ಎಸ್ಸೆಸ್ಸೆಲ್ಸಿ: ತಾಲೂಕಿಗೆ ಪ್ರಥಮ ಸ್ಥಾನ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಮೇ 13
ಏಪ್ರಿಲ್ನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ತಾಲೂಕಿನ ವಿದ್ಯಾರ್ಥಿಗಳಲ್ಲಿ ಶೇ.86.78 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ತಾಲೂಕು ಸತತವಾಗಿ 2ನೇ ಬಾರಿಗೂ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಕಾಯ್ದುಕೊಂಡಿದೆ.
ಒಟ್ಟು 3,222 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅವರಲ್ಲಿ 2,796 ವಿದ್ಯಾರ್ಥಿಗಳು ಉತೀರ್ಣರಾಗಿದ್ದಾರೆ. 1,562 ಗಂಡು ಮಕ್ಕಳಲ್ಲಿ 1,323 ಹಾಗೂ 1,660 ಹೆಣ್ಣು ಮಕ್ಕಳಲ್ಲಿ 1,473 ಮಕ್ಕಳು ಉತೀರ್ಣರಾಗಿದ್ದಾರೆ. ಶೇ.88.73 ಹೆಣ್ಣು ಮಕ್ಕಳು ಉತ್ತೀರ್ಣರಾಗುವ ಮೂಲಕ ಹೆಣ್ಣುಮಕ್ಕಳೆ ಮೇಲುಗೈ ಸಾಧಿಸಿದ್ದು, ಶೇ. 84.70 ಗಂಡು ಮಕ್ಕಳು ಉತ್ತೀರ್ಣರಾಗಿದ್ದಾರೆ.
ತಾಲೂಕಿನ ಗಿರಗೂರು ಮಿಳಿಂದ ಶಾಲೆ, ಬೆಟ್ಟದಪುರದ ಡಿ.ತಮ್ಮಯ್ಯ ಸ್ಮಾರಕ ನವೋದಯ ಶಾಲೆ, ಬೆಟ್ಟದಪುರದ ಎಸ್ಎಂಎಸ್ ಪ್ರೌಢಶಾಲೆ, ಪಿರಿಯಾಪಟ್ಟಣದ ಶ್ರೀ ಗುರುರೇಣುಕಾದೇವಿ ಪ್ರೌಢಶಾಲೆ ಶೇ.100 ರಷ್ಟು ಫಲಿತಾಂಶ ಪಡೆದುಕೊಂಡು ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿವೆ. ಪಂಚವಳ್ಳಿ ಸರ್ಕಾರಿ ಪ್ರೌಢಶಾಲೆ ಶೇ.67.39 ಫಲಿತಾಂಶ ಪಡೆಯುವ ಮೂಲಕ ಕಡೆಯ ಸ್ಥಾನದಲ್ಲಿದೆ.
ಉಳಿದಂತೆ ದೊಡ್ಡಕಮರವಳ್ಳಿ ಸರ್ಕಾರಿ ಶಾಲೆ ಶೇ.98.21, ಕಣಗಾಲು ದಿಡ್ಡಿಯಮ್ಮ ಪ್ರೌಢಶಾಲೆ ಶೇ. 98, ಬೆಣಗಾಲು ಸರ್ಕಾರಿ ಶಾಲೆ 97.96, ಕೊಪ್ಪ ಭಾರತಮಾತಾ ಶಾಲೆ 97.31, ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ.97.12, ಪಿರಿಯಾಪಟ್ಟಣ ಡಿಕೆಎಸ್ಎಂ ವಿದ್ಯಾಸಂಸ್ಥೆ ಶೇ.97.06, ಪಿರಿಯಾಪಟ್ಟಣ ಕಿತ್ತೂರು ರಾಣಿ ಚನ್ನಮ್ಮ ಮಾದರಿ ವಸತಿ ಶಾಲೆ ಶೇ.96.67, ಹೊನ್ನಾಪುರ ಜನಕಲ್ಯಾಣ ಟ್ರಸ್ಟ್ ಶೇ.96.55, ಪಿರಿಯಾಪಟ್ಟಣದ ಪುಷ್ಪ ಪ್ರೌಢಶಾಲೆ ಶೇ.96.36, ಕೋಮಲಾಪುರ ಶ್ರೀರಾಮ ಪ್ರೌಢಶಾಲೆ ಶೇ. 