24ರಿಂದ ಕಾನೂನು ಕಾರ್ಯಾಗಾರ ಆರಂಭ
ಸಿಂಧನೂರು: ಕರ್ನಾಟಕ ರಾಜ್ಯ ವಕೀಲರ ಪರಿಷತ್, ತಾಲ್ಲೂಕ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಆ.24ರಿಂದ ಕಾನೂನು ಕಾರ್ಯಾಗಾರ ಆರಂಭಗೊಳ್ಳಲಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಕೆ. ಭೀಮನಗೌಡ, ಕಾರ್ಯದರ್ಶಿ ಹನುಮೇಶ ಕೊಡ್ಲಿ ತಿಳಿಸಿದ್ದಾರೆ.
ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ಆ. 24ರಿಂದ 26ರವರಗೆ ಮೂರು ದಿನಗಳ ಕಾಲ ಕಾರ್ಯಗಾರ ನಡೆಯಲಿದ್ದು 24ರಂದು ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಮುನಿಯಪ್ಪ ಕಾರ್ಯಗಾರವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ್ಞಷ್ಣಭಟ್, ಅತಿಥಿಗಳಾಗಿ ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಸಂಧ್ಯಾ ಮದನೂರು, ಅನಿಲ್ ಜೆ.ಎಂ., ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಆರ್.ವೈ. ಶಶಿಧರ್, ಕಿರಿಯ ಶ್ರೇಣಿ ನ್ಯಾಯಾಧೀಶೆ ಬಿ.ಎಸ್. ರಾಯಣ್ಣವರ್ ಪಾಲ್ಗೊಳ್ಳುವರು. ಸಂಸದ ಶಿವರಾಮಗೌಡ, ಶಾಸಕರಾದ ಹಂಪನಗೌಡ ಬಾದರ್ಲಿ, ಪ್ರತಾಪಗೌಡ ಪಾಟೀಲ್, ಎಂಎಲ್ಸಿಗಳಾದ ಅಮರನಾಥ ಪಾಟೀಲ್, ಹಾಲಪ್ಪಾಚಾರ್, ತಹಶೀಲ್ದಾರ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜಾ ಪಾಂಡುರಂಗ ನಾಯಕ ಭಾಗವಹಿಸುವರು. ಪ್ರತಿದಿನ ವಿವಿಧ ಗೋಷ್ಠಿಗಳು, ಅನುಭವಿ ನ್ಯಾಯವಾದಿಗಳಿಂದ ಉಪನ್ಯಾಸಗಳು ನಡೆಯುವವು. ಗೋಷ್ಠಿಗಳಿಗೆ ತಪ್ಪದೆ ನ್ಯಾಯವಾದಿಗಳು ಆಗಮಿಸಬೇಕೆಂದು ಕೋರಿದ್ದಾರೆ.
ಡಿವಿಜಿ ಅಧ್ಯಯನ ಪೀಠ ಸ್ಥಾಪನೆಯಾಗಲಿ
ಗುರುಮಠಕಲ್: ಕನ್ನಡ ಸಾಹಿತ್ಯದಲ್ಲಿ ಮೇರುಸಾಧನೆಗೈದ ಡಿವಿಜಿ ಅವರ ಕೃತಿಗಳ ಸಮಗ್ರ ಅಧ್ಯಯನಕ್ಕಾಗಿ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಡಿವಿಜಿ ಅಧ್ಯಯನ ಪೀಠ ಸ್ಥಾಪನೆಯಾಗಬೇಕಾಗಿದೆ ಎಂದು ಪುಟಪಾಕ್ ಶಾಲೆಯ ಶಿಕ್ಷಕ ವಿರೂಪಾಕ್ಷಪ್ಪ ಕೋರಿ ಆಗ್ರಹಿಸಿದರು. ತಾಲೂಕಿನ ಗಾಜರಕೋಟ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ವಲಯ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಶಾಲೆಯ ಇಕೋ ಕ್ಲಬ್ ಆಶ್ರಯದಲ್ಲಿ ಆಯೋಜಿಸಿದ ಗಡಿನಾಡಲ್ಲಿ ಕನ್ನಡದ ಕಂಪು ಮಾಸಿಕ ಸರಣಿ ಕಾರ್ಯಕ್ರಮದ 3ನೇ ಉಪನ್ಯಾಸಕ ಮಾಲಿಕೆಯಲ್ಲಿ ಡಿವಿಜಿಯ ಮಂಕುತಿಮ್ಮನ ಕಗ್ಗ ಒಂದು ವಿಮರ್ಶೆ ಕುರಿತು ಉಪನ್ಯಾಸ ನೀಡಿದರು. ಡಿವಿಜಿಯವರ ಅಮೂಲ್ಯ ಕೃತಿ ಮಂಕ್ಕುತಿಮ್ಮನ ಕಗ್ಗ ಇಂಗ್ಲಿಷ್ ಭಾಷೆಗೆ ಅನುವಾದವಾಗಿದ್ದಾರೆ ಆ ಕೃತಿಗೆ ನೋಬಲ್ ಪ್ರಶಸ್ತಿ ಸಿಗುವ ಅವಕಾಶವಿತ್ತು. ಅಷ್ಟು ಪರಿಣಾಮಕಾರಿಯಾಗಿ ಅಮೂಲ್ಯವಾದ ಮಾರ್ಗದರ್ಶನ ನೀಡಿದ್ದಾರೆ. ಈ ಕೃತಿಯನ್ನು ಎರಡನೇ ಭಗವ್ದಗೀತೆ ಎಂದೇ ಪ್ರಖ್ಯಾತವಾಗಿದೆ. ಮಂಕುತಿಮ್ಮನ ಕಗ್ಗ ನಾಲ್ಕು ಸಾಲುಗಳಲ್ಲಿ ಪ್ರತಿಯೊಬ್ಬರ ಜೀವನ ದರ್ಶನವನ್ನು ಪ್ರತಿಬಿಂಬಿಸಿದ ಅದ್ಭುತ ಕೃತಿಯಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

