು ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
ಸಾಯಿರಂಗ ಶಾಲೆ
ಬನ್ನಿಮಂಟಪದಲ್ಲಿರುವ ಸಾಯಿರಂಗ ವಿದ್ಯಾಸಂಸ್ಥೆಯ ಕಿವುಡು ಗಂಡು ಮಕ್ಕಳ ವಸತಿಯುತ ವಿದ್ಯಾಕೇಂದ್ರಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. ಅಂಕ ಗಳಿಸಿದ್ದಾರೆ. ಈ ಶಾಲೆಗೆ 2014-15ನೇ ಸಾಲಿಗೆ 1ನೇ ತರಗತಿ ಹಾಗೂ ಇತರೆ ತರಗತಿಗಳಿಗೆ ದಾಖಲಾತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಊಟ, ವಸತಿ ಹಾಗೂ ಶಿಕ್ಷಣವನ್ನು 1 ರಿಂದ 10ನೇ ತರಗತಿವರೆಗೆ ಉಚಿತವಾಗಿ ನೀಡಲಾಗುತ್ತದೆ. ಸೇರಿಸಲಿಚ್ಛಿಸುವವರು. ಮೊ. 93421 12736, 87228 10106, ದೂ. 0821- 2496939 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

