ರಾಯಚೂರು

ದೇವದುರ್ಗ ತಾಪಂ: ಅವಿರೋಧ ಆಯ್ಕೆ

Published On :

ದೇವದುರ್ಗ: ಇಲ್ಲಿನ ತಾಪಂ ನೂತನ ಅಧ್ಯಕ್ಷರಾಗಿ ಜೆಡಿಎಸ್ನ ಬಾಲಮ್ಮ ಹನುಮಂತ್ರಾಯ ಹಾಗೂ ಉಪಾಧ್ಯಕ್ಷರಾಗಿ ಅಯ್ಯನಗೌಡ ಗಲಗ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣದಲ್ಲಿ ಶುಕ್ರವಾರ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಇವರ ಆಯ್ಕೆಯನ್ನು ಪ್ರಕಟಿಸಲಾಯಿತು. ಈವರೆಗೆ ತಾಪಂ ಅಧ್ಯಕ್ಷರಾಗಿದ್ದ ಪ್ರಭಯ್ಯ ಸ್ವಾಮಿ ಮತ್ತು ಉಪಾಧ್ಯಕ್ಷ ದೇವಿಕಮ್ಮ ವಿರುದ್ಧ ಅವಿಶ್ವಾಸದಿಂದ ತೆರವಾಗಿದ್ದ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಧ್ಯಕ್ಷರಾಗಿ ಬಾಲಮ್ಮ ಹನುಮಂತ್ರಾಯ, ಹಾಗೂ ಉಪಾಧ್ಯಕ್ಷರಾಗಿ ಅಯ್ಯನಗೌಡ ಗಲಗ ಮಾತ್ರ ನಾಮಪತ್ರ ಸಲ್ಲಿಸುವ ಮೂಲಕ ಅವಿರೋಧ ಆಯ್ಕೆಯಾದರು. ತಾಪಂನಲ್ಲಿ ಒಟ್ಟು 21 ಸದಸ್ಯರ ಪೈಕಿ ಜೆಡಿಎಸ್ 13, ಬಿಜೆಪಿ 5 ಸದಸ್ಯರು ಹಾಗೂ ಕಾಂಗ್ರೆಸ್ನ ಮೂವರು ಸದಸ್ಯರಿದ್ದಾರೆ. ಜೆಡಿಎಸ್ಗೆ ಸ್ಪಷ್ಟ ಬಹುಮತವಿರುವುದರಿಂದ ಅವಿರೋಧ ಆಯ್ಕೆ ನಡೆಯಿತು. ಆಯ್ಕೆ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಚುನಾವಣೆ ಪ್ರಕ್ರಿಯೆಯ ಉಸ್ತುವಾರಿಯನ್ನು ಸ. ಆಯುಕ್ತೆ ಮಂಜುಶ್ರೀ ವಹಿಸಿದ್ದರು.
ಪಿಡಿಒ ವರ್ಗಾವಣೆ; ಪ್ರತಿಭಟನೆ
ಮಸ್ಕಿ: ಸಮೀಪದ ಅಂಕುಶದೊಡ್ಡಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ವರ್ಗಾವಣೆ ವಿರೋಧಿಸಿ ಗ್ರಾಪಂ ವ್ಯಾಪ್ತಿಯ 6 ಹಳ್ಳಿಗಳ ಗ್ರಾಮಸ್ಥರು ಪ್ರವಾಸಿ ಮಂದಿರದಿಂದ ಶಾಸಕರ ಕಾರ್ಯಾಲಯದವರೆಗೆ ಶುಕ್ರವಾರ ಪ್ರತಿಭಟನೆ ನಡೆಸಿದರು. ಶಾಸಕರ ಕಾರ್ಯಾಲಯದ ಮುಂದೆ ಧರಣಿ ನಡೆಸಿದ ಹೋರಾಟಗಾರರು, ಗ್ರಾಪಂ ಪಿಡಿಒ ವರ್ಗಾವಣೆ ರದ್ದುಗೊಳಿಸುವಂತೆ ಶಾಸಕರನ್ನು ಒತ್ತಾಯಿಸಿದರು. ಶಾಸಕ ಪ್ರತಾಪಗೌಡ ಪಾಟೀಲ್ ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು. ಶಂಭಣ್ಣ ಅಂಕುಶದೊಡ್ಡಿ, ಅರ್ಚಪ್ಪ ಮುದಬಾಳ, ಬೆಂಜುಮನ್ ಮುದಬಾಳ, ಸುಭಾಸ್ ಮುದಬಾಳ ಇದ್ದರು.
ವಿದ್ಯುತ್ ವ್ಯತ್ಯಯ
ರಾಯಚೂರು: ತುರ್ತು ಕಾಮಗಾರಿ ಹಿನ್ನೆಲೆ ನಗರದ ವಿವಿಧೆಡೆ ಆ.3ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ. ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಗರದ ನಿಜಲಿಂಗಪ್ಪ ನಗರ, ವೆಂಕಟೇಶ್ವರ ಕಾಲನಿ, ಮಾರೆಮ್ಮ ಗುಡಿ, ಬಂದೆನವಾಜ್ ಕಾಲನಿ, ದೇವರಾಜ್ ಅರಸ್ ಕಾಲನಿ, ಬಸವೇಶ್ವರ ಕಾಲನಿ, ಮಹಾರಾಣಾ ಪ್ರತಾಪ ಕಾಲನಿ, ವಿವೇಕಾನಂದ ನಗರ, ನಿಜಾಮುದ್ದಿನ್ ಕಾಲನಿ, ಹೊಸೂರು, ಲಿಂಗಸ್ಗೂರು ರಸ್ತೆ, ಚೆಕ್ಪೋಸ್ಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.