ರಾಮನವಮಿ ಅದ್ಧೂರಿ ರಥೋತ್ಸವ
ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.21
ನಗರದ ಬ್ರಾಹ್ಮಣರ ಓಣಿಯಲ್ಲಿರುವ ಶ್ರೀರಾಮ ಮಂದಿರದಲ್ಲಿ ರಾಮನವಮಿ ಉತ್ಸವದ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಶುಕ್ರವಾರ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ಇದಕ್ಕೂ ಪೂರ್ವದಲ್ಲಿ ತುಳಸಿ ಅರ್ಚನೆ, ಸಕಲ ಮಂಗಲ ವಾದ್ಯಗಳು, ವೇದ ಘೋಷ, ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆದವು. ರಥೋತ್ಸವದ ನಂತರ ಭಕ್ತರಿಗೆ ತೀರ್ಥ ಪ್ರಸಾದ ವ್ಯವಸ್ಥೆಯನ್ನು ನಗರಸಭಾ ನೂತನ ಸದಸ್ಯ ವೆಂಕಟರಾವ್ ಬಂಡಿ ಏರ್ಪಡಿಸಿದ್ದರು. ಸಂಜೆ 6 ಗಂಟೆಗೆ ರಾಮಬಾಬು ಶರ್ಮಾ ಸೋಮಯಾಜಿ ಹಾಗೂ ಫಣಿಯೇಂದ್ರ ಶರ್ಮಾ ಸೋಮಯಾಜಿ ಅವರಿಂದ ಶ್ರೀಮದ್ ರಾಮಾಯಣ ಪ್ರವಚನ ನಡೆಯಿತು.
ರಥೋತ್ಸವದಲ್ಲಿ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ಕುಲಕರ್ಣಿ, ಉಪಾಧ್ಯಕ್ಷ ನರಸಿಂಗರಾವ್ ಚನ್ನಳ್ಳಿ, ನೂತನ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಆರ್.ವಿ. ಜೋಷಿ, ಉಪಾಧ್ಯಕ್ಷ ವೆಂಕಣ್ಣಾಚಾರ್ ದೋಟಿಹಾಳ, ಮಾಜಿ ನಗರಸಭಾ ಸದಸ್ಯ ಗೋವಿಂದರಾವ, ಮಠಾಧಿಕಾರಿಗಳಾದ ನರಸಿಂಹಾಚಾರ್ ಪುರೋಹಿತ, ವೆಂಕಟಗಿರಿದಾಸ, ಮುಖಂಡರಾದ ಎಂ.ಕೆ. ಗೌರಕರ್, ಕಿಷನ್ರಾವ್ ಅಲಬನೂರ, ಕರಡೋಣಿ ವೆಂಕೋಬರಾವ್, ನಾಗೇಶರಾವ್ ಕುಲಕರ್ಣಿ, ಅಡವಿರಾವ್ ಸದ್ರಾಂಪೂರ, ಹನುಮಂತಾಚಾರ್ ಮಸ್ಕಿ, ನಾರಾಯಣರಾವ್ ಚನ್ನಳ್ಳಿ ಮತ್ತಿತರರು ಪಾಲ್ಗೊಂಡಿದ್ದರು.
ಶ್ರೀರಾಮ ಮಂದಿರದ ಅರ್ಚಕರಾದ ವೆಂಕಟೇಶ ಶಾಸ್ತ್ರಿ, ಕೃಷ್ಣಶಾಸ್ತ್ರಿ, ನವಲಿ ಭೀಮಾಚಾರ್ ರಥೋತ್ಸವ, ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು. ಸಂಜೆ ಶಾಸಕ ವೆಂಕಟರಾವ್ ನಾಡಗೌಡ ಶ್ರೀರಾಮ ಮಂದಿರದಲ್ಲಿ ಪೂಜೆ ಸಲ್ಲಿಸಿದರು.
ರಾಮನವಮಿ ಅಂಗವಾಗಿ ವಿಜೃಂಭಣೆಯ ಓಕುಳಿಯಾಟ
ಕನ್ನಡಪ್ರಭ ವಾರ್ತೆ, ಸಿಂಧನೂರು, ಏ.21
ಬ್ರಾಹ್ಮಣರ ಓಣಿಯಲ್ಲಿರುವ ಶ್ರೀರಾಮಮಂದಿರದಲ್ಲಿ ಶ್ರೀರಾಮನವಮಿ ಅಂಗವಾಗಿ ವಿಜೃಂಭಣೆಯಿಂದ ಯುವಕ,ಯುವತಿಯರು ಒಕುಳಿಯಾಟವಾಡಿ ಸಂಭ್ರಮಿಸಿದರು.
