ಎಸ್ಎಸ್ಎಲ್ಸಿಯಲ್ಲಿ ವಿದ್ಯಾರ್ಥಿಗಳ ಸಾಧನೆ
ಜೆಎಸ್ಎಸ್ ಶಾಲೆ ಸಾಧನೆ
ಮೈಸೂರು: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ ದೇವಲಾಪುರದ ಜಗದ್ಗುರು ಶ್ರೀ ಶಿವರಾತ್ರೀಶ್ವರ ಪ್ರೌಢಶಾಲೆಗೆ ಶೇ. 96.88 ರಷ್ಟು ಫಲಿತಾಂಶ ಬಂದಿದೆ. ಕವಿತಾ ಮತ್ತು ಶ್ವೇತಾ ಉನ್ನತ ಶ್ರೇಣಿಯಲ್ಲಿ, 14 ಪ್ರಥಮ, 6 ದ್ವಿತೀಯ ಹಾಗೂ 9 ತೃತೀಯ ದರ್ಜೆಯಲ್ಲಿ ತೇರ್ಗರ್ಡೆಯಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಶ್ರೇಷ್ಠ ಸಾಧನೆ- ಪ್ರಥಮ ಭಾಷೆ ಕನ್ನಡದಲ್ಲಿ ಕವಿತಾ 125ಕ್ಕೆ 125, ಶ್ವೇತಾ 124, ವಿಜಯಲಕ್ಷ್ಮಿ 122, ಅಂಬಿಕಾ 121, ಬಸವರಾಜು 123, ಕೆ.ಬಿ. ಜಗದೀಶ- 121 ಅಂಕಗಳಿಸಿದ್ದಾರೆ. ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯ ಜೆ. ವೃಷಬೇಂದ್ರ ಅಭಿನಂದಿಸಿದ್ದಾರೆ.
ಕೆ. ಪುಟ್ಟಸ್ವಾಮಿ ಶಾಲೆ
ಮೈಸೂರು: ಕುಂಬಾರಕೊಪ್ಪಲಿನಲ್ಲಿರುವ ಕೆ.ಪುಟ್ಟಸ್ವಾಮಿ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.95 ರಷ್ಟು ಫಲಿತಾಂಶ ಬಂದಿದೆ. ವಿದ್ಯಾರ್ಥಿಗಳಲ್ಲಿ ಸತ್ಯ 570, ಕೆ.ಸ್ಫೂರ್ತಿ 519, ನೇತ್ರಾವತಿ 502 ಹಾಗೂ ಚಂದನ್ 502 ಅಂಕ ಗಳಿಸಿದ್ದಾರೆ.
ಟೆರಿಷಿಯನ್ ಶಾಲೆ
ಟೆರಿಷಿಯನ್ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆಗೆ ಶೇ.97 ಫಲಿತಾಂಶ ಬಂದಿದೆ. ಪರೀಕ್ಷೆ ಬರೆದ 121 ಮಂದಿಯಲ್ಲಿ 18 ಉನ್ನತ ಶ್ರೇಣಿ, 71 ಪ್ರಥಮ, 20 ದ್ವಿತೀಯ ಹಾಗೂ 8 ಮಂದಿ ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಬಿ.ಕಾವ್ಯ ಎಂಬ ವಿದ್ಯಾರ್ಥಿ 596 ಅಂಕ ಗಳಿಸಿದ್ದಾರೆ.
ಹರಿ ವಿದ್ಯಾಲಯ
ಮೈಸೂರು: ಬೋಗಾದಿಯಲ್ಲಿರುವ ಹರಿ ವಿದ್ಯಾಲಯಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.96 ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆ ಬರೆದವರಲ್ಲಿ ಶೇ.20 ರಷ್ಟು ಮಂದಿ ಉನ್ನತ ಶ್ರೇಣಿಯಲ್ಲಿ ಹಾಗೂ ಶೇ.50 ರಷ್ಟು ಮಂದಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಅವರಲ್ಲಿ ಎಚ್.ವಿ. ಸ್ನೇಹ ಶೇ.93 ಹಾಗೂ ಎಚ್.ಆರ್. ಮಾನಸ ಶೇ. 88.3 ಅಂಕ ಗಳಿಸಿದ್ದಾರೆ.
ಮೋನಿಕಾಗೆ ಶೇ. 94.56
ನಗರದ ಗುಡ್ಶೆಫರ್ಡ್ ಶಾಲೆಯ ವಿದ್ಯಾರ್ಥಿನಿ ಎಸ್.ಮೋನಿಕಾ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 94.56 ಅಂಕ ಗಳಿಸಿದ್ದಾರೆ. ಇವರು ಆಟೋಚಾಲಕ ಎಂ.ಬಿ. ಸಿದ್ದರಾಜು ಮತ್ತು ಎಂ. ಲಕ್ಷ್ಮೀ ಅವರ ಪುತ್ರಿ.
ಅಂಧ ಮಕ್ಕಳ ಸರ್ಕಾರಿ ಶಾಲೆ
ತಿಲಕ್ನಗರದರಲ್ಲಿರುವ ಅಂಧ ಮಕ್ಕಳ ಸರ್ಕಾರಿ ಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. ಅವರಲ್ಲಿ ಚಂದ್ರಶೇಖರ 461, ಎಚ್. ಪ್ರಮೋದ್ಕುಮಾರ್ 492, ರವಿಕುಮಾರ್ 447, ಟಿ.ಎನ್. ಸುನಿಲ್ಕುಮಾರ್ 493 ಅಂಕ ಪಡೆದಿದ್ದಾರೆ.
