ರಾಯಚೂರು

ಆಧುನಿಕತೆಯಿಂದ ಸಂಬಂಧ ಛಿದ್ರ

Published On :

ಸಿಂಧನೂರು: ಹಿಂದಿನ ತಲೆಮಾರಿನ ಜನರು ತುಂಬು ಕುಟುಂಬದಲ್ಲಿ ಒಗ್ಗಟ್ಟಿನಿಂದ ಹಿರಿಯರ ಮಾರ್ಗದರ್ಶನದಂತೆ ಜೀವಿಸುತ್ತಿದ್ದರು. ವಿವಿಧ ಸಂಬಂಧಗಳೊಂದಿಗೆ ಒಂದೇ ಸೂರಿನಡಿ ಒಟ್ಟಾಗಿ ಬಾಳುತ್ತಿದ್ದರು ಎಂದು ಕಸಾಪ ಮಾಜಿ ಅಧ್ಯಕ್ಷ ವೆಂಕನಗೌಡ ವಟಗಲ್ ಅಭಿಪ್ರಾಯ ವ್ಯಕ್ತಪಡಿಸಿದರು.
ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ಪುನವಸತಿ ಕೇಂದ್ರ ಅರಗಿನಮರ ಕ್ಯಾಂಪ್ನಲ್ಲಿ ಹಮ್ಮಿಕೊಂಡಿರುವ 2013-14ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ “d«Ú®Ú¥Ú ಸಾಹಿತ್ಯದಲ್ಲಿ ಜೀವನ ÈÚáèÄÀVÚ×Úß’ ವಿಷಯದ ಕುರಿತು ಮಾತನಾಡಿದರು.
ದುರಾದೃಷ್ಟವಶಾತ್ ಇಂದಿನ ದಿನಗಳಲ್ಲಿ ಮಾಧ್ಯಮ, ಮೊಬೈಲ್, ಸಿನಿಮಾ, ಪಾಶ್ಚಾತ್ಯೀಕರಣಗಳ ಪ್ರಭಾವದಿಂದ ಸಂಸ್ಕಾರಗಳು ಕಣ್ಮರೆಯಾಗುತ್ತಿವೆ ಎಂದು ವಿಷಾದಿಸಿದರು. ವಿ.ಸಿ. ಪಾಟೀಲ್ ಚುಟುಕು, ಶಾಹರಿ, ನಗೆಹನಿಗಳನ್ನು ಹೇಳಿದರು.
ಗ್ರಾಮದ ಮುಖಂಡರಾದ ನೀರುಬಳಕೆದಾರರ ಸಂಘದ ಕಾರ್ಯದರ್ಶಿ ವಿಶ್ವನಾಥ ಬಾಲಕಿಯರ ಸ.ಪ.ಪೂ.ಕಾ. ಪ್ರಾಚಾರ್ಯ ಶರಣಪ್ಪ ನೆಟೆಕಲ್, ಶಿಕ್ಷಕ ನಾಗರಾಜ ಮಾಂಡ್ರೆ, ಗೋಪಾಲಕೃಷ್ಣ, ರಾಮಸುಬ್ಬರೆಡ್ಡಿ, ನಾರಾಯಣರೆಡ್ಡಿ ಭಾಗವಹಿಸಿದ್ದರು.
  ವಿರುಪನಗೌಡ ಅಧ್ಯಕ್ಷತೆ ವಹಿಸಿದ್ದರು. ಕದಂಬರು ತಂಡದ ಶಿವಣ್ಣ ಪ್ರಾರ್ಥಿಸಿ, ವೀರೇಶ ದೇವರಮನೆ ನಿರೂಪಿಸಿ, ನಿಂಗಪ್ಪ ಸ್ವಾಗತಿಸಿ, ವೀರಭದ್ರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.