ರಾಯಚೂರು

ಸಿಂಧನೂರು; ಶುಭಾಶಯ ವಿನಿಮಯ

Published On :

ಕನ್ನಡಪ್ರಭ ವಾರ್ತೆ ,  ಸಿಂಧನೂರು ,  ಆ.9
ನಗರ ಸೇರಿದಂತೆ ತಾಲೂಕಿನಾದ್ಯಂತ ಸಡಗರ ಮಧ್ಯೆ ರಂಜಾನ್ ಹಬ್ಬವನ್ನು ಆಚರಿಸಲಾಯಿತು. ಕಳೆದ ಒಂದು ತಿಂಗಳಿಂದ ಮುಸ್ಲಿಮರು ಉಪವಾಸ ವ್ರತ ಆಚರಿಸಿದ್ದರು. ಪವಿತ್ರ ಶುಕ್ರವಾರದಂದು ನಗರದ ಬಪ್ಪೂರ್ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ನಗರದ ಹಾಗೂ ತಾಲೂಕಿನ ತುರ್ವಿಹಾಳ, ಸಾಲುಗುಂದಾ, ಜವಳಗೇರಾ, ಸುಲ್ತಾನಪುರ, ಮುಕ್ಕುಂದ, ಗುಂಜಳ್ಳಿ, ತಿಮ್ಮಾಪುರ, ಬಪ್ಪೂರ್ ಮತ್ತಿತರ ಗ್ರಾಮಗಳ ಮುಖಂಡರು ಬಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಮುಸ್ಲಿಂ ಧರ್ಮಗುರು ನಸೀರ್ ಖತೀಬ್ ರಂಜಾನ್ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಕೆಜೆಪಿ ಮುಖಂಡ ರಾಜಶೇಖರ ಪಾಟೀಲ್, ಜಿಪಂ ಮಾಜಿ ಸದಸ್ಯ ಕೆ.ಕರಿಯಪ್ಪ, ತಹಸೀಲ್ದಾರ್ ಬಿ.ಟಿ. ಕುಮಾರಸ್ವಾಮಿ, ಬಸವಕೇಂದ್ರ ಅಧ್ಯಕ್ಷ ಗುಂಡಪ್ಪ ಬಳಿಗಾರ, ನಗರಸಭೆ ಸದಸ್ಯರಾದ ಜಾಫರ್ ಜಾಗೀರದಾರ್, ಮಹ್ಮದ್ ಎಕ್ಬಾಲಸಾಬ್, ಪ್ರಭುರಾಜ, ಹಾಜಿ ಮಸ್ತಾನ್, ನನ್ನುಸಾಬ್ ಮೇಸ್ತ್ರಿ, ಎಪಿಎಂಸಿ ಅಧ್ಯಕ್ಷ ಸಣ್ಣಕರಿಯಪ್ಪ ಹರೇಟನೂರು, ಜಿಪಂ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಜೆಡಿಎಸ್ ತಾಲೂಕಧ್ಯಕ್ಷ ಎಂ.ಲಿಂಗಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ದೊಡ್ಡಬಸವರಾಜ, ಕೊಪ್ಪಳ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಬಸನಗೌಡ ಬಾದರ್ಲಿ, ತಾಲೂಕ ಯುವ ಕಾಂಗ್ರೆಸ್ ಅಧ್ಯಕ್ಷ ಮುರ್ತುಜಸಾಬ್, ಪುರಸಭೆ ಮಾಜಿ ಸದಸ್ಯ ಶಿವಕುಮಾರ ಜವಳಿ, ಅಲ್ಲಮಪ್ರಭು, ಸಂಜಯ್ ಪಾಟೀಲ್, ಗಂಗಾಧರ ಹೂಗಾರ, ಯುವ ಬಸವಕೇಂದ್ರ ಕಾರ್ಯದರ್ಶಿ ಶ್ರೀನಿವಾಸ ನಾಯಕ ದಿದ್ದಿಗಿ, ಹನುಮಂತಪ್ಪ ಮುದ್ದಾಪೂರ, ಅಖಿಲ ಭಾರತ ವೀರಶೈವ ಯುವ ಅಧ್ಯಕ್ಷ ಶಿವರಾಜ್ ಪಾಟೀಲ್ ಗುಂಜಳ್ಳಿ, ಕನಕ ಯುವಸೇನಾಧ್ಯಕ್ಷ ಹನುಮೇಶ ಬಾಗೋಡಿ, ಖಾಜಿ, ಶಬ್ಬೀರ್, ರಶೀದ್ ಎತ್ಮಾರಿ, ವಲಿಕೋಟಿ, ಹಾಗೂ ಮುಸ್ಲಿಮರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.