ರೇಣುಕಾಚಾರ್ಯರ ಜಯಂತಿ 4ರಂದು
ಮಸ್ಕಿ: ಪಟ್ಟಣದಲ್ಲಿ ಜಗದ್ಗುರು ರೇಣುಕಾಚಾರ್ಯರ ಜಯಂತ್ಯುತ್ಸವ ಅಂಗವಾಗಿ ಗುರುವಾರ ದಿನಾಂಕ ಏ.4 ರಂದು ರೇಣುಕಾಚಾರ್ಯರ ಭಾವಚಿತ್ರದ ಮೆರವಣಿಗೆ ಹಾಗೂ ಜನ ಜಾಗೃತಿ, ಧರ್ಮಸಭೆ ಆಯೋಜಿಸಲಾಗಿದೆ. ಗಚ್ಚಿನ ಮಠದಲ್ಲಿ ಬೆಳಗ್ಗೆ 5.30ಕ್ಕೆ ಪಂಚಾಚಾರ್ಯರ ಧ್ವಜಾರೋಹಣ ಮತ್ತು ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಜರುಗುವುದು. ಬೆಳಗ್ಗೆ 8.30ಕ್ಕೆ ಜಗದ್ಗುರು ರೇಣುಕಾಚಾರ್ಯರ ಅಲಂಕೃತ ಭಾವಚಿತ್ರ ಸಕಲ ವಾದ್ಯ ವೈಭವಗಳೊಂದಿಗೆ ಸುಮಂಗಲಿಯರಿಂದ ಕಳಸ ಕನ್ನಡಿಯೊಂದಿಗೆ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ಮಾಡಲಾಗುವುದು. ಮಧ್ಯಾಹ್ನ 12.30ಕ್ಕೆ ಮಹಾಪ್ರಸಾದ ಜರುಗುವುದು. ಸಂಜೆ 5ಕ್ಕೆ ಜನಜಾಗೃತಿ ಧರ್ಮಸಭೆ ನಡೆಯಲಿದೆ. ತೆಕ್ಕಲಕೋಟೆಯ ಕಂಬಾಳಿ ಮಠದ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಗಂಗಾವತಿಯ ಕಲ್ಮಠದ ಡಾ. ಕೊಟ್ಟೂರೇಶ್ವರ ಸ್ವಾಮೀಜಿ, ಗಬ್ಬೂರಿನ ಬೂದಿ ಬಸವೇಶ್ವರ ಸಂಸ್ಥಾನ ಮಠದ ಬೂದಿ ಬಸವೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮಸ್ಕಿಯ ಗಚ್ಚಿನ ಹಿರೇಮಠದ ರುದ್ರಸ್ವಾಮಿಗಳು (ಮರಿದೇವರು) ಸಾನ್ನಿಧ್ಯ ವಹಿಸಲಿದ್ದಾರೆ. ರೌಡಕುಂದಾದ ವೆಂಕಟಗಿರಿ ಕ್ಯಾಂಪ್ ಸಿದ್ದಾಶ್ರಮದ ಸಿದ್ದರಾಮ ಶರಣರು ಉಪನ್ಯಾಸ ನೀಡಲಿದ್ದಾರೆಂದು ಸಮಾಜ ತಿಳಿಸಿದೆ.
ಬಿಜೆಪಿಗೆ ಸೇರ್ಪಡೆ
ಸಿಂಧನೂರು: ನಗರದಿಂದ ಗ್ರಾಮೀಣ ಮಟ್ಟದವರೆಗೂ ಬಿಜೆಪಿ ಸಂಘಟಿಸುವಲ್ಲಿ ಯುವಕರು ಪಣ ತೊಡಗಬೇಕು ಎಂದು ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ್ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಮಕೋಟೇಶ್ವರರಾವ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

