ರಾಯಚೂರು

'ನೌಕರರ ಭವನಕ್ಕೆ ಅಗತ್ಯ ನೆರವು'

Published On :

ಸಿಂಧನೂರು: ಸಿಂಧನೂರಿನಲ್ಲಿ ಉದ್ದೇಶಿತ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಜಿಲ್ಲಾ ಸಂಘದಿಂದ ಅಗತ್ಯ ನೆರವು ನೀಡುವದಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಯಚೂರು ಜಿಲ್ಲಾಧ್ಯಕ್ಷ ಮಹಿಬೂಬ್ ಪಾಷಾ ಮೂಲಿಮನಿ ಭರವಸೆ ನೀಡಿದರು.
ತಾಪಂ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸಕಾ ರಿ ನೌಕರರ ಸಂಘದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮುಂದಿನ ದಿನಗಳು ಸರ್ಕಾರಿ ನೌಕರರಿಗೆ ಸವಾಲುಗಳಾಗಿವೆ.  
 371(ಜೆ) ಕಲಂ ಜಾರಿಯಾಗಲಿದ್ದು, ನೌಕರರು ಸಾರ್ವಜನಿಕರ ಜೊತೆಗೆ ಹೆಚ್ಚು ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕಾಗಿರುವದರಿಂದ ತಮ್ಮ ಕರ್ತವ್ಯ ನಿಷ್ಠೆ ಮೆರೆಯಬೇಕಿದೆ.  ಸಂಘದ ನೂತನ ನಿರ್ದೇಶಕರು ತುಂಬಾ ಉತ್ಸಾಹಿಗಳಾಗಿದ್ದಾರೆ. ನೌಕರರ ಸಮಸ್ಯೆಗಳ ಸ್ಪಂದನೆ ಮಾಡುವ ಜೊತೆಯಲ್ಲಿ ಮಾದರಿ ಸಂಘವನ್ನು ಕಟ್ಟಬೇಕೆಂದು ಕರೆ ನೀಡಿದರು.
ನೂತನ ತಾಲೂಕಾಧ್ಯಕ್ಷ ಚಂದ್ರಶೇಖರ ಹಿರೇಮಠ ಮಾತನಾಡಿ, ಸಿಂಧನೂರಿನಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣದ ಗುರಿಯನ್ನು ಹೊಂದಲಾಗಿದ್ದು, ಎಲ್ಲರೂ ನನ್ನೊಂದಿಗೆ ಕೈ ಜೋಡಿಸಬೇಕು. ಪ್ರತಿ ತಿಂಗಳು ಸಭೆ ನಡೆಸಲಾಗುವದು. ಸಂಘಟನೆಯೊಂದಿಗೆ ನೌಕರರ ಹಿತ ಕಾಯಲು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ರಾಜ್ಯ ಪರಿಷತ್ ಸದಸ್ಯ ರಂಗನಾಥ ಗುಡಿ, ಜಿಲ್ಲಾ ಖಜಾಂಚಿ ಲಕ್ಷ್ಮಪ್ಪ, ತಾಲೂಕಾ ಘಟಕದ ಗೌರವಾಧ್ಯಕ್ಷ ಎಚ್. ರಾಮಣ್ಣ, ಉಪಾಧ್ಯಕ್ಷ ಮಹ್ಮದ್ ನೂರ್ ಅಲಿ, ಶಾಂತಪ್ಪ ಅಗಸಿಬಾಳ, ಲಿಂಗಪ್ಪ, ಖಜಾಂಚಿ ಹನುಮಂತಪ್ಪ, ಪ್ರಧಾನ ಕಾರ್ಯದರ್ಶಿ ಜಗದೀಶ ಓತೂರು. ಮಾಜಿ ಅಧ್ಯಕ್ಷ ಭೋಜನಗೌಡ ಮಾಲಿಪಾಟೀಲ್ ಇದ್ದರು. ಶರಣಬಸವಯ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಲ್ಲಪ್ಪ ಬಾದರ್ಲಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.