ಮೈಸೂರು

ಭಾರಿ ಮಳೆಗೆ ತುಂಬಿದ ಕೆರೆ, ಕಟ್ಟೆಗಳು

Published On :

ಸುತ್ತೂರು: ನಂಜನಗೂಡು ತಾಲೂಕಿನ ಸುತ್ತಮುತ್ತ ಮಂಗಳವಾರ ಸಂಜೆ ಬಿದ್ದ ಭಾರಿ ಮಳೆಯಿಂದಾಗಿ ಕೆರೆಕಟ್ಟೆಗಳು ತುಂಬಿ ತುಳುಕುತ್ತಿವೆ.
ತಾಲೂಕಿನ ಬಿಳುಗಲಿ, ಸುತ್ತೂರು, ಕಾರ್ಯ, ಕಾರಪುರ, ಉಮ್ಮತ್ತೂರು, ಸುತ್ತಮುತ್ತಲ ಗ್ರಾಮಗಳ ಕೆರೆಕಟ್ಟೆಗಳು ತುಂಬಿದ್ದು, ಸೇತುವೆ ಮೇಲೆ ನೀರು ಹರಿಯುತ್ತಿದೆ. ರೈತರು ಬೆಳೆದ ಬತ್ತ, ರಾಗಿ, ದ್ವಿದಳ ಧಾನ್ಯಗಳು ಮಳೆಯಿಂದ ಮುಳುಗಡೆಯಾಗಿವೆ. ಬಿಳುಗಲಿ ಬಳಿ ಟಿ. ನರಸೀಪುರ- ನಂಜನಗೂಡಿನ ಮುಖ್ಯರಸ್ತೆಯಲ್ಲಿ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಗಿ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತುಂಬಾ ತೊಂದರೆಯಾಯಿತು. ಬಿಳುಗಲಿ ಸೇತುವೆಯನ್ನು ಎತ್ತರಿಸುವಂತೆ ಗ್ರಾಪಂ ಮಾಜಿ ಅಧ್ಯಕ್ಷ ಜಿ.ಮಾರಳ್ಳಿ ಜಗದೀಶ್, ಗ್ರಾಪಂ ಮಾಜಿ ಅಧ್ಯಕ್ಷ ಮಹದೇವು, ಉಪಾಧ್ಯಕ್ಷ ಜ್ಯೋತಿ ಮಹೇಶ್, ಕುಮಾರ್, ಲಿಂಗರಾಜು, ಮಾದೇಶ್ ಒತ್ತಾಯಿಸಿದ್ದಾರೆ.

ಸಿಡಿಲು ಬಡಿದು ಇಬ್ಬರ ಸಾವು: ನಾಲ್ವರು ಅಸ್ವಸ್ಥ
ಎಚ್.ಡಿ. ಕೋಟೆ: ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವಿಗೀಡಾಗಿ, ನಾಲ್ವರು ಅಸ್ವಸ್ಥರಾದ ಘಟನೆ ತಾಲೂಕಿನ ಶಿರಮಳ್ಳಿಯಲ್ಲಿ ಬುಧವಾರ ನಡೆದಿದೆ.
ಸಹೋದರರಾದ ಸೋಮಾಚಾರಿ (55) ಹಾಗೂ ರಾಜಣ್ಣಾಚಾರಿ (48) ಮೃತಪಟ್ಟವರು. ಗಾಯಗೊಂಡ ಸೋಮಾಚಾರಿ ಪತ್ನಿ ಚಂದ್ರಮ್ಮ(45), ಕೀರ್ತಿ(8), ಕರೀಗೌಡ (50) ಮತ್ತು ಶಿವಕುಮಾರ್ (22) ಅವರನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆ ಮತ್ತು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಬುಧವಾರ ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ ಮಳೆ ಆರಂಭವಾದಾಗ ಸೋಮಾಚಾರಿ ಕುಟುಂಬವು ಸಮೀಪದ ಮರದ ಕೆಳಗೆ ಆಶ್ರಯ ಪಡೆದಿದೆ. ಈ ವೇಳೆ ಸಿಡಿಲು ಬಡಿದ ಪರಿಣಾಮ ಸೋಮಾಚಾರಿ ಮತ್ತು ರಾಜಾಚಾರಿ ಮೃತಪಟ್ಟು ಉಳಿದವರು ಅಸ್ವಸ್ಥರಾಗಿದ್ದಾರೆ.
ಶಾಸಕ ಎಸ್.ಚಿಕ್ಕಮಾದು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ 1.50 ಲಕ್ಷ ಪರಿಹಾರ, ರಾಷ್ಟ್ರೀಯ ಭದ್ರತಾ ಯೋಜನೆ ಅಡಿ ರು. 20 ಸಾವಿರ ಹಾಗೂ ಶವ ಸಂಸ್ಕಾರಕ್ಕೆ 1 ಸಾವಿರ ನೀಡಲಾಗುವುದು. ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು. ಈ ವೇಳೆ ತಹಸೀಲ್ದಾರ್ ಶಿವಸ್ವಾಮಿ, ಪಿಎಸ್‌ಐ ಶಿವಮಾದಯ್ಯ, ಪಪಂ ಅಧ್ಯಕ್ಷ ಉಮಾಶಂಕರ್, ಸರಗೂರು ಬ್ಲಾಕ್ ಅಧ್ಯಕ್ಷ ರವಿ, ಮಾಜಿ ಪ್ರಧಾನ ಎಂ.ಸಿ. ದೊಡ್ಡನಾಯಕ, ಚಾ. ನಂಜುಂಡಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.