ಜೂಜಾಟದಲ್ಲಿ ತೊಡಗಿದ್ದ ಆರು ಮಂದಿ ಬಂಧನ
ಮೈಸೂರು: ಜೂಜಾಡುತ್ತಿದ್ದ 6 ಮಂದಿಯನ್ನು ನಜರ್ಬಾದ್ ಠಾಣೆ ಪೊಲೀಸರು ಬಂಧಿಸಿ, 3180 ವಶಪಡಿಸಿಕೊಂಡಿದ್ದಾರೆ. ಗಾಯತ್ರಿಪುರಂ ಮತ್ತು ಕ್ಯಾತಮಾರನಹಳ್ಳಿ ನಿವಾಸಿಗಳಾದ ಎಂ. ಐಯ್ಯಪ್ಪನ್, ಮಹದೇವಸ್ವಾಮಿ, ಸಿ. ರಮೇಶ್, ಸಿ. ಶ್ರೀಧರ್, ಅಬ್ದುಲ್ ವಾಜಿದ್ ಮತ್ತು ಎಸ್.ಜಗದೀಶ್ ಬಂಧಿತರು. ಇವರು ಗಾಯಿತ್ರಿಪುರಂ ಪೆಟ್ರೋಲ್ ಬಂಕ್ ಬಳಿ ಜೂಜಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಅನುಮಾನಸ್ಪದ ಸಾವು: ನಗರದ ಬೆಂಗಳೂರು- ಮೈಸೂರು ರಸ್ತೆ ಹಳೆ ಚೆಕ್ಪೋಸ್ಟ್ ಬಳಿ ಅಪರಿಚಿತ ಯುವಕನ ಮೃತ ದೇಹ ಪತ್ತೆಯಾಗಿದ್ದು, ಈತನ ಸಾವಿನ ಬಗ್ಗೆ ಅನುಮಾನ ಮೂಡಿದೆ. ಚಹರೆ- 28 ವರ್ಷ, 5.2 ಅಡಿ ಎತ್ತರ, ಕೃಶವಾದ ಶರೀರ, ಗೋದಿ ಮೈಬಣ್ಣ, ಕೋಲು ಮುಖ, ಕಪ್ಪು ತಲೆ ಕೂದಲು, ಕುರಚಲು ಗಡ್ಡ- ಮೀಸೆ ಇದೆ. ನೀಲಿ ಜೀನ್ಸ್ ಫ್ಯಾಂಟ್, ತಪ್ಪು ಟೀ ಶರ್ಟ್ ಧರಿಸಿದ್ದು, ಮೃತನು ನೋಡಲು ಮುಸ್ಲಿಂ ಜನಾಂಗಕ್ಕೆ ಸೇರಿದವನಂತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾರಸುದಾರರು ಇದ್ದಲ್ಲಿ ದೂ. 0821- 2418112, 312 ಸಂಪರ್ಕಿಸಲು ಎನ್.ಆರ್. ಠಾಣೆ ಪೊಲೀಸರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

