ಫೋನ್ ಇನ್ ಕಾರ್ಯಕ್ರಮಕ್ಕೆ ಜನರಿಂದ ದೂರುಗಳ ಸುರಿಮಳೆ
ಹುಣಸೂರು: ಪಟ್ಟಣದ ತಾಪಂ ಸಭಾಂಗಣದಲ್ಲಿ ಇಒ ಡಾ.ಪ್ರೇಮ್ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಫೋನ್ಇನ್ ಕಾರ್ಯಕ್ರಮದಲ್ಲಿ ಹಲವಾರು ದೂರುಗಳು ಬಂದವು.
ರಕ್ಷಿತಾರಣ್ಯ ದಂಚಿನಲ್ಲೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ತಾಲೂಕಿನಾದ್ಯಂತ ದಲಿತರ ಸ್ಮಶಾನ ಒತ್ತುವರಿಯಾಗಿದೆ. ರಸ್ತೆಯಲ್ಲೇ ಶೌಚಾಲಯ ಗುಂಡಿ ಇದೆ ಮುಚ್ಚಿಸುವಂತೆ ಒತ್ತಾಯ, ವಿದ್ಯುತ್ ದೀಪ ಉರಿಯದೇ ಕಗ್ಗತ್ತಲಲ್ಲೇ ತಿರುಗಾಡುವಂತಾಗಿದೆ. ಸರ್ಕಾರಿ ಭೂಮಿ ಇದ್ದರೂ ನಿವೇಶನ ವಿತರಣೆಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇವು ಪೋನ್ಇನ್ ಕಾರ್ಯಕ್ರಮದಲ್ಲಿ ಬಂದ ದೂರುಗಳು.
ತಾಲೂಕಿನ ಬಿ.ಆರ್.ಕಾವಲ್ ಸಮೀಪದ ಮಾಸ್ತಮ್ಮನ ಗಿರಿಜನ ಹಾಡಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರನಾಯಕ ದೂರಿದರೆ, ಅರಬ್ಬಿತಿಟ್ಟು ರಕ್ಷಿತಾರಣ್ಯದಂಚಿನಲ್ಲಿರುವ ಜೈವಿಕ ಇಂಧನ ವಲಯದಂಚಿನಲ್ಲೇ ಜೆಲ್ಲಿ ಕ್ರಶರ್ ನಡೆಯಲು ಅನುಮತಿ ನೀಡಿದ್ದು, ದರಖಾಸ್ತು ಭೂಮಿಯಲ್ಲಿ ಸಾಗುವಳಿ ಪಡೆದವರು ಕಲ್ಲು ಕ್ವಾರಿ ನಡೆಸುತ್ತಿದ್ದು, ರಾತ್ರಿ ವೇಳೆ ಡೈನಾಮೇಟ್ ಸಿಡಿಸುತ್ತಾರೆ. ವಕೀಲ ಪುಟ್ಟರಾಜು ದೂರಿಗೆ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆಂಬ ತಾಲೂಕು ದಂಡಾಧಿಕಾರಿ ವೆಂಕಟಚಾಲಪ್ಪ ಭರವಸೆ ನೀಡಿದರು.
ಹೊನ್ನೇನಹಳ್ಳಿ ಹಾಗೂ ವಡ್ಡಂಬಾಳು ಗ್ರಾಮದಲ್ಲಿ ಜಲಾನಯನ ಇಲಾಖೆ ವತಿಯಿಂದ ನಡೆಯುತ್ತಿರುವ ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮದ ಹಲವರ ದೂರಿಗೆ ಸ್ಥಳಕ್ಕೆ ಎಂಜಿನಿಯರ್ ಕಳುಹಿಸಿ ಪರಿಶೀಲಿಸುವುದಾಗಿ ಇಒ ತಿಳಿಸಿದರು. ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಕೆಲ ದಿನಗಳಿಂದ ವಿದ್ಯುತತ್ ದೀಪಗಳೇ ಉರಿಯುತ್ತಿಲ್ಲ. ಮರದೂರು ಗ್ರಾಪಂನಲ್ಲಿ ಹಲವಾರು ಭಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂಬ ದೂರಿಗೆ ನಾಳೆಯೇ ವಿದ್ಯುತ್ ದೀಪ ಕುಡಿಯುವ ನೀರಿಗೆ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳುವಂತೆ ಪಿಡಿಒಗಳಿಗೆ ಇಒ ಎಚ್ಚರಿಸಿದರು.
ಸಿಡಿಪಿಒ ನವೀನ್, ತಾಪಂ ಸಹಾಯಕ ನಿರ್ದೇಶಕರಾದ ಕೃಷ್ಣಮೂರ್ತಿ, ತಹಸೀಲ್ದಾರ್ ವೆಂಕಟಾಚಲಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

