ಅಂತರ್ಧ್ವನಿ; ನಾಳೆ ನಾದ ವೈಭವ
ಸಿಂಧನೂರು: ನಗರದ ಅಂತರ್ಧ್ವನಿ ಬಳಗದಿಂದ ಡಿ.15ರಂದು ಕೊಳಲು ವಾದನ ಮತ್ತು ವಿಶೇಷ ನಾದ ವೈಭವ ಕಾರ್ಯಕ್ರಮ ಖ್ಯಾತ ಕೊಳಲು ವಾದಕ ಪದ್ಮನಾಭ ಇವರ ನೇತೃತ್ವದಲ್ಲಿ ಸತ್ಯ ಗಾರ್ಡನ್ನಲ್ಲಿ ಜರುಗುವುದು ಎಂದು ಲಯನ್ ಕ್ಲಬ್ ಅಧ್ಯಕ್ಷ ಗೌತಮ್ ಮೆಹ್ತಾ ತಿಳಿಸಿದರು.
ಆನಂದ್ ಪಬ್ಲಿಕ್ ಶಾಲೆಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಅಂದು ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಸಂಗೀತ ಕಾರ್ಯಕ್ರಮ ನಡೆಯುವುದು. ತಬಲಾ, ಘಟಂ, ಖಂಜೀರ ಸೇರಿದಂತೆ ಇನ್ನಿತರ ವಾದ್ಯಗಳ ನುರಿತ ವಾದಕರು ಸಂಗೀತ ರಸದೌತಣ ನೀಡಲಿದ್ದಾರೆ. ಇದೇ ಮೊದಲ ಬಾರಿಗೆ ಅತೀ ಹೆಚ್ಚಿನ ತಂಡದವರು ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.
ಕೊಳಲು ವಾದಕ ಪದ್ಮನಾಭ ಮಾತನಾಡಿ, ಸಂಗೀತದ ಮಹತ್ವ ಪ್ರತಿಯೊಬ್ಬರು ಅರ್ಥೈಸಿಕೊಳ್ಳುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ತಮ್ಮ 10 ಧ್ವನಿ ಮುದ್ರಣ ಕ್ಯಾಸೆಟ್ಗಳನ್ನು ಬಿಡುಗಡೆಗೊಳಿಸುವುದಾಗಿ ಹೇಳಿದರು. ಕಟ್ಟೆಪ್ಪ ಗುಂಜಳ್ಳಿ, ಚನ್ನಯ್ಯಸ್ವಾಮಿ, ವೀರಭದ್ರಗೌಡ ಮತ್ತಿತರರು ಇದ್ದರು.
ಇಂದು ಖರ್ಗೆ ಭೇಟಿ
ರಾಯಚೂರು: ಕೇಂದ್ರ ರೇಲ್ವೆ ಸಚಿವ ಡಾ.ಮಲ್ಲಿಕಾರ್ಜುನ ಖರ್ಗೆ ಡಿ.14ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ಅಂದು ಬೆಳಗ್ಗೆ 11.30ಕ್ಕೆ ವಿಶೇಷ ರೈಲಿನಲ್ಲಿ ರಾಯಚೂರು ತಾಲೂಕಿನ ಮಟಮಾರಿ ರೈಲು ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿ ಆಯೋಜಿಸಿರುವ ಮಟಮಾರಿ-ಮಂತ್ರಾಲಯಂ ರೋಡ್ ಜೋಡು ಮಾರ್ಗ ನಿರ್ಮಾಣ ಹಾಗೂ ತುಂಗಭದ್ರಾ ಸೇತುವೆಯ ವಿಸ್ತರಣೆ ಕಾಮಗಾರಿಯ ಅಡಿಗಲ್ಲು ನೆರವೇರಿಸಲಿದ್ದಾರೆ. ಮಧ್ಯಾಹ್ನ 1.30ಕ್ಕೆ ಅವರು ವಿಶೇಷ ರೈಲಿನಲ್ಲಿ ಗುಲ್ಬರ್ಗಕ್ಕೆ ಮರಳಿ ಪ್ರಯಾಣಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

