ಇಬ್ಬರು ಬಾಲಾಪರಾಧಿಗಳ ಬಂಧನ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಆ.20
ಚಿತ್ತಾಪುರ ತಾಲೂಕಿನ ರಾವೂರ ಮನೆಯೊಂದರ ವೆಂಟಿಲೇಟರ್ (ಬೆಳಕಿಂಡಿ) ನಿಂದ ಮನೆಯೊಳಗೆ ಇಳಿದು 4 ಲಕ್ಷ ಮೌಲ್ಯದ ಬಂಗಾರದ ಒಡವೆಗಳನ್ನು ದೋಚಿದ್ದ ಇಬ್ಬರ ಬಾಲಕರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಎಸ್ಎಲ್ಸಿ ಓದುತ್ತಿರುವ ಬಾಲಾಪರಾಧಿಗಳು ರಾವೂರದಲ್ಲಿ ಬಸವರಾಜ ಜಾಡರ ಎಂಬುವರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಮಾಳಿಗೆಯಿಂದ ಕೆಳೆಗೆ ಇಳಿದು ಅಲಮಾರಿಯಲ್ಲಿದ್ದ 4 ಲಕ್ಷ ಮೌಲ್ಯದ ಬಂಗಾರದ ಒಡವೆಗಳನ್ನು ದೋಚಿದ್ದರು.
ಈ ಬಗ್ಗೆ ವಾಡಿ ಪೊಲೀಸ್ ಠಾಣೆಯಲ್ಲಿ ಬಸವರಾಜ ಜಾಡರ ದೂರು ಸಲ್ಲಿಸಿದ್ದರು. ಎಸ್ಪಿ, ಹೆಚ್ಚುವರಿ ಎಸ್ಪಿ, ಡಿಎಸ್ಪಿ ಸೂರ್ಯವಂಶಿ ಅವರ ಮಾರ್ಗದರ್ಶನದಲ್ಲಿ ಚಿತ್ತಾಪುರ ಸಿಪಿಐ ಚಂದ್ರಕಾಂತ ಪೂಜಾರಿ ನೇತೃತ್ವದಲ್ಲಿ ಪಿಎಸ್ಐ ಎಚ್.ಆರ್. ನಡಗಡ್ಡಿ, ವೆಂಕಟ ಹಾಗೂ ಪ್ರಭು ಸೇರಿ ತನಿಖೆ ನಡೆಸಿ ರಾವೂರ ಮಠದಲ್ಲಿ ಓದುತ್ತಿರುವ ಬಾಲಾಪರಾಧಿಗಳನ್ನು ಬಂಧಿಸಿ ಅವರಿಂದ 4 ಲಕ್ಷ ಮೌಲ್ಯದ ಬಂಗಾರದೊಡವೆ ಜಪ್ತಿ ಮಾಡಿದ್ದಾರೆ.
ಬಂಧಿತ ಬಾಲಾಪರಾಧಿಗಳು ಈ ಹಿಂದೆ ಅದೇ ಮನೆಯಲ್ಲಿ ವೆಂಟಿಲೇಟರ್ನಿಂದ ಕೆಳೆಗಿಳಿದು ಮನೆಯಲ್ಲಿಯ ನಗದು ಹಣವನ್ನು ಎರಡು- ಮೂರು ಸಲ ದೋಚಿದ್ದಾರೆಂದು ಮನೆಯವರು ಇದನ್ನು ಅಷ್ಟಾಗಿ ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನಲಾಗಿದ್ದು, ಈಗ ದೊಡ್ಡ ಪ್ರಮಾಣದ ಕಳ್ಳತನ ಮಾಡಿ ಸಿಕ್ಕಿ ಬಿದ್ದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

