ರಾಯಚೂರು

ಗ್ರಾಮೀಣರಿಗೆ ಆರ್ಥಿಕ ಬಲ ನೀಡಿ

Published On :

ರಾಯಚೂರು: ನಗರದಲ್ಲಿ ಬುಧವಾರ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ನ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನೂತನ ಕಟ್ಟಡ ಕಾಮಗಾರಿಗೆ ಅಡಿಗಲ್ಲು ನೆರವೇರಿಸಲಾಯಿತು.
ನಗರದ ಆಶಾಪುರ ರಸ್ತೆಯಲ್ಲಿ ನಡೆದ ಸಮಾರಂಭದಲ್ಲಿ ಭೂಮಿಪೂಜೆ ಮತ್ತು ಶಂಕುಸ್ಥಾಪನೆಯನ್ನು ಬ್ಯಾಂಕಿನ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ. ವಿ. ಸುರೇಶಬಾಬು ಮತ್ತು ಜಿಪಂ ಸಿಇಒ ಡಾ. ಮುದ್ದುಮೋಹನ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸಿಇಒ ಡಾ. ಮುದ್ದುಮೋಹನ್, ಸಂಸ್ಥೆಯು ಗ್ರಾಮೀಣರ ಬದುಕಿಗೆ ಆರ್ಥಿಕ ಭದ್ರತೆ ಕಲ್ಪಿಸುವತ್ತ ಪೂರಕವಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.
ಬ್ಯಾಂಕಿನ ಹೈದರಾಬಾದ್ ಕೇಂದ್ರ ಕಾರ್ಯಾಲಯದ ಪ್ರಧಾನ ವ್ಯವಸ್ಥಾಪಕ ಎಸ್. ವೆಂಕಟರಾಮನ್, ಬೆಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕ ಬಿ.ಕೆ. ಶಿವರಾಂ, ಉಪಪ್ರಧಾನ ವ್ಯವಸ್ಥಾಪಕ ಎಸ್.ಕೆ. ನಿಗಂ, ಗುಲ್ಬರ್ಗ ವಲಯದ ಉಪ ಪ್ರಧಾನ ವ್ಯವಸ್ಥಾಪಕ ಎಲ್.ವಿ. ರವೀಂದ್ರಕುಮಾರ, ರಾಯಚೂರು ಪ್ರಾದೇಶಿಕ ಕಾರ್ಯಾಲಯದ ಸಹಾಯಕ ಪ್ರಧಾನ ವ್ಯವಸ್ಥಾಪಕ ಕೆ. ಮುರಳಿ ಪಾಲ್ಗೊಂಡಿದ್ದರು.
ಬ್ಯಾಂಕಿನ ಅಧಿಕಾರಿಗಳ ಸಂಘದ (ಎಬಿಒಎ) ಸಹಾಯಕ ಕಾರ್ಯದರ್ಶಿಗಳಾದ ಪದ್ಮನಾಭ ಮಠ, ಸದಸ್ಯರಾದ ಅಶೋಕ ಹೆಗಡೆ, ಎಸ್‌ಬಿಎಚ್ ಸಿಬ್ಬಂದಿ ಸಂಘದ ಅಧ್ಯಕ್ಷ ನಾರಾಯಣರಾವ್, ಸದಸ್ಯ ಮದನಮೋಹನ, ಜಿಲ್ಲಾ ಅಗ್ರ ಬ್ಯಾಂಕ್ ಅಧಿಕಾರಿ ಶೇಖರಗೌಡ ಸರನಾಡಗೌಡರ್, ಮುಖ್ಯ ವ್ಯವಸ್ಥಾಪಕ ಸಿ.ಎಚ್. ಹವಾಲ್ದಾರ್, ಆರ್.ಜಿ. ಹೆಬ್ಬಾಳಕರ್, ಬಿ. ಮನ್ನಾರಾಯಣರೆಡ್ಡಿ, ಬಾಬು ಬಳಗಾನೂರ್ ಮತ್ತು ಇತರ ಅಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.