ರಾಯಚೂರು

ಸಂಶೋಧನೆಗಳು ಭವಿಷ್ಯ ಬಾಗಿಲು

Published On :

ಕ.ಪ್ರ. ವಾರ್ತೆ  ಬೀದರ್  ಆ.29
ಆಧುನಿಕ ಜಗತ್ತು ಕ್ರಿಯಾತ್ಮಕ ಜ್ಞಾನದ ಆಗರವಾಗಿದೆ. ಸಾಂಪ್ರಾದಾಯಕ ವಿಜ್ಞಾನವನ್ನು ಛೇದಿಸಿಕೊಂಡು ಕ್ರಿಯಾತ್ಮಕ ಗುರಿ, ಹೊಸ ಸಂಶೋಧನೆ ಅವಿಷ್ಕಾರಗಳು ಭವಿಷ್ಯದ ಬಾಗಿಲುಗಳಾಗಿವೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಮಾಜಿ ಕುಲಪತಿ ಹಾಗೂ ಬಿಎಲ್‌ಡಿ ವಿಶ್ವವಿದ್ಯಾಲಯ ಬಿಜಾಪೂರನ ಹಾಲಿ ಕುಲಪತಿ ಡಾ. ಬಿ.ಜಿ.ಮೂಲಿಮನಿ ತಿಳಿಸಿದರು.
  ನಗರದ ಕರ್ನಾಟಕ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿಭಾಗ ಗುರುವಾರ ಹಮ್ಮಿಕೊಂಡಿದ್ದ ಯುಜಿಸಿ ಪ್ರಾಯೋಜಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವೈಚಾರಿಕ ಕ್ರಾಂತಿ ಇಂದಿನ ಪೀಳಿಗೆಯ ಮುಂದಿರುವ ಸವಾಲು, ಸಂಶೋಧನಾತ್ಮಕ ಜ್ಞಾನದೊಂದಿಗೆ ಬದುಕಲೇ ಬೇಕಾಗಿದೆ.
  ಸಾಂಪ್ರಾದಾಯಿಕ ಹಾಗೂ ಅಸಾಂಪ್ರಾದಾಯಕ ವಿಜ್ಞಾನ ಸಂಶೋಧನೆಯ ಅಳಿವು-ಉಳಿವುವಿನ ಪ್ರಶ್ನೆಯಾಗಿದೆ. ಹೊಸ ತಂತ್ರಜ್ಞಾನದಲ್ಲಿ ಕ್ಷಿಪ್ರ ಕ್ರಾಂತಿ ನಡೆದಿದೆ. ಯೋಚಿಸಿ, ಆಲೋಚಿಸಿ, ಮುನ್ನುಗ್ಗಿ ಎಂದು ತಮ್ಮ ಮಾತಿನಿಂದ ವಿದ್ಯಾರ್ಥಿ ಹಾಗೂ ಶಿಕ್ಷಕರಲ್ಲಿ ವೈಜ್ಞಾನಿಕ ಕ್ರಾಂತಿಯನ್ನು ಮೂಲಿಮನಿ ಅಂಕುರಿಸಿದರು.
  ಕರಾಶಿ ಸಂಸ್ಥೆಯ ಅಧ್ಯಕ್ಷ ಡಾ.ಬಸವರಾಜ ಜಿ. ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಮೈಕ್ರೋಕಂಟ್ರೋಲರ್‌ಗಳಿದ್ದಂತೆ. ನಮ್ಮ ಮಹಾವಿದ್ಯಾಲಯದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಕರಿದ್ದು, ಸೆಮಿನಾರ್, ಕಾರ್ಯಾಗಾರ, ವಿಚಾರ ಸಂಕೀರ್ಣ ಆಯೋಜಿಸುವ ಮೂಲಕ ಜ್ಞಾನದ ಹೊಳೆ ಹರಿಸುತ್ತಿದ್ದಾರೆ. ಶಿಕ್ಷಕ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಕಾರ್ಯಾಗಾರದ ಲಾಭ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
