ಕಡಿಮೆ ವೆಚ್ಚದಲ್ಲಿ ಮಕ್ಕಳಿಗೆ ತರಬೇತಿ 'ಯೋಗ'
ಕ.ಪ್ರ.ವಾರ್ತೆ ಕೆ.ಆರ್. ನಗರ ಮೇ 17
ತರಬೇತಿ ಶಿಬಿರಗಳಲ್ಲಿ ಸಂಸ್ಥೆಗಳು ಲಾಭ ಮಾಡುವುದನ್ನೇ ಪ್ರಮುಖ ಉದ್ದೇಶ ಮಾಡಿಕೊಂಡಿರುವ ಇಂದಿನ ದಿನಗಳಲ್ಲಿ, ಪಟ್ಟಣದ ಕಂಪ್ಯೂಟರ್ ತರಬೇತಿ ಕೇಂದ್ರವೊಂದು ಪುಟಾಣಿ ಮಕ್ಕಳಿಗೆ ಕಡಿಮೆ ಖರ್ಚಿನಲ್ಲಿ ತರಬೇತಿಯ ಜತೆಗೆ ಯೋಗಾಭ್ಯಾಸವನ್ನು ಕಲಿಸುವುದರ ಮೂಲಕ ಇತರರಿಗೆ ಮಾದರಿಯಾಗಿದೆ.
ಪಟ್ಟಣದ ಸ್ಪಿನ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಲ್ಲಿ ಬೇಸಿಗೆ ಮೇಳದ ಅಂಗವಾಗಿ ಚಿಣ್ಣರಿಗೆ ನಡೆಸುತ್ತಿರುವ ಕಂಪ್ಯೂಟರ್, ಚಿತ್ರಕಲೆ, ನೃತ್ಯ ಸೇರಿದಂತೆ ಇತರೆ ಕೌಶಲ ಕಲೆಗಳನ್ನು ಕಲಿಸುತ್ತಿದ್ದು, ಇದರ ಜತೆಗೆ ಹೇಳಿಕೊಡುತ್ತಿರುವ ಯೋಗಾಭ್ಯಾಸ ಮಕ್ಕಳ ಮನ ಸೆಳೆಯುತ್ತಿದ್ದು, ಪುಟ್ಟ ಮಕ್ಕಳು ಆಸಕ್ತಿಯಿಂದ ಯೋಗ ಕಲಿಯುತ್ತಿದ್ದಾರೆ.
ತರಬೇತಿ ಆರಂಭದ ಮೊದಲು ಯೋಗ ಕಲಿಸುವ ನಿರ್ಧಾರ ಮಾಡಿದ ಸಂಸ್ಥೆಯು, ಮೊದಲಿಗೆ 50 ಮಕ್ಕಳಿಗೆ ಯೋಗ ತರಬೇತಿ ನೀಡಲು ಆರಂಭಿಸಿತು. ನಂತರ ಇದರಿಂದ ಅಕರ್ಷಿತರಾದ ಶಿಬಿರದ ಎಲ್ಲ ಮಕ್ಕಳು ಆಸಕ್ತಿಯಿಂದ ಪ್ರತಿ ಭಾನುವಾರ ತಪ್ಪದೇ ಯೋಗ ಕಲಿಯುತ್ತಿದ್ದಾರೆ.
ಇಲ್ಲಿ ನಡೆಯುತ್ತಿರುವ ಬೇಸಿಗೆ ಶಿಬಿರದಲ್ಲಿ ಇಂಗ್ಲಿಷ್ ಕಲಿಕೆ, ಕಂಪ್ಯೂಟರ್ ತರಬೇತಿ, ನೃತ್ಯ, ಚಿತ್ರಕಲೆ ಜತೆಗೆ ದೇಶಿ ಆಟಗಳಾದ ಕಟ್ಟೆಮಣಿ, ಚೌಕಾಬಾರ, ಮತ್ತಿತರ ಆಟಿಕೆಗಳ ತರಬೇತಿ ನೀಡಲಾಗುತ್ತಿದ್ದು, ಕೇವಲ 200 ಶುಲ್ಕದೊಂದಿಗೆ ವೈವಿಧ್ಯಮಯ ಕಲಿಕೆಗಳನ್ನು ಕಲಿಸುತ್ತಿರುವುದು ಮಕ್ಕಳಿಗೆ ಅನುಕೂಲಕರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

