ಆಸ್ತಿ ಜಗಳ ಕೊಲೆಯಲ್ಲಿ ಅಂತ್ಯ
ಗುಲ್ಬರ್ಗ: ಆಸ್ತಿ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಪ್ರಕರಣ ಮಳಖೇಡ್ ಪೊಲೀಸ್ ಠಾಣೆ ವ್ಯಾಪ್ತಿಯ ನೀಲಹಳ್ಳಿಯಲ್ಲಿ ಸಂಭವಿಸಿದೆ. ಈ ಪ್ರಕರಣದಲ್ಲಿ ಕೊಲೆಯಾದವಳು ಮಲ್ಲಮ್ಮ ಎಂದು ಗುರುತಿಸಲಾಗಿದೆ. ಈಕೆಯ ಪುತ್ರಿ ಪವಿತ್ರಾ ಬೀರಪ್ಪ ಪೂಜಾರಿ ದೂರು ನೀಡಿದ್ದು, ಆಸ್ತಿಗಾಗಿ ಮಾವಂದಿರಾದ ನಿಂಗಪ್ಪ ಬೀರಪ್ಪ ಪೂಜಾರಿ, ರಾಜಶೇಖರ ಬೀರಪ್ಪ ಪೂಜಾರಿ ಇವರೇ ತಮ್ಮ ತಾಯಿಯ ಕೊಲೆ ಮಾಡಿದ್ದಾರೆಂದು ಪವಿತ್ರಾ ದೂರಿನಲ್ಲಿ ಹೇಳಿದ್ದಾರೆ.
ಮಲ್ಲಮ್ಮ ಏ.5 ರಂದು ಸಂಜೆ 4 ಗಂಟೆ ಹೊತ್ತಿಗೆ ಕೊಂಕನಳ್ಳಿ ಗುರುಲಿಂಗಪ್ಪಾ ತಂದೆ ನೀಲಕಂಠ ಬಿರಾದಾರ ರವರ ಮನೆಗೆ ಹಣ ತೆಗೆದುಕೊಂಡು ಬರುತ್ತೆನೆ ಅಂತಾ ಹೇಳಿ ಹೋಗಿದ್ದರು. ಏ.6 ರಂದು ಬೆಳಗ್ಗೆ 8ಕ್ಕೆ ಅಯ್ಯಪ್ಪ ಸೌಕಾರರ ಹೊಲದ ತೊಗರಿ ಕಟ್ಟಿಗೆ ಪಕ್ಕ ಮಲ್ಲಮ್ಮನನ್ನು ಹೊಡೆದು ಹಾಕಿದ್ದಾರೆಂಬ ಸುದ್ದಿ ಚರ್ಚೆಗೆ ಬಂದಿತ್ತು.
ವಿಷಯ ತಿಳಿದು ಚೆನ್ನಬಸಪ್ಪಾ ಎಂಬುವವರು ಹೋಗಿ ನೋಡಿರೆ ಮಲ್ಲಮ್ಮ ಕೊಲೆಯಾಗಿದ್ದರು. ಮುಖದ ಮೇಲೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡುವಂತೆ ಪವಿತ್ರಾ ಕೋರಿದ್ದಾರೆ. ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