  ಗುಲ್ಬರ್ಗ ವಿಶ್ವವಿದ್ಯಾಲಯ ಎಲೆಕ್ಟ್ರಾನಿಕ್ಸ್ ಪ್ರಾಧ್ಯಾಪಕ ಡಾ. ಎಸ್.ಎನ್. ಮೂಲಗಿ ಪ್ರಾಸ್ತಾವಿಕ ಮಾತನಾಡಿ, ಮೈಕ್ರೋಕಂಟ್ರೋಲರ್‌ಗಳ ಉಗಮ, ವಿಕಾಸ, ಬಳಕೆ ಕುರಿತು ಮಹತ್ವದ ಮಾಹಿತಿ ನೀಡಿದರು.
  1972ರಲ್ಲಿ ಅಮೆರಿಕದ ಇಂಟೆಲ್ ಕಂಪನಿ 8-ಬಿಟ್ ಮೈಕ್ರೋ ಪ್ರೊಸೆಸರ್ ತಯಾರಿಸಿತು, ಟಿಎಂಸಿ, ಮೋಟೋರೋಲಾ, ಝೀಲಾಗ್ ಕಂಪನಿಗಳು, ಮೈಕ್ರೋಕಂಟ್ರೋಲ್‌ರಗಳನ್ನು ವಿಕಾಸಗೊಳಿಸಿದವು.  ಉತ್ತಮ ಸಾಮರ್ಥ್ಯ, ಮಲ್ಟಿಕೋರ್ ಸಿಪಿಯು, ಶಕ್ತಿ ಉಳಿತಾಯ, ಅತಿ ವೇಗ ಪ್ರವಾಹ, ಸಂಚಾರಿ ಚಾನೆಲ್ ಸಹಾಯಕ ಮುಂತಾದ ವಿಶಿಷ್ಟ ಲಕ್ಷಣಗಳು ಹೊಂದಿವೆ ಎಂದರು.
  ವೈದ್ಯಕೀಯ ಉಪಕರಣ, ತಪಾಸಣೆ ಉಪಕರಣ, ಮಾನಿಟರಿಂಗ್ ಕಂಟ್ರೋಲ್ ಉಪಕರಣ, ಸಿಗ್ನಲ್ ವಾಹಕ, ಗ್ರಹ, ಗ್ರಾಹಕ, ಹಾಗೂ ಔದ್ಯೋಗಿಕ ಉಪಕರಣಗಳಲ್ಲಿ ಅಧುನಿಕ ಮೈಕ್ರೋಕಂಟ್ರೋಲರ್‌ಗಳು ಸಮರ್ಪಕವಾಗಿ ಬಳಕೆಯಾಗಲಿವೆ ಎಂದು ಮನವರಿಕೆ ಮಾಡಿದರು.
  ಡಾ. ಚನ್ನಬಸಪ್ಪ ಹಾಲಹಳ್ಳಿ, ಮಲ್ಲಿಕಾರ್ಜುನ್ ಪ್ರಭಾ ಆಂಧ್ರ, ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದರು. ಪ್ರಾಚಾರ್ಯ ವಿಜಯಕುಮಾರ ಗಂಗೂ ಸ್ವಾಗತಿಸಿದರು. ಡಾ. ಬಿ.ಎಸ್. ಬಿರಾದಾರ, ಪ್ರೊ. ಅನಿಲಕುಮಾರ ಚಿಕಮಣೂರ ಹಾಗೂ ಸುರೇಶ ಮಾಶೆಟ್ಟಿ ಅತಿಥಿಗಳ ಪರಿಚಯ ನೀಡಿದರು. ಪ್ರೊ. ಶಾಮಕಾಂತ ಕುಲಕರ್ಣಿ ನಿರೂಪಿಸಿದರು. ಪ್ರೊ. ರಾಜೇಂದ್ರ ಬಿರಾದಾರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.