ಮೈಸೂರು

ನಾಟಕದಿಂದಲೂ ಮಕ್ಕಳ ಮಾನಸಿಕ ಅಭಿವೃದ್ಧಿ

Published On :

ಕ.ಪ್ರ.ವಾರ್ತೆ    ಮೈಸೂರು    ಮೇ 13
ಮಕ್ಕಳಲ್ಲಿರುವ ನೈಜ ಪ್ರತಿಭೆ ಹೊರತರಲು ನಾಟಕ, ಕಲೆಗಳು ಸಹಾಯ ಮಾಡುತ್ತದೆ ಎಂದು ಕರ್ನಾಟಕ ಮುಕ್ತ ವಿವಿ ಬಿ.ವಿ. ಕಾರಂತ ಅಧ್ಯಯನ ಪೀಠದ ಅಧ್ಯಕ್ಷ ಸಿ. ಬಸವಲಿಂಗಯ್ಯ ಹೇಳಿದರು.
ನೇಗಿಲಯೋಗಿ ಮರುಳೇಶ್ವರ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಒಂದು ತಿಂಗಳು ಕಾಲ ನಡೆದ ಚಿಣ್ಣರ ಚಿಲಿಪಿಲಿ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವ ರೀತಿ ದಸರಾ ನಡೆಯುತ್ತದೋ, ಅದೇ ರೀತಿ ಮಕ್ಕಳ ದಸರಾ ನಡೆಯುವಂತಾಗಬೇಕು. ನಾಟಕ ಮಾಡುವುದರಿಂದ ಮಕ್ಕಳ ಮಾನಸಿಕ ಅಭಿವೃದ್ಧಿಗೆ ಸಹಾಯವಾಗುತ್ತದೆ. ತಂದೆ-ತಾಯಿ ಮತ್ತು ಮಕ್ಕಳು ಮಾತನಾಡುವ ಭಾಷೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವುದು ಹಾಗೂ ನಾಟಕಗಳು ಮಾಡುವುದು ಮತ್ತು ನೋಡುವುದಕ್ಕೆ ಸ್ವಂತ ಭಾಷೆಯಲ್ಲಿದ್ದರೆ ಸೂಕ್ತ ಎಂದು ಅಭಿಪ್ರಾಯಪಟ್ಟರು.
ನಾಟಕಗಳನ್ನು ಕನ್ನಡದಲ್ಲಿ ಮಾಡುವುದರಿಂದ ಮಕ್ಕಳಿಗೆ ಸಹಾಯವಾಗುವುದರ ಜೊತೆಗೆ ಪೋಷಕರಿಗೆ ಸಹಾಯ ಮತ್ತು ಸಂತೋಷವಾಗುತ್ತದೆ. ಶಿಬಿರದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಮಗುವಿನಿಂದ ಒಂದು ಗಿಡ ನೆಡಿಸಿ, ಅದನ್ನು ಪಾಲನೆ, ಪೋಷಣೆ ಮಾಡುವ ಜವಾಬ್ದಾರಿ ವಹಿಸುವುದು ಸೂಕ್ತ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ವರ್ಷವಿಡೀ ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಿದ್ದು, ದಣಿದಿರುತ್ತಾರೆ. ಇಂತಹ ಬೇಸಿಗೆ ಶಿಬಿರದಿಂದ ಮಕ್ಕಳಿಗೆ ಮನೋಲ್ಲಾಸಗೊಳ್ಳಲು ಸಹಾಯವಾಗುತ್ತದೆ. ಮಕ್ಕಳಲ್ಲಿರುವ ಪ್ರತಿಭೆ ಹೊರತರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೇರಳದ ತುಳು ಅಕಾಡೆಮಿ ಸದಸ್ಯ ಕೇಶವಪ್ರಸಾದ್ ಮಾತನಾಡಿ, ಕಾಸರಗೋಡು ಪ್ರದೇಶದಲ್ಲಿ ಸುಮಾರು ಮೂರು ಲಕ್ಷ ಕನ್ನಡಿಗರು ಇದ್ದಾರೆ. ವಿಪರ್ಯಾಸ ಎಂದರೆ ಇವರಿಗೆ ಕರ್ನಾಟಕ ಸರ್ಕಾರದಿಂದಾಗಲಿ, ಕೇರಳ ಸರ್ಕಾರದಿಂದಾಗಲಿ ಯಾವುದೇ ರೀತಿಯ ಸಹಾಯ, ಸಹಕಾರ, ಪ್ರೋತ್ಸಾಹ ಇರುವುದಿಲ್ಲ. ಇವರನ್ನು ಕರ್ನಾಟಕದವೆಂದು ಕರ್ನಾಟಕವಾಗಲಿ, ಕೇರಳದವರೆಂದು ಕೇರಳದವರಾಗಲಿ ಗುರುತಿಸುತ್ತಿಲ್ಲ ಎಂದು ವಿಷಾದಿಸಿದರು.
ಡಾ.ಎಚ್.ಎಲ್. ನಾಗರಾಜ್ ಬಹುಮಾನ ವಿತರಿಸಿದರು. ಎಂಡಿಎ ಮಾಜಿ ಅಧ್ಯಕ್ಷ ನಾಗೇಂದ್ರ, ನಗರಪಾಲಿಕೆ ಸದಸ್ಯರಾದ ಎಂ.ಬಿ.ಜಗದೀಶ್ ಮತ್ತು ಮಂಜುಳ ಮಾನಸ, ಚನ್ನಪ್ಪ, ಎಸ್. ಬಾಲು, ಡಾ. ಮಹದೇವಯ್ಯ, ಪ್ರೊ.ಕೆ.ಆರ್. ರಂಗಯ್ಯ, ಎಂ.ಪಿ. ಸುರೇಶ್, ಶ್ರೀಕಂಠ ಗುಂಡಪ್ಪ, ರಾಜು ಕೆ. ಬಾಟಿಯಾ, ಶ್ರೀನಿವಾಸ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.