ಮಹಾರಾಜ ಕಾಲೇಜು
ಸರ್ಕಾರಿ ವಿಭಜಿತ ಮಹಾರಾಜ ಪಿಯು ಕಾಲೇಜಿಗೆ (ಪ್ರೌಢಶಾಲೆ) ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ವಿದ್ಯಾರ್ಥಿ ವಿ.ಶ್ರೀನಿವಾಸ್ ಶೇ.89.12 ಅಂಕ ಪಡೆದಿದ್ದು, ಎಸ್.ಚಂದ್ರಶೇಖರ್ ಕನ್ನಡದಲ್ಲಿ 125ಕ್ಕೆ 125 ಅಂಕ ಹಾಗೂ ಬಿ.ಎಸ್. ಬಸವರಾಜು ಸಮಾಜ ವಿಜ್ಞಾನದಲ್ಲಿ 100ಕ್ಕೆ 98 ಅಂಕ ಗಳಿಸಿದ್ದಾರೆ.
ಬಾಬು ಜಗಜೀವನರಾಂ ಶಾಲೆ
ರಾಜೀವ್ನಗರದ ಬಾಬು ಜಗಜೀವನರಾಂ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 93 ಫಲಿತಾಂಶ ಲಭಿಸಿದೆ.
ಮಾತೃಮಂಡಳಿ ಶಾಲೆ
ಮೈಸೂರು: ವಿವಿ ಮೊಹಲ್ಲಾದಲ್ಲಿರುವ ಮಾತೃ ಮಂಡಳಿ ಬಾಲಕಿಯರ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ವಿದ್ಯಾರ್ಥಿನಿಯರಾದ ಎನ್. ಅನುಷಾ ಶೇ. 90.72, ಪಿ. ಮೇಘನಾ ಶೇ. 85.92 ಹಾಗೂ ಶಿಲ್ಪಾಬಾಯಿ ಶೇ. 73.76 ಅಂಕ ಗಳಿಸಿದ್ದಾರೆ.
ರಕ್ಷಕ್ಗೆ ಶೇ. 92.64
ಸಂತ ಜೋಸೆಫ್ ಶಾಲೆಯ ರಕ್ಷಕ್ಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.92.64 ಅಂಕ ಲಭಿಸಿದ್ದು, ಪ್ರಥಮ ಭಾಷೆಯಲ್ಲಿ 115, ಗಣಿತ ಹಾಗೂ ಸಮಾಜವಿಜ್ಞಾನದಲ್ಲಿ 97 ಅಂಕ ಬಂದಿದೆ. ಇವರು ಬಿ.ಎನ್. ರಮೇಶ್ ಹಾಗೂ ಟಿ. ಶಾರದಾ ಅವರ ಪುತ್ರ.
ಶಮಿತ್ಗೆ ಶೇ. 98.8 ಅಂಕ
ಸದ್ವಿದ್ಯಾ ಶಾಲೆಯ ವಿದ್ಯಾರ್ಥಿ ಶಮಿತ್ ಶೇಖರ್ಗೆ ಎಸ್ಸೆಸ್ಸೆಲ್ಸಿಯಲ್ಲಿ ಸೇ.98.8 ಅಂಕ ಬಂದಿದ್ದು, ಸಮಾಜವಿಜ್ಞಾನದಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ. ಸಿಎಫ್ಟಿಆರ್ಐ ಉದ್ಯೋಗಿ ಕೆ.ಎಲ್. ರಾಜಶೇಖರ್ ಹಾಗೂ ಶುಭಾದ ಶೇಖರ್ ಅವರ ಪುತ್ರ.
ದಕ್ಷಿಣ ಕೇಸರಿ ಪ್ರಶಸ್ತಿ
ಮೈಸೂರು: 2014ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 605ಕ್ಕೆ ಹೆಚ್ಚು ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳಿಗೆ ಲಯನ್ಸ್ ಸಂಸ್ಥೆ ಮೈಸೂರು ದಕ್ಷಿಣದ ವತಿಯಿಂದ ನೀಡುವ ದಕ್ಷಿಣ ಕೇಸರಿ ಎಸ್ಸೆಸ್ಸೆಲ್ಸಿ ಟಾಪರ್ಸ್ - 2014 ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದೆ.
ವಿದ್ಯಾರ್ಥಿಗಳು ಮೇ 22ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗಾಗಿ ಪಿ. ರಾಜನ್, ಮೊ. 9845197843 ಅಥವಾ ನಜೀರ್ ಮೊಹಮ್ಮದ್, ಮೊ. 9342188404 ಸಂಪರ್ಕಿಸಬಹುದು.
ಪ್ರತಿಭಾ ಪುರಸ್ಕಾರ
ಈ ಬಾರಿಯ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ, ಉನ್ನತ ದರ್ಜೆಯಲ್ಲಿ ತೇರ್ಗಡೆಯಾದ ಒಕ್ಕಲಿಗ ಜನಾಂಗದ ವಿದ್ಯಾರ್ಥಿಗಳಿಂದ ಒಕ್ಕಲಿಗರ ಜಾಗೃತ ವೇದಿಕೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ.
ಜೂ.4ರೊಳಗೆ ವಿವರಗಳನ್ನು ಸಲ್ಲಿಸಬೇಕು. ಮಾಹಿತಿಗಾಗಿ ಬಿ. ಲಕ್ಕೇಗೌಡ, ಮೊ. 9449696990 ಸಂಪರ್ಕಿಸಬಹುದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