ಇದಕ್ಕೂ ಪೂರ್ವದಲ್ಲಿ ಮೊಸರು ಗಡಿಗೆ ಒಡೆಯುವ ದೃಶ್ಯ ಎಲ್ಲರನ್ನು ಆಕರ್ಷಿಸಿತು. ನಂತರ ಗೋಪಾಳ ಕಾವಲಿ, ಅವಭೃತ ಸ್ನಾನ, ಭಜನೆ ಮತ್ತಿತರ ಕಾರ್ಯಕ್ರಮಗಳು ಜರುಗಿದವು. ಶ್ರೀರಾಮಮಂದಿರದಿಂದ ಆರಂಭಗೊಂಡ ಪಲ್ಲಕ್ಕಿಯೊಂದಿಗೆ ಡ್ರಂಗಳಲ್ಲಿ ಕೆಂಪು ಬಣ್ಣವನ್ನು ತುಂಬಿಕೊಂಡು ಎಲ್ಲರಿಗೂ ಬಣ್ಣವನ್ನು ಎರಚಿದರು. ಪ್ರತಿಮನೆಯ ಮುಂದೆ ಕಾಯಿ ಒಡೆಯುವುದು, ಮಂಗಳಾರತಿ, ಬಂದವರಿಗೆ ಪಾನಕದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಶೆಟ್ಟರ ಜಿನ್ನದಿಂದ ದ್ಯಾವಮ್ಮನ ಗುಡಿಯ ಮೂಲಕ, ಪಂಚಮುಖಿ ದೇವಸ್ಥಾನದಿಂದ ಪುನ- ರಾಮಮಂದಿರಕ್ಕೆ ಪಲ್ಲಕ್ಕಿ ಆಗಮಿಸಿತು. ಪಲ್ಲಕ್ಕಿ ಸೇವೆಗೆ ರಾಮಕಣಷ್ಣಾಚಾರ ಗೋನವಾರ ಅವರ ನೇತೃತ್ವದ ಭಜನಾ ತಂಡ ಕಳೆ ಕಟ್ಟಿತ್ತು.
ಕಾರ್ಯಕ್ರಮದಲ್ಲಿ ತಾಲೂಕ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಮರಾವ್ ಕುಲಕರ್ಣಿ, ಉಪಾಧ್ಯಕ್ಷ ನರಸಿಂಗರಾವ್ ಚನ್ನಳ್ಳಿ, ಮಾಜಿ ನಗರಸಭಾ ಸದಸ್ಯ ಗೋವಿಂದರಾವ, ಮಠಾಧಿಕಾರಿಗಳಾದ ನರಸಿಂಹಾಚಾರ್ ಪುರೋಹಿತ, ವೆಂಕಟಗಿರಿದಾಸ, ಮುಖಂಡರಾದ ಶೇಷಗಿರಿರಾವ್ ಚನ್ನಳ್ಳಿ, ಜಿ.ವಿ.ಜೋಷಿ, ನಿವೃತ್ತ ಶಿಕ್ಷಕ ಕೆ.ತಿರುಮಲರಾವ್, ಎನ್.ವಿ.ಸಂಸ್ಥೆಯ ಎ.ಡಿ.ಎಂ. ಮನೋಹರರಾವ್ ಕುಲಕರ್ಣಿ, ಗೋಪಾಲರಾವ್ ಕುಲಕರ್ಣಿ, ಕಿಷನ್ ರಾವ್ ಅಲಬನೂರ, ಸುಧಿಂದ್ರರಾವ್, ಕರಡೋಣಿ ವೆಂಕೋಬರಾವ್, ಕೋಪ್ರೆಶರಾವ್ ಕುಲಕರ್ಣಿ, ರಾಮಕೃಷ್ಣ.ಕೆ., ಎಸ್.ನಾಗೇಂದ್ರರಾವ್, ವೆಂಕಟೇಶ ಸಿದ್ರಾಂಪೂರ, ಕೃಷ್ಣಾಚಾರ್ ಮಸ್ಕಿ, ರಾಘವೇಂದ್ರರಾವ್ ಚನ್ನಳ್ಳಿ, ವೆಂಕಟೇಶ ಕೆಂಗಲ್, ರಘುಪ್ರಸಾದ ಜೋಷಿ, ಗುಂಡೂರಾವ್ ಚನ್ನಳ್ಳಿ, ನಾರಾಯಣರಾವ್ ಸೂಗುರು, ಕೆ.ಪ್ರಹ್ಲಾದ ಮತ್ತಿತರರು ಪಾಲ್ಗೊಂಡಿದ್ದರು. ಶ್ರೀರಾಮ ಮಂದಿರದ ಅರ್ಚಕರಾದ ವೆಂಕಟೇಶ ಶಾಸ್ತ್ರಿ, ಕೃಷ್ಣಶಾಸ್ತ್ರಿ, ನವಲಿ ಭೀಮಾಚಾರ್, ಎನ್. ಸತೀಶ ರಥೋತ್ಸವ, ಪೂಜಾ ಕೈಂಕರ್ಯಗಳ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