95.92, ಪಿರಿಯಾಪಟ್ಟಣ ಬಸವಾನಿಕೇತನ (ಆಂಗ್ಲ ಮಾಧ್ಯಮ) ಶೇ.95.83, ಹಾರನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ.92.77, ಚಿಕ್ಕನೇರಳೆ ಸರ್ಕಾರಿ ಶಾಲೆ ಶೇ.92.45, ಹಲಗನಹಳ್ಳಿ (ಅಲ್ಪಸಂಖ್ಯಾತರ) ಮೊರಾರ್ಜಿ ದೇಸಾಯಿ ವಸತಿ ಶಾಲೆ ಶೇ.92, ಭುವನಹಳ್ಳಿ ಸರ್ಕಾರಿ ಶಾಲೆ ಶೇ.91.58, ಹಿಟ್ಟನೆಹೆಬ್ಬಾಗಿಲು ಸರ್ಕಾರಿ ಶಾಲೆ ಶೇ. 90.70, ಹಲಗನಹಳ್ಳಿ ಸರ್ಕಾರಿ ಶಾಲೆ ಶೇ.90.63, ಹಂಡಿತವಳ್ಳಿ ಸರ್ಕಾರಿ ಶಾಲೆ ಶೇ. 90.38, ಬೆಟ್ಟದತುಂಗ ಸರ್ಕಾರಿ ಶಾಲೆ ಶೇ. 89.55, ಬೂದಿತಿಟ್ಟು ವಿವೇಕಾನಂದ ಪ್ರೌಢಶಾಲೆ ಶೇ. 89.47, ಕಿತ್ತೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಶೇ.88.89, ಆವರ್ತಿ ರಾಜೇಶ್ವರಿ ಪ್ರೌಢಶಾಲೆ ಶೇ. 88.24, ರಾವಂದೂರು ಯೋಗಿನಾರಾಯಣ ಯತೀಂದ್ರ ವಿದ್ಯಾಸಂಸ್ಥೆ ಶೇ. 87.50, ಅತ್ತಿಗೋಡಡು ಸರ್ಕಾರಿ ಶಾಲೆ ಶೇ. 86.49, ಅರಳಿಮರದ ಕೊಪ್ಪಲು ಎಂಆರ್ಪಿ ಪ್ರೌಢಶಾಲೆ ಶೇ. 85.42, ಪಿರಿಯಾಪಟ್ಟಣ ಬಸವಾನಿಕೇತನ (ಕನ್ನಡ ಮಾಧ್ಯಮ)ಪ್ರೌಢಶಾಲೆ ಶೇ. 83.87, ಬೆಟ್ಟದಪುರ ಎಸ್ಸಿವಿಡಿಎಸ್ ವಿದ್ಯಾಸಂಸ್ಥೆ ಶೇ. 83.78, ಮಾಕೊಡು ಸರ್ಕಾರಿ ಶಾಲೆ ಶೇ. 83.70, ಮುತ್ತೂರು ಸರ್ಕಾರಿ ಶಾಲೆ ಶೇ.83.58 ಪಡೆದಿವೆ.
ಪಿರಿಯಾಪಟ್ಟಣ ಮೂರಾರ್ಜಿ ದೇಸಾಯಿ ವಸತಿ ಶಾಲೆ ಶೇ. 83.33, ಕಣಗಾಲು ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಶೇ. 82.43, ದೊಡ್ಡಬೇಲಾಳು ಸರ್ಕಾರಿ ಶಾಲೆ ಶೇ. 81.44, ರಾವಂದೂರು ಸರ್ಕಾರಿ ಶಾಲೆ ಶೇ. 80.95, ಬೈಲುಕುಪ್ಪೆ ಸರ್ಕಾರಿ ಶಾಲೆ ಶೇ.77.78, ಪಿರಿಯಾಪಟ್ಟಣದ ಎಸ್ಸಿವಿಡಿಎಸ್ ಶಾಲೆಯು ಶೇ. 76.92, ಪಿರಿಯಾಪಟ್ಟಣ ಎಸ್ಕೆಎಸ್ಟಿ ಪ್ರೌಢಶಾಲೆ ಶೇ.74.32, ಪಿರಿಯಾಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು 74.27, ಕಂಪಲಾಪುರ ಸರ್ಕಾರಿ ಶಾಲೆ ಶೇ.74.19, ಹುಣಸವಾಡಿ ಸರ್ಕಾರಿ ಶಾಲೆ ಶೇ. 74.16 ಪಡೆದುಕೊಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

