ಮೈಸೂರು

ಎಂಸಿಸಿಐ ಸದಸ್ಯರ ಇಸ್ರೇಲ್ ಪ್ರವಾಸ 19ಕ್ಕೆ

Published On :

ಮೈಸೂರು: ಮೈಸೂರು ಕೈಗಾರಿಕ ಮತ್ತು ವಾಣಿಜ್ಯ ಸಂಸ್ಥೆಯ ಸದಸ್ಯರು ಮೇ 19 ರಿಂದ 25 ರವರೆಗೆ ಇಸ್ರೇಲ್ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದಾರೆ.
ಕರ್ನಾಟಕ ಕೈಗಾರಿಕ ಮತ್ತು ವಾಣಿಜ್ಯ ಸಂಸ್ಥೆಗಳ ಒಕ್ಕೂಟದ ವತಿಯಿಂದ ಆಯೋಜಿಸಿರುವ ಈ ಪ್ರವಾಸದಲ್ಲಿ ಒಟ್ಟು 13 ಮಂದಿಯ ತಂಡ ಇಸ್ರೇಲ್‌ಗೆ ತೆರಳಲಿದ್ದು, ಮೇ 20ಕ್ಕೆ ಇಸ್ರೇಲ್‌ನ ಅಧ್ಯಕ್ಷರು ಅಲ್ಲಿ ನಡೆಯುವ ಸಮ್ಮೇಳನ ಉದ್ಘಾಟಿಸುವರು. ಬಳಿಕ ಅಲ್ಲಿನ ರಾಸಾಯನಿಕ ಗೊಬ್ಬರಗಳ ಕಾರ್ಖಾನೆ, ಹೈನುಗಾರಿಕೆ ಅವಲಂಬಿತ ಕಾರ್ಖಾನೆಗಳ ಬೆಳವಣಿಗೆ ಮತ್ತು ಅಭಿವೃದ್ಧಿ ಕುರಿತು ಮಾಹಿತಿ ಸಂಗ್ರಹಿಸಿ ಚರ್ಚಿಸಲಾಗುವುದು ಎಂದು ಒಕ್ಕೂಟದ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಗುರುವಾರ ತಿಳಿಸಿದರು. ಮೂರನೆ ದಿನ ಆಟೋ ಮೊಬೈಲ್ ಕಾರ್ಖಾನೆಗಳ ಅಭಿವೃದ್ಧಿ ಮತ್ತು ಬೆಳವಣಿಗೆ ಕುರಿತು ಚರ್ಚಿಸಲಾಗುವುದು. ನಾಲ್ಕನೆ ದಿನ ಸಣ್ಣ ಮತ್ತು ಆಟೋ ಮೊಬೈಲ್ ಕಾರ್ಖಾನೆಗಳ ಸ್ಥಾಪನೆ ಕುರಿತು ಚರ್ಚಿಸಲಾಗುವುದು ಎಂದ ಅವರು, ಮೈಸೂರಿನಲ್ಲಿ 30 ಕೋಟಿ ವೆಚ್ಚದಲ್ಲಿ ಆಗ್ರೋ ಹಾಲಿನ ಡೈರಿ ತೆರೆಯುವ ಉದ್ದೇಶ ಇದೆ. ಇದಕ್ಕೆ ಈ ಪ್ರವಾಸ ಅನುಕೂಲವಾಗಲಿದೆ ಎಂದು ಹೇಳಿದರು.
ಇಸ್ರೇಲ್‌ನ ವಾಣಿಜ್ಯ ಮತ್ತು ಆರ್ಥಿಕ ವ್ಯವಹಾರಗಳ ರಾಯಭಾರಿ ಎ.ಎಸ್. ಫ್ರೀಡ್‌ಮನ್ ಮಾತನಾಡಿ, ಭಾರತದ ಜೊತೆಗೆ ಇಸ್ರೇಲ್ ಸಂಬಂಧ ಕೈಗಾರಿಕೆ ಮತ್ತು ರಾಜಕೀಯವಾಗಿ ಉತ್ತಮವಾಗಿದೆ. ಅಲ್ಲದೆ ಭಾರತದಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಪೂರಕ ವಾತಾವರಣ ಇದೆ ಎಂದರು. ಇಸ್ರೇಲ್‌ನ ವಾಣಿಜ್ಯ ಮತ್ತು ಆರ್ಥಿಕ ವ್ಯವಹಾರಗಳ ರಾಯಭಾರಿ ಎ.ಎಸ್. ಫ್ರೀಡ್‌ಮನ್, ಮೈಸೂರು ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆ ಅಧ್ಯಕ್ಷ ಎ.ಎಸ್.ಸತೀಶ್, ಕಾರ್ಯದರ್ಶಿ ಶ್ರೀಶೈಲ ರಾಮಣ್ಣನವರ್, ಉಪಾಧ್ಯಕ್ಷ ಜಯಂತ್, ಪ್ರಭಾಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.